ರೈತರ ಕಷ್ಟ ಕೇಳದ ಪ್ರಧಾನಿ ಮೋದಿ: ಡಿ.ಕೆ.ಶಿವಕುಮಾರ್
Team Udayavani, Oct 2, 2021, 10:36 PM IST
ಬೆಂಗಳೂರು: ರೈತರ ಸಂಕಷ್ಟಕ್ಕೆ ಎಂದೂ ಸ್ಪಂದಿಸದ ಗುಜರಾತ್ ಮೂಲದ ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಹೋರಾಟ ನಡೆಸಿದ್ದ ಮಹಾತ್ಮಾ ಗಾಂಧೀಜಿ ಅವರನ್ನು ತಮ್ಮವರು ಎಂದು ಬಿಂಬಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 10 ತಿಂಗಳುಗಳಿಂದ ರೈತರು ಗಾಂಧಿ ಆದರ್ಶವಾದ ಅಹಿಂಸೆ ಮೂಲಕ ಹೋರಾಟ ನಡೆಸುತ್ತಿದ್ದರೂ ಪ್ರಧಾನಿಯವರು ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ:ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ: ಸಿಎಂ
75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ “ಗಾಂಧೀಜಿ ಗ್ರಾಮ ಸ್ವರಾಜ್ಯ’ ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ಎಲ್ಲ ನಾಯಕರು 6000 ಪಂಚಾಯತ್‌ಗಳಲ್ಲಿ ಒಂದೊಂದು ಸಭೆ ಹಾಗೂ ಪ್ರತಿಭಟನೆ ನಡೆಸಲಿದ್ದಾರೆ. ಇದರಲ್ಲಿ ಕಾಂಗ್ರೆಸ್ ಇತಿಹಾಸ ಹಾಗೂ ಹೋರಾಟದ ಹಾದಿಯನ್ನು ಮೆಲುಕು ಹಾಕಲಾಗುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೆಟ್ ನೀಡಲು ಸ್ವಪಕ್ಷದಲ್ಲೇ ವಿರೋಧ
ಕಾಂಗ್ರೆಸ್ ಪಕ್ಷದ ನಾಲ್ಕನೇ ಗ್ಯಾರಂಟಿ ಕಾರ್ಡ್ ಬಿಡುಗಡೆಗೊಳಿಸಿದ ರಾಹುಲ್ ಗಾಂಧಿ
ಉರಿಗೌಡ,ನಂಜೇಗೌಡ ಹೆಸರು ರಾಜಕೀಯ ವಿಚಾರ ಆಗಬಾರದು: ಆರ್.ಅಶೋಕ್
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು: ಬಿ.ವೈ.ವಿಜಯೇಂದ್ರ
ಡಿಸಿ ಕಚೇರಿ ಮುಂದೆ ಆಜಾನ್ ವಿಚಾರ: ಹಿಂದೂ ಕಾರ್ಯಕರ್ತರಿಂದ ಗೋಮೂತ್ರ ಹಾಕಿ ಸ್ಥಳ ಶುದ್ದೀಕರಣ
MUST WATCH
ಹೊಸ ಸೇರ್ಪಡೆ
ಅಮೃತಪಾಲ್ ಗಾಗಿ ಶೋಧ; ಐದು ಸಹಚರರರ ವಿರುದ್ಧ NSA ; ಐಎಸ್‌ಐ ಪಾತ್ರ?
ಏನು ಹೇಳಿದರೂ ನಿನದೇ ಸರಿ …ಸಂಕಟ ಕಾಲದಲ್ಲಿ ಮತದಾರನೇ ವೆಂಕಟರಮಣ !
ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೆಟ್ ನೀಡಲು ಸ್ವಪಕ್ಷದಲ್ಲೇ ವಿರೋಧ
ಮಂಗಳೂರು: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ; ಆರೋಪಿ ಬಂಧನ
ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ