ಅಪಾರ ಹಾನಿ ಮಾಡಿ ದುರ್ಬಲಗೊಂಡ ತೌಖ್ತೇ : ನೌಕೆಯಲ್ಲಿದ್ದ 96 ಮಂದಿ ನಾಪತ್ತೆ, ಹಲವರ ರಕ್ಷಣೆ


Team Udayavani, May 19, 2021, 7:10 AM IST

ಅಪಾರ ಹಾನಿ ಮಾಡಿ ದುರ್ಬಲಗೊಂಡ ತೌಖ್ತೇ : ನೌಕೆಯಲ್ಲಿದ್ದ 96 ಮಂದಿ ನಾಪತ್ತೆ, ಹಲವರ ರಕ್ಷಣೆ

ಅಹ್ಮದಾಬಾದ್‌/ಮುಂಬಯಿ: ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ ಕರಾವಳಿಗಳಲ್ಲಿ ರೌದ್ರಾವತಾರ ತೋರಿ, ಅಪಾರ ಪ್ರಮಾಣದ ಹಾನಿ ಉಂಟುಮಾಡಿದ ತೌಖ್ತೇ ಚಂಡಮಾರುತ ಮಂಗಳವಾರ ದುರ್ಬಲಗೊಂಡಿದೆ.

ಸೋಮವಾರ ರಾತ್ರಿ ಗುಜರಾತ್‌ಗೆ ಅಪ್ಪಳಿಸಿದ್ದ ಸೈಕ್ಲೋನ್‌ ಕನಿಷ್ಠ 12 ಮಂದಿಯನ್ನು ಬಲಿಪಡೆದುಕೊಂಡಿದೆ. ಮುಂಬಯಿಯಲ್ಲೂ ಮಂಗಳವಾರ ಮಳೆ ಮುಂದುವರಿದಿದ್ದು, ಚಂಡಮಾರುತ ಸಂಬಂಧಿ ಘಟನೆಗಳಿಂದ ಮೂವರು ಸಾವಿಗೀಡಾಗಿದ್ದಾರೆ.

96 ಮಂದಿ ನಾಪತ್ತೆ: ಚಂಡಮಾರುತದ ಅಬ್ಬರಕ್ಕೆ ಮುಂಬಯಿ ಕರಾವಳಿಯಾಚೆ ಸಿಲುಕಿದ್ದ ನೌಕೆಯೊಂದರಿಂದ 177 ಮಂದಿಯನ್ನು ನೌಕಾಪಡೆಯು ಮಂಗಳವಾರ ರಕ್ಷಿಸಿದೆ. ಈ ಹಡಗಿನಲ್ಲಿ 273ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಹೇಳಲಾಗಿದೆ. 96 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದು ನೌಕಾಪಡೆ ನಡೆಸುತ್ತಿರುವ ಅತ್ಯಂತ ಸವಾಲಿನ ಕಾರ್ಯಾಚರಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ 2 ಬಾರ್ಜ್‌ಗಳಲ್ಲಿದ್ದವರನ್ನೂ ನೌಕಾ ಪಡೆ ರಕ್ಷಿಸಿ ತೀರಕ್ಕೆ ಕರೆ ತಂದಿದೆ. ಇದೇ ವೇಳೆ, ಗುಜರಾತ್‌ ಕರಾವಳಿಯಾಚೆ ಎರಡು ಹಡಗುಗಳಲ್ಲಿ ಸಿಲುಕಿದ್ದ 16 ಮಂದಿಯನ್ನು ಕರಾವಳಿ ರಕ್ಷಕ ಪಡೆಯು ರಕ್ಷಿಸಿದೆ.

ಮುಂಬಯಿಯಲ್ಲಿ 3 ಸಾವು, 10 ಮಂದಿಗೆ ಗಾಯ: ತೌಖ್ತೇ ಚಂಡಮಾರುತವು ಮುಂಬಯಿ ಕರಾವಳಿ ಹಾದು ಹೋಗುವ ವೇಳೆ ಸಂಭವಿಸಿದ ಅವಘಡಗಳಿಗೆ ಮೂರು ಮಂದಿ ಬಲಿಯಾಗಿ, 10 ಮಂದಿ ಗಾಯಗೊಂಡಿದ್ದಾರೆ. ಪಾಲ್ಗರ್ ನಲ್ಲಿ ಇಬ್ಬರು ಹಾಗೂ ಥಾಣೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಸೈಕ್ಲೋನ್‌ನ ಪ್ರಭಾವದಿಂದ ಮಂಗಳವಾರವೂ ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ನಿರಂತರ ಮಳೆಯಾಗಿದೆ. ಗಂಟೆಗೆ 80-90 ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆ ಹಾಗೂ ದೈತ್ಯ ಅಲೆಗಳಿಂದಾಗಿ ಗೇಟ್‌ವೇ ಆಫ್ ಇಂಡಿಯಾದ ಕಬ್ಬಿಣದ ಗೇಟುಗಳು ಹಾಗೂ ಸುರಕ್ಷತ ಗೋಡೆ ಹಾನಿಗೀಡಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಮುಂಬಯಿ ಮಳೆ ಸಾರ್ವಕಾಲಿಕ ದಾಖಲೆ: 24 ಗಂಟೆಗಳ ಅವಧಿಯಲ್ಲಿ ಮುಂಬಯಿಯಲ್ಲಿ 230 ಮಿ.ಮೀ. ಮಳೆಯಾಗಿದ್ದು, ಮೇ ತಿಂಗಳಲ್ಲಿ ಒಂದೇ ದಿನ ಇಷ್ಟೊಂದು ಮಳೆಯಾಗಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 204.5 ಮಿ.ಮೀ.ಗಿಂತ ಹೆಚ್ಚು ಮಳೆಯಾದರೆ ಅದನ್ನು “ಅತ್ಯಧಿಕ ಮಳೆ’ ಎಂದು ಪರಿಗಣಿಸಲಾಗುತ್ತದೆ.

ಟಾಪ್ ನ್ಯೂಸ್

totapuri

ಜ.24ರಂದು ಜಗ್ಗೇಶ್ ನಟನೆಯ ತೋತಾಪುರಿ ಆಡಿಯೋ ಟೀಸರ್‌ ಬಿಡುಗಡೆ

ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ: ಶೋಭಾ ಕರಂದ್ಲಾಜೆ

ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ: ಶೋಭಾ ಕರಂದ್ಲಾಜೆ

ತಿರುಗೇಟು ನೀಡುತ್ತಾ ಟೀಂ ಇಂಡಿಯಾ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ತಿರುಗೇಟು ನೀಡುತ್ತಾ ಟೀಂ ಇಂಡಿಯಾ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

kyasanur forest disease

ಕೋವಿಡ್ ನಡುವೆ ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ವೈರಸ್ ಆತಂಕ!

1-sdds

ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆ:’ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ

ಕಾರಜೋಳ

ತಮಿಳುನಾಡಿಗೆ ಹೊಗೇನಕಲ್‌ ನಲ್ಲಿ ಯೋಜನೆ ಮಾಡಲು ಬಿಡುವುದಿಲ್ಲ: ಕಾರಜೋಳ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎನ್‌ಡಿಎಗೆ 296 ಸ್ಥಾನ ಖಚಿತ; ಇಂಡಿಯಾ ಟುಡೇ ಮೂಡ್‌ ಆಫ್ ದ ನೇಷನ್‌ ವರದಿ

ಎನ್‌ಡಿಎಗೆ 296 ಸ್ಥಾನ ಖಚಿತ; ಇಂಡಿಯಾ ಟುಡೇ ಮೂಡ್‌ ಆಫ್ ದ ನೇಷನ್‌ ವರದಿ

crime (2)

ಪುಷ್ಪ ಚಿತ್ರದ ಪ್ರೇರಣೆ : ಕೊಲೆ ಮಾಡಿ ವೈರಲ್ ಆಗಲು ಬಯಸಿದ್ದ ಬಾಲಕರು!

ಭಾರತ:24ಗಂಟೆಯಲ್ಲಿ 3.47ಲಕ್ಷ ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 9,692ಕ್ಕೆ ಏರಿಕೆ

ಭಾರತ:24ಗಂಟೆಯಲ್ಲಿ 3.47ಲಕ್ಷ ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 9,692ಕ್ಕೆ ಏರಿಕೆ

amar jawan jyoti

ಶಾಶ್ವತವಾಗಿ ನಂದಲಿದೆ 50 ವರ್ಷಗಳಿಂದ ಬೆಳಗಿದ ಇಂಡಿಯಾ ಗೇಟ್ ಅಮರ್ ಜವಾನ್ ಜ್ಯೋತಿ!

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

MUST WATCH

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

ಹೊಸ ಸೇರ್ಪಡೆ

17farmer

ಅಕ್ರಮ ನೀರಾವರಿ ತಡೆಗೆ ಗಡುವು

totapuri

ಜ.24ರಂದು ಜಗ್ಗೇಶ್ ನಟನೆಯ ತೋತಾಪುರಿ ಆಡಿಯೋ ಟೀಸರ್‌ ಬಿಡುಗಡೆ

ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ: ಶೋಭಾ ಕರಂದ್ಲಾಜೆ

ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ: ಶೋಭಾ ಕರಂದ್ಲಾಜೆ

1-wqqwe

ಬೈಕ್‌ ಟ್ಯಾಕಿಗೆ ಕಡಿವಾಣ ಹಾಕಲು ಆಟೋ ಚಾಲಕರ ಆಗ್ರಹ

arrested

ವಂಚನೆ: ಆಯೇಷಾ ಅಮಿನಾ ಟ್ರಸ್ಟ್‌ನ ಟ್ರಸ್ಟಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.