ಮುಂದಿನ ವರ್ಷ “ಮಾಡೆರ್ನಾ’ ಸಿಂಗಲ್ ಡೋಸ್’ ಲಭ್ಯ
Team Udayavani, May 25, 2021, 10:08 PM IST
ನವದೆಹಲಿ: ದೇಶದಲ್ಲಿ ಮಾಡೆರ್ನಾದ ಸಿಂಗಲ್ ಡೋಸ್ ಲಸಿಕೆ ಮುಂದಿನ ವರ್ಷ ಸಿಗುವ ಸಾಧ್ಯತೆ ಇದೆ. ಫೈಜರ್ ಪ್ರಸಕ್ತ ವರ್ಷದಲ್ಲಿಯೇ ದೇಶಕ್ಕೆ 5 ಕೋಟಿ ಡೋಸ್ ಲಸಿಕೆ ನೀಡಲಿದೆ. ಆದರೆ, ಲಸಿಕೆಯಿಂದ ಪ್ರತಿಕೂಲ ಪರಿಣಾಮ ಉಂಟಾದಲ್ಲಿ ಕೊಡಬೇಕಾಗಿರುವ ನಷ್ಟ ಪರಿಹಾರ ಮತ್ತು ಇತರ ನಿಯಮಗಳಲ್ಲಿ ರಿಯಾಯಿತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಮಾಡೆರ್ನಾ ಕಂಪನಿ ಪ್ರಸಕ್ತ ವರ್ಷ ದೇಶಕ್ಕೆ ನೀಡಲು ಹೆಚ್ಚುವರಿ ಲಸಿಕೆ ಇಲ್ಲ. ಮುಂದಿನ ವರ್ಷ ಸಿಂಗಲ್ ಡೋಸ್ ಲಸಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ತಿಳಿಸಿದೆ. ಜತೆಗೆ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಲಸಿಕೆಯೂ ಪ್ರಸಕ್ತ ವರ್ಷ ಬರುವುದು ಅನುಮಾನ.
ಇದನ್ನೂ ಓದಿ :ಕೋವಿಡ್ ಪ್ರಕರಣ ಹೆಚ್ಚಳ : ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲು ಸಿಎಂ ಸೂಚನೆ
ಇದೇ ವೇಳೆ, ಅಮೆರಿಕದಲ್ಲಿ ನಡೆಸಿರುವ ಪ್ರಯೋಗದ ಪ್ರಕಾರ 12-17 ರ ವಯೋಮಾನ ದ ವ ರಿಗಾಗಿ ಇರು ವ ಮಾಡೆರ್ನಾ ಲಸಿಕೆ ಸೋಂಕಿನ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ದೃಢ ಪ ಟ್ಟಿ ದೆ.