ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಲು ಮೋದಿ ಆಗ್ರಹ

ಲಂಕಾ ತಮಿಳರ ಪರ ಮೋದಿ ಧ್ವನಿ

Team Udayavani, Sep 27, 2020, 6:00 AM IST

ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಲು ಮೋದಿ ಆಗ್ರಹ

ಹೊಸದಿಲ್ಲಿ: ಶ್ರೀಲಂಕಾದ ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಬೇಕು ಎಂದು ಲಂಕಾ ತಮಿಳರ ಪರ ಪ್ರಧಾನಿ ನರೇಂದ್ರ ಮೋದಿ ಧ್ವನಿಯೆತ್ತಿದ್ದಾರೆ. ಶಾಂತಿ ಮತ್ತು ಸಾಮರಸ್ಯದ ಮೂಲಕ ತಮಿಳರ ಸಮಾ ನತೆ, ನ್ಯಾಯ ಮತ್ತು ಘನತೆಯ ನಿರೀಕ್ಷೆಗಳನ್ನು ಸಾಕಾರ ಗೊಳಿಸಲು ಅಧಿಕಾರ ಹಂಚಿಕೆ ಅವಕಾಶ ಮಾಡಿಕೊಡುತ್ತದೆ ಎಂದು ಅಭಿ ಪ್ರಾಯಪಟ್ಟಿದ್ದಾರೆ.

ಮೋದಿ ಮತ್ತು ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಶನಿವಾರ ನಡೆಸಿದ ದ್ವಿಪಕ್ಷೀಯ ವರ್ಚು ವಲ್‌ ಶೃಂಗ ದಲ್ಲಿ ಪ್ರಧಾನಿ, ಅಧಿಕಾರ ಹಂಚಿಕೆಯ ಪ್ರಸ್ತಾಪ ಎತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಸಂಬಂಧ ಸಂವಿಧಾನದ 13ನೇ ತಿದ್ದುಪಡಿ ಯನ್ನು ಶ್ರೀಲಂಕಾ ಸಂಪೂರ್ಣ ವಾಗಿ ಅನುಷ್ಠಾನ ಗೊಳಿಬೇಕು ಎಂದೂ ಆಗ್ರಹಿಸಿದ್ದಾರೆ.

ಏನಿದು ಅಧಿಕಾರ ಹಂಚಿಕೆ?
ದ್ವೀಪ ರಾಷ್ಟ್ರದಲ್ಲಿ ಸಂವಿಧಾನದ 13ನೇ ತಿದ್ದುಪಡಿ ತಮಿಳು ಸಮುದಾಯಕ್ಕೆ ಅಧಿಕಾರ ಹಂಚಿಕೆಗೆ ಅವಕಾಶ ಮಾಡಿಕೊಟ್ಟು, ವಿವಿಧ ರಂಗಗಳಲ್ಲಿ ಸಮಾನತೆ ಕಲ್ಪಿಸಲು ನೆರವಾ ಗಲಿದೆ. 1987ರ ಇಂಡೋ- ಶ್ರೀಲಂಕಾ ಒಪ್ಪಂದ ಅನಂತರ ಭಾರತ ಈ ಸಂಗತಿಯನ್ನು ಹಲವು ಬಾರಿ ಪ್ರಸಾವಿಸಿತ್ತು. ಪ್ರಸ್ತುತ ಪ್ರಧಾನಿ ಪುನಃ ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ.

ಉಭಯ ನಾಯಕರು ರಕ್ಷಣೆ ಮತ್ತು ಭದ್ರತಾ ಒಪ್ಪಂದಗಳಲ್ಲದೆ, ವ್ಯಾಪಾರ ಮತ್ತು ಹೂಡಿಕೆ ಸಹಕಾರ ಕುರಿ ತಾಗಿಯೂ ಆಳವಾಗಿ ಚರ್ಚಿಸಿದ್ದಾರೆ. ಮೀನುಗಾರರ ಕುರಿತಾಗಿ ಮಾನವೀಯ ಮತ್ತು ರಚನಾತ್ಮಕ ನೀತಿಗಳ ಜಾರಿ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.

ಲಂಕಾಕ್ಕೆ 110 ಕೋಟಿ ರೂ. ಅನುದಾನ
ಶ್ರೀಲಂಕಾದಲ್ಲಿ ಬೌದ್ಧ ಸಂಸ್ಕೃತಿಯನ್ನು ಇನ್ನಷ್ಟು ಪ್ರೋತ್ಸಾಹಿಸಲು ಭಾರತ ನಿರ್ಧರಿಸಿದೆ. ದ್ವಿಪಕ್ಷೀಯ ಶೃಂಗದಲ್ಲಿ ಪ್ರಧಾನಿ ಮೋದಿ, ಲಂಕಾದಲ್ಲಿ ಬೌದ್ಧ ಸಂಸ್ಕೃತಿಯ ಉತ್ತೇಜನಕ್ಕೆ 110 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಬೌದ್ಧ ಮಂದಿರಗಳ ನವೀಕರಣ, ಬುದ್ಧಿಸಂ ಮತ್ತು ಬೌದ್ಧ ಪ್ರಚಾರಕರ ಮೂಲಕ ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯವನ್ನು ಪ್ರೋತ್ಸಾಹಿಸಲು ಈ ನಿಧಿ ಬಳಕೆಯಾಗಲಿದೆ. ಈ ವೇಳೆ ಶ್ರೀಲಂಕಾ, ದ್ವಿಪಕ್ಷೀಯ ಕರೆನ್ಸಿ ವಿನಿಮಯವನ್ನು 81 ಶತಕೋಟಿ ಡಾಲರ್‌ಗೆ ಹೆಚ್ಚಿಸಬೇಕು ಹಾಗೂ ಸಾಲ ಮರುಪಾವತಿ ಕಾಲಮಿತಿ ವಿಸ್ತರಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದೆ.

ಟಾಪ್ ನ್ಯೂಸ್

ನೈಜ ಘಟನೆಯ ಸುತ್ತ ‘ಅಂಬುಜಾ’: ಮದುವೆ ನಂತ್ರ ಮತ್ತೆ ಸಿನಿಮಾದತ್ತ ಶುಭಾ ಚಿತ್ತ

ನೈಜ ಘಟನೆಯ ಸುತ್ತ ‘ಅಂಬುಜಾ’: ಮದುವೆ ನಂತ್ರ ಮತ್ತೆ ಸಿನಿಮಾದತ್ತ ಶುಭಾ ಚಿತ್ತ

ಚೀನಾದ “ಶೂನ್ಯ ಕೊರೊನಾ ಮಾದರಿ” ಎಷ್ಟು ಪರಿಣಾಮಕಾರಿ?

ಚೀನಾದ “ಶೂನ್ಯ ಕೊರೊನಾ ಮಾದರಿ” ಎಷ್ಟು ಪರಿಣಾಮಕಾರಿ?

Untitled-1

ಕನ್ನಡಕ್ಕೆ ಬಂದಿದೆ ಹೊಸ ಫಾಂಟ್‌ ಬಂಡೀಪುರ!

ಬೆಂಗಳೂರು: ವರದಕ್ಷಿಣೆಗಾಗಿ ಪತ್ನಿ ಅಶ್ಲೀಲ ಫೋಟೋ,ವಿಡಿಯೋ ತೋರಿಸಿ ಗಂಡನಿಂದ ಬ್ಲ್ಯಾಕ್‌ಮೇಲ್‌

ಬೆಂಗಳೂರು: ವರದಕ್ಷಿಣೆಗಾಗಿ ಪತ್ನಿ ಅಶ್ಲೀಲ ಫೋಟೋ,ವಿಡಿಯೋ ತೋರಿಸಿ ಗಂಡನಿಂದ ಬ್ಲ್ಯಾಕ್‌ಮೇಲ್‌

ಸಂಸ್ಕೃತ ಭಾಷೆಯ ಮಮತೆಯನ್ನ ತುಳು- ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ.ಕೆ ಹರಿಪ್ರಸಾದ್‌

ಸಂಸ್ಕೃತ ಭಾಷೆಯ ಮಮತೆಯನ್ನ ತುಳು- ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ.ಕೆ ಹರಿಪ್ರಸಾದ್‌

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಗಣರಾಜ್ಯೋತ್ಸವ ಸ್ತಬ್ಧಚಿತ್ರದ ಆಯ್ಕೆ ಪ್ರಕ್ರಿಯೆ ಹೇಗೆ?

ಒಮಿಕ್ರಾನ್‌ಗೆ ಬರಲಿದೆ ಸ್ವದೇಶಿ ಲಸಿಕೆ

ಒಮಿಕ್ರಾನ್‌ಗೆ ಬರಲಿದೆ ಸ್ವದೇಶಿ ಲಸಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಣರಾಜ್ಯೋತ್ಸವ ದಿನ ಪ್ರಧಾನಿ ಮೋದಿ ಜೀವಕ್ಕೆ ಅಪಾಯ? ಗುಪ್ತಚರ ಇಲಾಖೆ 9ಪುಟಗಳ ವರದಿಯಲ್ಲೇನಿದೆ?

ಗಣರಾಜ್ಯೋತ್ಸವ ದಿನ ಪ್ರಧಾನಿ ಮೋದಿ ಜೀವಕ್ಕೆ ಅಪಾಯ; ಗುಪ್ತಚರ ಇಲಾಖೆ 9ಪುಟಗಳ ವರದಿಯಲ್ಲೇನಿದೆ?

ಭಾರತದಲ್ಲಿ 2.38 ಲಕ್ಷ ಕೋವಿಡ್ ಪ್ರಕರಣ ಪತ್ತೆ,ಪಾಸಿಟಿವಿಟಿ ದರ ಶೇ.20ರಿಂದ ಶೇ.14ಕ್ಕೆ ಇಳಿಕೆ

ಭಾರತದಲ್ಲಿ 2.38 ಲಕ್ಷ ಕೋವಿಡ್ ಪ್ರಕರಣ ಪತ್ತೆ,ಪಾಸಿಟಿವಿಟಿ ದರ ಶೇ.20ರಿಂದ ಶೇ.14ಕ್ಕೆ ಇಳಿಕೆ

thumb 1

ಮಾರ್ಚ್ ನಲ್ಲಿ 12-14ರ ವಯಸ್ಸಿನ ಮಕ್ಕಳಿಗೆ ಲಸಿಕೆ?

ಭಾರತದಲ್ಲಿ ಹೂಡಿಕೆ ಮಾಡಿ: ದಾವೋಸ್‌ ಶೃಂಗ ಸಭೆಯಲ್ಲಿ ಉದ್ಯಮಿಗಳಿಗೆ ಪ್ರಧಾನಿ ಆಹ್ವಾನ

ಭಾರತದಲ್ಲಿ ಹೂಡಿಕೆ ಮಾಡಿ: ದಾವೋಸ್‌ ಶೃಂಗ ಸಭೆಯಲ್ಲಿ ಉದ್ಯಮಿಗಳಿಗೆ ಪ್ರಧಾನಿ ಆಹ್ವಾನ

ತೋಳ್ಬಲ ನಿಗಾಕ್ಕೆ ಸಮಿತಿ; ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಕೇಂದ್ರ ಚುನಾವಣೆ ಆಯೋಗದ ಕ್ರಮ

ತೋಳ್ಬಲ ನಿಗಾಕ್ಕೆ ಸಮಿತಿ; ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಕೇಂದ್ರ ಚುನಾವಣೆ ಆಯೋಗದ ಕ್ರಮ

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

ನೈಜ ಘಟನೆಯ ಸುತ್ತ ‘ಅಂಬುಜಾ’: ಮದುವೆ ನಂತ್ರ ಮತ್ತೆ ಸಿನಿಮಾದತ್ತ ಶುಭಾ ಚಿತ್ತ

ನೈಜ ಘಟನೆಯ ಸುತ್ತ ‘ಅಂಬುಜಾ’: ಮದುವೆ ನಂತ್ರ ಮತ್ತೆ ಸಿನಿಮಾದತ್ತ ಶುಭಾ ಚಿತ್ತ

ಚೀನಾದ “ಶೂನ್ಯ ಕೊರೊನಾ ಮಾದರಿ” ಎಷ್ಟು ಪರಿಣಾಮಕಾರಿ?

ಚೀನಾದ “ಶೂನ್ಯ ಕೊರೊನಾ ಮಾದರಿ” ಎಷ್ಟು ಪರಿಣಾಮಕಾರಿ?

10protest

ಹೊಸ ಆದೇಶ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

ಬಿಬಿಎಂಪಿಗೆ ಬೂಸ್ಟ್‌ ನೀಡಿದ ತೆರಿಗೆ ಡೋಸ್‌!

ಬಿಬಿಎಂಪಿಗೆ ಬೂಸ್ಟ್‌ ನೀಡಿದ ತೆರಿಗೆ ಡೋಸ್‌!

9check-post

ಬಳೂರ್ಗಿ ಚೆಕ್‌ಪೋಸ್ಟ್‌ನಲ್ಲಿ ಮಹಾ ಗಲಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.