ಮಂಡ್ಯದ ಜನ ಮೋಸಕ್ಕೆ ಮರುಳಾಗದೇ ಪ್ರೀತಿಗೆ ಮರುಳಾದರು

ಅಂಬರೀಶ್‌ ಸಮಾಧಿ ಬಳಿ ಸಂಸದೆ ಸುಮಲತಾ ಸುದ್ದಿಗೋಷ್ಠಿ

Team Udayavani, May 24, 2019, 1:55 PM IST

ಬೆಂಗಳೂರು: ಮಂಡ್ಯದ ಜನರು ಮೋಸಕ್ಕೆ ಮರುಳಾಗದೆ ಪ್ರೀತಿಗೆಮರುಳಾದರು. ಹಣ ಚೆಲ್ಲಿ ಚುನಾವಣೆ ಮಾಡಿದರೂ ಜನರು ನಿರ್ಲಕ್ಷಿಸಿದರು ಎಂದು ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌ ಅವರು ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್‌ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಆ ಬಳಿಕ ಸುದ್ದಿಗೋಷ್ಠಿನಡೆಸಿ ಮಾತನಾಡಿದ ಸುಮಲತಾ, ನೆಗೆಟಿವ್‌ ರಾಜಕಾರಣಕ್ಕೆ ಮಂಡ್ಯದ ಜನರು ತಕ್ಕ ಪಾಠಕಲಿಸಿದ್ದಾರೆ. ನನ್ನನ್ನು ಅವಮಾನಿಸಿರುವವರಿಗೆ ಫ‌ಲಿತಾಂಶ ಆಶ್ಚರ್ಯ ತಂದಿದೆ
ಇದು ಮಂಡ್ಯದ ಸ್ವಾಭಿಮಾನದ ಗೆಲುವು ಎಂದರು.

ಕಾಂಗ್ರೆಸ್‌ ಟಿಕೆಟ್‌ ನೀಡುವಂತೆ ಕಾಂಗ್ರೆಸ್‌ ನಾಯಕರಲ್ಲಿ ಕೇಳಿದ್ದೆ, ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಟಿಕೆಟ್‌ ನೀಡಿದ್ದರೆ ಅನಾಯಾಸವಾಗಿ ಗೆಲುವು ಸಾಧಿಸುತ್ತಿದ್ದೆ ಎಂದರು.

ನನ್ನ ಮೊದಲ ಗುರಿ ಅಂಬರೀಶ್‌ ಅವರ ಕನಸನ್ನು ನನಸು ಮಾಡುವುದು. ಅವರ ಹಾದಿಯಲ್ಲೇ ಸಾಗುತ್ತೇನೆಎಂದರು.

ಜನರ ಪ್ರೀತಿಯಲ್ಲೇ ನಾನು ಅಂಬರೀಶ್‌ ಅವರನ್ನು ಕಾಣುತ್ತೇನೆ.ನಾನು ಮಂಡ್ಯದ ಜನರ ಅಭಿಪ್ರಾಯ ಕೇಳಿ ಸ್ಪರ್ಧಿಸಿದ್ದೆ. ಮಂಡ್ಯದ ಜನರ ಅಭಿಪ್ರಾಯ ಕೇಳಿಯೇ ಮುಂದುವರಿಯುತ್ತೇನೆ ಎಂದರು.

ಗೆಲುವಿನ ಬಳಿಕ ಕಾಂಗ್ರೆಸ್‌ , ಬಿಜೆಪಿ ನಾಯಕರು ಕರೆ ಮಾಡಿ ಶುಭ ಕೋರಿದ್ದಾರೆ ಎಂದರು.

ಸಮಾಧಿಗೆ ಪುಷ್ಟ ನಮನ ಸಲ್ಲಿಸುವ ವೇಳೆ ಸುಮಲತಾ ಭಾವುಕರಾದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ