ಭಾರತ, ಪಾಕಿಸ್ತಾನ ಕಾಶ್ಮೀರವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿವೆ: ಮಲ್ವಿಂದರ್
Team Udayavani, Aug 19, 2021, 4:02 PM IST
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜೊತೆ ಮಲ್ವಿಂದರ್ ಸಿಂಗ್ ಮಾಲಿ
ನವ ದೆಹಲಿ : “ಕಾಶ್ಮೀರ ಒಂದು ಪ್ರತ್ಯೇಕ ರಾಷ್ಟ್ರ” ಎಂದು ಹೇಳಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ರಾಜಕೀಯ ಸಲಹೆಗಾರ ಮಲ್ವಿಂದರ್ ಸಿಂಗ್ ಮಾಲಿ ವಿವಾದಕ್ಕೀಡಾಗಿದ್ದಾರೆ.
ಕಾಶ್ಮೀರ ಒಂದು ಪ್ರತ್ಯೇಕ ರಾಷ್ಟ್ರ, ಅದು ಕಾಶ್ಮೀರದವರಿಗೆ ಸೇರಿದ್ದು, ಭಾರತ ಹಾಗೂ ಪಾಕಿಸ್ತಾನ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಹಲವಾರು ವರ್ಷಗಳಿಂದ ಆಕ್ರಮಣಕಾರಿ ಹೋರಾಟ ನಡೆಸುತ್ತಿವೆ ಎಂದು ಹೇಳಿದ್ದಾರೆ.
ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಟ್ವಿಟ್ ಮಾಡಿರುವ ಅವರು, ಕಾಶ್ಮೀರ ಅಲ್ಲಿನ ಜನರಿಗೆ ಸೇರಿದ್ದು, ಭಾರತ ಹಾಗೂ ಪಾಕಿಸ್ತಾನ ಕಾಶ್ಮೀರವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಕಾಗಿನಲೆ ಸ್ವಾಮೀಜಿ ಆರ್ಶಿವಾದ ಪಡೆದ ಕೇಂದ್ರ ಸಚಿವ ನಾರಾಯಣಸ್ವಾಮಿ: ಎಸ್ ಟಿ ಮೀಸಲಾತಿ ಚರ್ಚೆ
ಮಲ್ವಿಂದರ್ ಸಿಂಗ್ ಮಾಲಿ ಅವರ ಈ ಟ್ವೀಟ್ ಈಗ ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಭಾರಿ ಟೀಕೆ ಕೇಳಿಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಿರೋಮಣಿ ಅಕಾಲಿ ದಳ(ಎಸ್ ಎ ಡಿ)ದ ಹಿರಿಯ ನಾಯಕ ವಿಕ್ರಮ್ ಮಜಿತಿಯಾ, ಕಾಶ್ಮೀರಕ್ಕಾಗಿ ಹೋರಾಡಿದ ಸಹಸ್ರಾರು ಮಂದಿ ಭಾರತೀಯರ ಪರಿಶ್ರಮಕ್ಕೆ ಮಲ್ವಿಂದರ್ ಸಿಂಗ್ ಮಾಲಿ ಅವಮಾನ ಮಾಡಿದ್ದಾರೆ. ಇದು ಖಂಡನೀಯ. ರಾಹುಲ್ ಗಾಂಧಿ ಅವರೇ, ಇದು ಹುತಾತ್ಮರಿಗೆ ಮಾಡುವ ಅವಮಾನವಲ್ಲವೇ..? ಅಗೌರವ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮಾಲಿ ಅವರ ಹೇಳಿಕೆಯನ್ನು ರಾಹುಲ್ ಗಾಂಧಿ ಸಮರ್ಥಿಸಿಕೊಂಡರೇ, ಕಾಂಗ್ರೆಸ್ ನ ನಿಜ ಮುಖ ಏನೆನ್ನುವುದು ಇಡೀ ಭಾರತಕ್ಕೆ ತಿಳಿಯುತ್ತದೆ. ಇಲ್ಲವಾದರೇ, ಮಾಲಿ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೆ ರಾಷ್ಟ್ರೀಯ ಕಾಂಗ್ರಸ್ ಎನ್ನುವುದನ್ನು ಹೇಳಲಿ ಎಂದಿದ್ದಾರೆ.
ಸಿಧು ಒಬ್ಬ ಅಸಮರ್ಥ ರಾಜಕಾರಣಿ : ಬಿಜೆಪಿ
ಬಮಾಲಿ ಅವರ ಈ ವಿವಾದಾತ್ಮಕ ಟ್ವೀಟ್ ಗೆ ಆಕ್ರೋಶ ವ್ಯಕ್ತ ಪಡಿಸಿದ ಬಿಜೆಪಿ, ನವಜೋತ್ ಸಿಂಗ್ ಸಿಧು ಒಬ್ಬ ಅಸಮರ್ಥ ರಾಜಕಾರಣಿ ಎಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ನಾಯಕ ವಿನೀತ್ ಜೋಶಿ, “ಪಾಕ್ ಬೆಂಬಲಿತ ಭಯೋತ್ಪಾದಕರಿಂದ ಕಾಶ್ಮೀರವನ್ನು ರಕ್ಷಿಸಲು ಜಮ್ಮು ಮತ್ತು ಕಾಶ್ಮೀರದ ಪೊಲೀಸರಲ್ಲದೆ ಅನೇಕ ಸೇನೆ ಮತ್ತು ಮಿತ್ರ ಪಡೆಗಳ ಸಿಬ್ಬಂದಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಹಲವಾರು ಹುತಾತ್ಮರು ಪಂಜಾಬ್ ಗೆ ಸೇರಿದವರು. ಈ ಹುತಾತ್ಮರು ಮಾಡಿದ ಅತ್ಯುನ್ನತ ತ್ಯಾಗವನ್ನು ಕುಗ್ಗಿಸಲು ಮಾಲಿ ಪ್ರಯತ್ನಿಸುತ್ತಿದ್ದಾರೆ”. ಇದು ಭಾರತ ದೇಶಕ್ಕೆ ಮಾಡಿದ ಅವಮಾನ. ಇದು ದೇಶದ್ರೋಹದ ಕೇಲಸ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್‌ನವರು ತಾಲಿಬಾನ್ ರನ್ನು ಓಲೈಸುವವರು: ಛಲವಾದಿ ನಾರಾಯಣ ಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ
ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ
ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಬಂದ ರತನ್ ಟಾಟಾ
ರಾಜೀವ್ಗಾಂಧಿ ಹಂತಕ ಪೆರಾರಿವೇಲನ್ ಬಿಡುಗಡೆ : ಕಾಂಗ್ರೆಸ್ ತೀವ್ರ ಆಕ್ಷೇಪ
MUST WATCH
ಹೊಸ ಸೇರ್ಪಡೆ
ನಾರ್ವೆ ಮಾಜಿ ಸಚಿವರ ಟ್ವಿಟರ್ನಲ್ಲಿ ಮರವಂತೆ ಚಿತ್ರ
ಕೋರಿಕೆಗೆ ಸ್ಪಂದಿಸಿದ ಅಮ್ಮಂದಿರು: ಎದೆಹಾಲಿಲ್ಲದೆ ಕಂಗೆಟ್ಟಿದ್ದ ತಾಯಿಗೆ ನೆರವು!
ಬಿತ್ತನೆ ಬೀಜ, ಗೊಬ್ಬರ ವಿತರಣೆ ಶೀಘ್ರ ಆರಂಭ; ಕರಾವಳಿಯಲ್ಲಿ ಕೃಷಿ ಚಟುವಟಿಕೆಗೆ ಚಾಲನೆ
ಗ್ರಾಮ ಪಂಚಾಯತ್ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್ ಟ್ರ್ಯಾಕಿಂಗ್ !
ದ.ಕ., ಉಡುಪಿಯಲ್ಲಿ 207 ಡೆಂಗ್ಯೂ ಪ್ರಕರಣ; ಕೊಲ್ಲೂರು,ನೆರಿಯ ಪರಿಸರದಲ್ಲಿ ಅತ್ಯಧಿಕ