ನೋಟು ನಿಮ್ಮದು, ಓಟು ನಿಮ್ಮದು
Team Udayavani, Feb 4, 2023, 5:50 AM IST
ಎಸ್.ಎ. ರಾಮದಾಸ್, ಶಾಸಕರು
ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ನನ್ನ ಮೊದಲ ಚುನಾವ ಣೆಯ ನೆನಪು ಸದಾ ಹಸುರು. ಅದು 1994ರಲ್ಲಿ ನಡೆದ ವಿಧಾನಸಭಾ ಚುನಾವಣೆ. ಆಗ ರಾಜ್ಯದಲ್ಲಿ ಜನತಾದಳದ ಅಲೆ. ಜನತಾದಳ ಅಬ್ಬರದ ಪ್ರಚಾರ ನಡೆ ಸಿತ್ತು. ಆಗೆಲ್ಲ ಚುನಾವಣೆಗಳಲ್ಲಿ ಬ್ಯಾನರ್‌ಗಳು, ಕಟೌಟ್‌ಗಳು, ಬಂಟಿಂಗ್ಸ್ ಗಳು ಹೆಚ್ಚು.
ಜನತಾದಳದವರ ಬ್ಯಾನರ್‌ಗಳು, ಕಟೌಟ್‌ಗಳು ಉಳಿದ ಪಕ್ಷದವರಿ ಗಿಂತ ಹೆಚ್ಚಾಗಿತ್ತು.ನಮ್ಮ ಪಕ್ಷದವರೂ ಬ್ಯಾನರ್‌ಗಳು, ಕಟೌಟ್‌ಗಳು, ಬಂಟಿಂಗ್ಸ್‌ಗಳನ್ನು ಹಾಕಿದ್ದೆವು. ನಾನು ಆಗ ಯುವಕ. ಬಿಜೆಪಿ ಅಭ್ಯರ್ಥಿಯಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ನನ್ನ ಎದುರು ಜನತಾದಳದಿಂದ ಹಿರಿಯರಾದ ವೇದಾಂತ ಹೆಮ್ಮಿಗೆ ಸ್ಪರ್ಧಿಸಿದ್ದರು. ಒಮ್ಮೆ ಅವರು ಶಾಸಕರಾಗಿದ್ದರು. ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡು ಪ್ರಚಾರ ನಡೆಸಿದ್ದೆ. ಮನೆಮನೆ ಪ್ರಚಾರವೇ ನಮಗೆ ಮುಖ್ಯವಾಗಿತ್ತು. ನೋಟು ನಿಮ್ಮದು, ಓಟು ನಿಮ್ಮದು ಶಾಸಕ ನಿಮ್ಮವ- ಇದು ಕ್ಷೇತ್ರದಲ್ಲಿ ನಮ್ಮ ಸ್ಲೋಗನ್ ಆಗಿತ್ತು. ಪ್ರಚಾರದ ಸಮಯದಲ್ಲಿ ಜನರೇ ನನಗೆ ಹಣ ಕೊಟ್ಟರು.
ಹೀಗೆ ಸಂಗ್ರಹವಾಗಿದ್ದ ಹಣ 7.28 ಲಕ್ಷ ರೂಪಾಯಿಗಳು. ಚುನಾವಣ ಕಣದಲ್ಲಿ ಎದುರಾಳಿಗಳು ನನ್ನನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದೆ. ಚುನಾವಣೆಗೆ ಏಳು ಲಕ್ಷ ರೂಪಾಯಿ ಖರ್ಚಾಯಿತು. ಉಳಿದ 28 ಸಾವಿರ ರೂಪಾಯಿಯನ್ನು ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲಿ ಸಿಹಿ ತಿನಿಸುಗಳನ್ನು ಖರೀದಿಸಿ ಮನೆಮನೆಗೆ ವಿತರಿಸಿದೆವು. ನಾನು ಮೊದಲ ಸಲ ಚುನಾವಣೆಯಲ್ಲಿ ನಿಂತಾಗ ನನ್ನ ತಾಯಿ ನನಗೊಂದು ಮಾತು ಹೇಳಿದ್ದರು. ಯಾವುದೇ ಕಾರಣಕ್ಕೂ ಮತದಾರರಿಗೆ ಹೆಂಡ ಹಂಚಬಾರದು ಎಂದಿದ್ದರು.
ಮೊದಲ ಚುನಾವಣೆಯಿಂದ ಈವರೆಗೂ ನನ್ನ ಯಾವುದೇ ಚುನಾವಣೆಯಲ್ಲಿ ಮತದಾರರಿಗೆ ಹೆಂಡ ಹಂಚಿಲ್ಲ. ಅಂದಿನ ಚುನಾವಣೆಗೂ ಇವತ್ತಿನ ಚುನಾವಣೆಗೂ ಹೋಲಿಸುವ ಹಾಗೆಯೇ ಇಲ್ಲ. ಆಗಿನ ರಾಜಕಾರಣ, ಚುನಾವಣೆಗಳಲ್ಲಿ ಮೌಲ್ಯಗಳು ತುಂಬಾ ಇತ್ತು.
ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನನ್ನನ್ನು ಬೆಂಬಲಿಸಿದರು. ನಾನು ಯುವಕ ಎಂಬುದು ಆಗ ನನಗೆ ಪ್ಲಸ್ ಪಾಯಿಂಟ್ ಆಗಿತ್ತು. ನನ್ನ ಎದುರಾಳಿಯಾಗಿದ್ದ ಜನತಾದಳದ ವೇದಾಂತ ಹೆಮ್ಮಿಗೆ ಪರಾಭವಗೊಂಡರು. ಮುಂದೆ ಅವರು ನನಗೆ ಆತ್ಮೀಯರಾದರು.
-ಕೂಡ್ಲಿ ಗುರುರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರುಣಾ- ಕೋಲಾರ.. ಕ್ಷೇತ್ರ ಯಾವುದಯ್ಯಾ? ಮತ್ತಷ್ಟು ಗೊಂದಲ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ
ಈಶ್ವರಪ್ಪಗೆ 35 ವರ್ಷ ಅವಕಾಶ ಕೊಟ್ಟಾಯ್ತು, ಈ ಬಾರಿ ನನಗೆ ಕೊಡಲಿ: ಆಯನೂರು ಮಂಜುನಾಥ್
ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !
ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!
ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್; ಈಶ್ವರಪ್ಪಗೆ ಆಯನೂರು ಮಂಜುನಾಥ್ ಟಾಂಗ್