ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!
Team Udayavani, Jan 23, 2022, 10:45 PM IST
ಡಬ್ಲಿನ್ : ಐರ್ಲೆಂಡ್ ದೇಶದ ಕಾರ್ಲೊದಲ್ಲಿ ಸಿನಿಮೀಯ ಮಾದರಿಯ ಘಟನೆಯೊಂದು ನಡೆದಿದೆ. ಇಬ್ಬರು ವ್ಯಕ್ತಿಗಳು, ಮೃತ ವ್ಯಕ್ತಿಯ ಪಿಂಚಣಿ ಪಡೆದುಕೊಳ್ಳಲು, ಆತನ ಶವವನ್ನೇ ಕಾರ್ಲೊ ಅಂಚೆ ಕಚೇರಿಗೆ ಒಯ್ದಿದ್ದಾರೆ! ಶುಕ್ರವಾರ ಘಟನೆ ನಡೆದಿದೆ.
ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಮೃತ ಪೀಡರ್ ಡಾಯ್ಲರ ಪಿಂಚಣಿ ಪಡೆಯಲು ಇಬ್ಬರು ವ್ಯಕ್ತಿಗಳು, ಅಂಚೆ ಕಚೇರಿಗೆ ತೆರಳಿದ್ದಾರೆ. ಆಗ ಅಧಿಕಾರಿಗಳು ಸಂಬಂಧಪಟ್ಟ ವ್ಯಕ್ತಿ ಅಥವಾ ಅವರ ಕುಟುಂಬಸ್ಥರೇ ಸ್ಥಳಕ್ಕೆ ಬರಬೇಕು ಎಂದು ತಿಳಿಸಿದ್ದಾರೆ. ಮನೆಗೆ ತೆರಳಿದ ಇಬ್ಬರು ವ್ಯಕ್ತಿಗಳು, ಮುಖವೆಲ್ಲ ಮುಚ್ಚುವಂತೆ ಬಟ್ಟೆ ಹಾಕಿ, ತಲೆಗೆ ಟೋಪಿ ಹಾಕಿ ಡಾಯ್ಲರ ಶವವನ್ನು ರಸ್ತೆಯಲ್ಲಿ ಎಳೆದೊಯ್ದಿದ್ದಾರೆ!
ಅಂಚೆ ಅಧಿಕಾರಿಗಳಿಗೆ ಅನುಮಾನ ಬಂದು ಪ್ರಶ್ನಿಸಿದಾಗ, ಡಾಯ್ಲಗೆ ಹೃದಯಾಘಾತವಾಗಿದೆ ಎಂದು ವ್ಯಕ್ತಿಗಳು ತಿಳಿಸಿದ್ದಾರೆ. ಸದ್ಯ ಪೊಲೀಸರು ಡಾಯ್ಲ ಮೃತಪಟ್ಟಿದ್ದು ಯಾವಾಗ, ಇದರ ಹಿಂದೇನಿದೆ ಎಂದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕೇವಲ ಒಂದು ನಿಮಿಷಕ್ಕೆ 109 ಬಾರಿ ಪುಷ್‌ಅಪ್! ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ ಯುವಕ