ಪಿಆರ್ಕೆ ಬ್ಯಾನರ್ನಿಂದ ಮತ್ತೂಂದು ಚಿತ್ರ
Team Udayavani, Jan 7, 2021, 12:55 PM IST
ಈ ಹಿಂದೆ ಪುನೀತ್ ರಾಜಕುಮಾರ್ ಅವರ “ಪಿಆರ್ಕೆ ಪ್ರೊಡಕ್ಷನ್’ ಬ್ಯಾನರ್ನಲ್ಲಿ “ಫ್ರೆಂಚ್ ಬಿರಿಯಾನಿ’ ಚಿತ್ರ ನಿರ್ಮಾಣವಾಗಿದ್ದು, ನಿಮಗೆ ಗೊತ್ತಿರಬಹುದು. ನಿರೂಪಕ ಮತ್ತು ಹಾಸ್ಯ ಕಲಾವಿದ ಡ್ಯಾನಿಶ್ ಸೇಠ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಈ ಚಿತ್ರಕ್ಕೆ ಪನ್ನಗಾಭರಣ ಆ್ಯಕ್ಷನ್-ಕಟ್ ಹೇಳಿದ್ದರು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ “ಫ್ರೆಂಚ್
ಬಿರಿಯಾನಿ’ ಚಿತ್ರ ಓಟಿಟಿ ಮೂಲಕ ಬಿಡುಗಡೆಯಾಗಿ, ಸಿನಿಪ್ರಿಯರ ಗಮನ ಸೆಳೆದಿತ್ತು. ಈಗ “ಪಿಆರ್ಕೆ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ದ್ಯಾನಿಶ್ ಸೇಠ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮತ್ತೂಂದು ಚಿತ್ರ ತಯಾರಾಗಲು ಸಿದ್ಧತೆ ನಡೆದಿದೆ.
ಹೌದು, ದ್ಯಾನಿಶ್ ಸೇಠ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಹೊಸ ಚಿತ್ರಕ್ಕೆ “ಒನ್ ಕಟ್, ಟೂ ಕಟ್’ ಎಂದು ಹೆಸರಿಡ ಲಾಗಿದೆ.
ವಂಸಿಧರ ಭೋಗರಾಜು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ದ್ಯಾನಿಶ್ ಸೇಠ್ ಸೋಶಿಯಲ್ ಮೀಡಿಯಾಗಳಲ್ಲಿ ಮನರಂಜನೆಗಾಗಿ ಸೃಷ್ಟಿಸಿದ್ದ ಗೋಪಿ ಎಂಬ ಕಾಲ್ಪನಿಕ ಪಾತ್ರ ಸಾಕಷ್ಟು ಜನಪ್ರಿಯವಾಗಿತ್ತು. ಈಗ ಇದೇ ಗೋಪಿ ಎಂಬ
ಪಾತ್ರವನ್ನು ಇಟ್ಟುಕೊಂಡು, ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎನ್ನಲಾಗುತ್ತಿದೆ. ಅಂದಹಾಗೆ, ದ್ಯಾನಿಶ್ ಸೇಠ್ ಸೃಷ್ಟಿಸಿರುವ ಕಾಲ್ಪನಿಕ ಪಾತ್ರ ಗೋಪಿ ತುಂಬಾ ಅಮಾಯಕ ವ್ಯಕ್ತಿ. ಸಾಮಾನ್ಯ ಜ್ಞಾನ ಕಡಿಮೆಯಿರುವ ಈ ವ್ಯಕ್ತಿ ಏನೇನು ಪಚೀತಿ
ಎದುರಿಸುತ್ತಾನೆ ಅನ್ನೋದರ ಸುತ್ತ ಈ ಚಿತ್ರ ನಡೆಯಲಿದೆಯಂತೆ.