Udayavni Special

ಮಂಡ್ಯದಲ್ಲಿ ರಾಜ್ಯದ ಮೊದಲ ಆಕ್ಸಿಜನ್ ಪ್ಲಾಂಟ್ ನಿರ್ಮಾಣ : ಸಚಿವ ನಾರಾಯಣ ಗೌಡ

Team Udayavani, May 12, 2021, 7:14 PM IST

ರಾಜ್ಯದಲ್ಲಿಯೇ ಮೊದಲ ಆಕ್ಸಿಜನ್ ಪ್ಲಾಂಟ್ ಮಂಜೂರು: ನಾರಾಯಣಗೌಡ

ಮಂಡ್ಯ: ರಾಜ್ಯದಲ್ಲಿಯೇ ಮೊದಲ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ ಅವರು ಚಾಲನೆ ನೀಡಿದರು.

ನಗರದ ಮಿಮ್ಸ್ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದ್ದು, ರಾಜ್ಯದಲ್ಲಿಯೇ ಮೊದಲ ಪ್ಲಾಂಟ್ ಇದಾಗಿದ್ದು, ಗುದ್ದಲಿ ಪೂಜೆ ನೆರವೇರಿಸಲಾಯಿತು.

ಮೊಟ್ಟ ಮೊದಲ ಆಕ್ಸಿಜನ್ ಪ್ಲಾಂಟ್:
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಂಡ್ಯದಲ್ಲಿ ಆಕ್ಸಿಜನ್ ಪ್ಲಾಂಟ್‌ಗೆ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಸರ್ಕಾರ ಮಂಡ್ಯ ಹಾಗೂ ಮಳವಳ್ಳಿಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಅವಕಾಶ ನೀಡಿದೆ ಎಂದರು.

ಎಲ್ಲ ತಾಲೂಕಿನಲ್ಲೂ ಪ್ಲಾಂಟ್:
ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಬೇಕು. ಆಕ್ಸಿಜನ್ ಸಮಸ್ಯೆಗಳ ಸರಿದೂಗಿಸಬೇಕು. ಆಕ್ಸಿಜನ್ ಬೆಡ್ ಸಮಸ್ಯೆ ಉಂಟಾದಲ್ಲಿ ಬಸ್‌ನಲ್ಲಿ ೬ರಿಂದ ೮ ಜನಕ್ಕೆ ಆಕ್ಸಿಜನ್ ಕೊಡುವ ಹೊಸ ಪ್ಲಾನ್ ಮಾಡಲಾಗುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯಾರೂ ಸೋಂಕಿಗೆ ಒಳಗಾಗಿ ತುರ್ತು ಪರಿಸ್ಥಿತಿ ಇರುತ್ತದೆಯೋ ಅಂಥ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಉದ್ದೇಶವಿದೆ. ಇದರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮಾತನಾಡಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಕೊರೊನಾ ಕರ್ಫ್ಯೂ: ಎರಡನೇ ದಿನ ಕಟ್ಟುನಿಟ್ಟಿನ ಅನುಷ್ಠಾನ

ನಿಯಮ ಪಾಲನೆ ಮಾಡಿ:
ಶೀಘ್ರವಾಗಿ ಈ ಯೋಜನೆ ಜಾರಿಗೆ ಬರುತ್ತದೆ. ನಮ್ಮಲ್ಲಿ ಆಕ್ಸಿಜನ್ ಪ್ಲಾಂಟ್ ಇರಲಿಲ್ಲ. ಬೇರೆ ಕಡೆಯಿಂದ ಆಕ್ಸಿಜನ್ ತರಿಸಬೇಕಾದ ಸಂಕಷ್ಟ ಇತ್ತು. ದಾನಿಗಳು ಸಹ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನು ಉಪಯೋಗಿಸಿಕೊಂಡು ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗುವುದು. ಎಲ್ಲರೂ ಸಹ ಕಡ್ಡಾಯವಾಗಿ ಕೊರೊನಾ ನಿಯಮ ಪಾಲನೆ ಮಾಡಿ ಎಂದು ಮನವಿ ಮಾಡಿ ಎಂದು ಸಚಿವರು ತಿಳಿಸಿದರು.

ಚಾಮರಾಜನಗರ ದುರಂತ ಆಗಬಾರದು:
ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗಿದೆ. ಆಕ್ಸಿಜನ್ ಕೊರತೆ ಇದೆ. ಮುಖ್ಯಮಂತ್ರಿಗಳು ಆಕ್ಸಿಜನ್ ಪ್ಲಾಂಟ್ ಮಂಜೂರು ಮಾಡುವ ಮೂಲಕ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಕಳೆದ ರಾತ್ರಿ 10.30ರಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಇದರಿಂದ ನನಗೂ ನಿದ್ರೆ ಬಂದಿರಲಿಲ್ಲ. 10.30ರಲ್ಲಿ ಬೇರೆ ಕಡೆಯಿಂದ ಆಕ್ಸಿಜನ್ ಬರದಿದ್ದರೆ ಚಾಮರಾಜನಗರ ದುರಂತ ಮಂಡ್ಯದಲ್ಲೂ ಸಂಭವಿಸುವ ಸಾಧ್ಯತೆ ಇತ್ತು. ಆದ್ದರಿಂದ ಆಕ್ಸಿಜನ್ ಅಗತ್ಯವಿರುವ ಸೋಂಕಿತರಿಗೆ ನೀಡಲಾಗುತ್ತಿದ್ದು, ವೆಂಟಿಲೇಟರ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಿಂದೆಯೇ ಆಗಬೇಕಿತ್ತು. ಆದರೆ ಆಗಿರಲಿಲ್ಲ. ಆದರೂ ಸಾರ್ವಜನಿಕರು ಶಾಂತ ರೀತಿಯಿಂದ ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಮಿಮ್ಸ್ ನಿರ್ದೇಶಕ ಡಾ.ಎಂ.ಆರ್.ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್ ಸೇರಿದಂತೆ ಮತ್ತಿತರರಿದ್ದರು.

ಟಾಪ್ ನ್ಯೂಸ್

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

Cristiano Ronaldo sets another record, becomes first person to reach 300 million followers mark on Instagram

ಇನ್ ಸ್ಟಾಗ್ರಾಮ್ ನಲ್ಲಿ 300ಮಿಲಿಯನ್ ಫಾಲೋವರ್ಸ್ ದಾಟಿದ ಫುಟ್ ಬಾಲ್ ಸ್ಟಾರ್ ಆಟಗಾರ ರೊನಾಲ್ಡೋ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆ

ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

c್ಗಹಗ್ದ್ಗಹಜ

ಅರವಿಂದ ಬೆಲ್ಲದ ಬಗ್ಗೆ ನಾನು ಏನೂ ಮಾತನಾಡಲ್ಲ : ಜಗದೀಶ್ ಶೆಟ್ಟರ್

ದ್ಗಹಗ್ದ್ಗಹಗ್ದ

ಕ್ರೀಡಾಪಟುಗಳು ಸೇರಿ ವಿದೇಶಕ್ಕೆ ತೆರಳುವವರಿಗೆ 22 ರಿಂದ ಲಸಿಕೀಕರಣ : ಡಿಸಿಎಂ

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

20-17

ಯುವ ಸಮೂಹಕ್ಕೆ ಪರಿಸರ ರಕ್ಷಣೆ ಅರಿವು ಮೂಡಿಸಿ

20-16

ತೌಕ್ತೆ ಚಂಡಮಾರುತ ಹಾನಿ ವರದಿ ಕೇಂದ್ರಕ್ಕೆ ಸಲ್ಲಿಕೆ

hasana news

ತುರ್ತು ವಿಧಾನಸಭೆ ಅಧಿವೇಶನ ಕರೆಯಿರಿ

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

20-15

ಮಳೆನಾಡಲ್ಲಿ ಜಲ ನರ್ತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.