ನೋಕಿಯಾದಿಂದ ಹೊಸ ಇಯರ್ ಬಡ್ ಬಿಡುಗಡೆ : ಬೆಲೆ ಎಷ್ಟು ಗೊತ್ತಾ?


Team Udayavani, Jan 12, 2022, 7:56 PM IST

ನೋಕಿಯಾದಿಂದ ಹೊಸ ಇಯರ್ ಬಡ್ ಬಿಡುಗಡೆ : ಬೆಲೆ ಎಷ್ಟು ಗೊತ್ತ?

ನವದೆಹಲಿ: ನೋಕಿಯಾ ಫೋನ್ ತಯಾರಿಕಾ ಕಂಪೆನಿ ಎಚ್‌ಎಂಡಿ ಗ್ಲೋಬಲ್, ಭಾರತದಲ್ಲಿ ತನ್ನ ಆಡಿಯೋ ಶ್ರೇಣಿಯನ್ನು ಬಲಪಡಿಸಲು ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್-205 ಮತ್ತು ವೈರ್ಡ್ ಸಹಿತವಾದ ಬಡ್ಸ್‍ ಡಬ್ಲ್ಯುಬಿ-101 ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪ್ರೀಮಿಯಂ ವಿನ್ಯಾಸದ ನೋಕಿಯಾ ಲೈಟ್ ಇಯರ್‌ಬಡ್ಸ್ ಮತ್ತು ವೈರ್ಡ್ ಇಯರ್ ಬಡ್‍ಗಳೂ ನೋಕಿಯಾ ಡಾಟ್‌ಕಾಂ, ರಿಟೇಲ್ ಮಳಿಗೆಗಳು ಇ-ಕಾಮರ್ಸ್ ತಾಣಗಳಲ್ಲಿ ದೊರಕುತ್ತವೆ.

ಎಚ್‌ಎಂಡಿ ಗ್ಲೋಬಲ್‌ನ ಉಪಾಧ್ಯಕ್ಷ ಸನ್ಮೀತ್ ಸಿಂಗ್ ಕೊಚ್ಚರ್ ಮಾತನಾಡಿ, ನೋಕಿಯಾ ಉತ್ಪನ್ನಗಳನ್ನು ವಿವಿಧ ವಿಭಾಗಗಳಲ್ಲಿ ಬಲಪಡಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಆಡಿಯೋ ಮಾರುಕಟ್ಟೆ ಬೆಳೆಯುತ್ತಿದೆ. ಭಾರತವು ಈಗಾಗಲೇ ಟಿಡಬ್ಲ್ಯುಎಸ್ ಆಡಿಯೋದಲ್ಲಿ ಜಗತ್ತಿನ 5 ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. 2022ರಲ್ಲಿ ಈ ವಿಭಾಗದಲ್ಲಿ ಸಾಕಷ್ಟು ಬೆಳವಣಿಗೆಗಳನ್ನು ನಾವು ನಿರೀಕ್ಷಿಸುತ್ತೇವೆ. ಕಳೆದ ವರ್ಷ ನಾವು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿಯೊ ಪರಿಕರಗಳಿಗೆ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಈ ವಿಭಾಗದಲ್ಲಿನ ನಮ್ಮ ಕೊಡುಗೆಗಳನ್ನು ಮತ್ತಷ್ಟು ಹೆಚ್ಚಿಸಲು ಈ ಎರಡು ಹೊಸ ಉತ್ಪನ್ನಗಳನ್ನು ಪರಿಚಯಿಸುವುದರೊಂದಿಗೆ ನಾವು ಹೊಸ ವರ್ಷವನ್ನು ಪ್ರಾರಂಭಿಸುತ್ತಿದ್ದೇವೆ. ವರ್ಕ್ ಫ್ರಂ ಹೋಂ, ಇ-ಕಲಿಕೆ ಮತ್ತು ಒಟಿಟಿ ವೀಕ್ಷಣೆಯ ಪ್ರಮುಖ ಪ್ರವೃತ್ತಿಗಳು ವೈಯಕ್ತಿಕ ಶ್ರವಣ ಸಾಧನಗಳ ಬೇಡಿಕೆಯನ್ನು ಹೆಚ್ಚಿಸಿವೆ. ನಮ್ಮ ವಿಶಾಲ ಶ್ರೇಣಿಯ ಶ್ರವಣ ಪರಿಕರಗಳೊಂದಿಗೆ ಈ ಬೇಡಿಕೆಯನ್ನು ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.

ನೋಕಿಯಾ ಲೈಟ್ ಇಯರ್‌ ಬಡ್ಸ್ ಬಿಎಚ್-205 ಈ ವಿಭಾಗದಲ್ಲಿನ ಮೊದಲ ಕೈಗೆಟುಕುವ ಪ್ರೀಮಿಯಂ ಇಯರ್‌ಬಡ್‌ಗಳಾಗಿವೆ. ಇವು 6 ಎಂಎಂ ಆಡಿಯೊ ಡ್ರೆವರ್‌ಗಳ ನೆರವಿನಿಂದ ಸ್ಟುಡಿಯೊ-ಟ್ಯೂನ್ ಮಾಡಿದ ಧ್ವನಿಯ ಗುಣಮಟ್ಟವನ್ನು ನೀಡುತ್ತವೆ. ಇದು ಪ್ರತಿ ಬಡ್‌ನಲ್ಲಿ ಎರಡು 40 ಎಂಎಎಚ್ ಬ್ಯಾಟರಿಗಳ ನೆರವಿನಿಂದ 36 ಗಂಟೆಗಳ ಪ್ಲೇಟೈಮ್ ಅನ್ನು ಒದಗಿಸುತ್ತದೆ (ಒಂದು ಬಾರಿಯ ಚಾರ್ಜ್‌ನಲ್ಲಿ 6 ಗಂಟೆಗಳ ಕಾಲ ಬಳಕೆ) ಮತ್ತು ಚಾರ್ಜಿಂಗ್ ಕೇಸ್‌ನಲ್ಲಿ 400 ಎಂಎಎಚ್ ಬ್ಯಾಟರಿಯೊಂದಿಗೆ ಹೆಚ್ಚುವರಿ 30 ಗಂಟೆಗಳ ಕಾಲ ಬಳಸಬಹುದಾಗಿದೆ.

ಇದನ್ನೂ ಓದಿ : ಮಲೈಕಾ ಜತೆಗಿನ ಬ್ರೇಕ್ ಅಪ್ ವದಂತಿ ತಳ್ಳಿಹಾಕಿದ ಅರ್ಜುನ್ ಕಪೂರ್

ಬೆಲೆ ಮತ್ತು ಲಭ್ಯತೆ
ನೋಕಿಯಾ ಲೈಟ್ ಇಯರ್‌ಬಡ್ಸ್ ಕಪ್ಪು ಬಣ್ಣದಲ್ಲಿ ಲಭ್ಯವಿರುತ್ತದೆ. ಇದರ ಬೆಲೆ ರೂ 2,799.
ನೋಕಿಯಾ ವೈರ್ಡ್ ಬಡ್ಸ್ – ಕಪ್ಪು, ಬಿಳಿ, ನೀಲಿ ಮತ್ತು ಕೆಂಪು ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದ್ದು, ಇದರ ಬೆಲೆ ರೂ. 299

ಟಾಪ್ ನ್ಯೂಸ್

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.