Udayavni Special

ಈಕ್ವೆಡಾರ್‌ನಲ್ಲಿ ನಿತ್ಯಾನಂದ ಪ್ರತ್ಯೇಕ ಕೈಲಾಸ ರಾಷ್ಟ್ರ ಸೃಷ್ಟಿ!

ಪರಿತ್ಯಕ್ತ ಹಿಂದೂಗಳಿಗಳಿಗಾಗಿ ಕೈಲಾಸ ರಾಷ್ಟ್ರ ರಚನೆ: ನಿತ್ಯಾನಂದ ಘೋಷಣೆ

Team Udayavani, Dec 4, 2019, 10:02 AM IST

Nithyananda

ಬೆಂಗಳೂರು: ಭಾರತದಿಂದ ಓಡಿಹೋಗಿರುವ ವಿವಾದಿತ ಸ್ವಾಮೀಜಿ ನಿತ್ಯಾನಂದ,  ಈಕ್ವೆಡಾರ್‌ನಲ್ಲಿ ತಾನೊಂದು ಹೊಸ ದೇಶ ಸ್ಥಾಪಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾನೆ. ತನ್ನ ದೇಶಕ್ಕೆ “ಕೈಲಾಸ’ ಎಂದು ಹೆಸರಿಟ್ಟುಕೊಂಡಿರುವ ಆತ, ಆ ಸ್ವಯಂಘೋಷಿತ ರಾಷ್ಟ್ರದ ಕುರಿತಂತೆ ವೆಬ್‌ ಸೈಟೊಂದನ್ನು ಆರಂಭಿಸಿ, ಅದರಲ್ಲಿ ತನ್ನ ದೇಶದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ವೆಬ್‌ಸೈಟ್‌ನಲ್ಲಿ, “ಇದೊಂದು ಗಡಿ ರಹಿತ ದೇಶವಾಗಿದೆ. ತಮ್ಮ ದೇಶಗಳಿಂದ ಪರಿತ್ಯಕ್ತರಾದ ವಿಶ್ವದ ಎಲ್ಲಾ ಹಿಂದೂಗಳಿಗೆ ಹಾಗೂ ಹಿಂದುತ್ವವನ್ನು ಪಾಲಿಸಲು ತೊಡಕಾಗಿರುವ ದೇಶಗಳಲ್ಲಿರುವ ಹಿಂದೂಗಳಿಗಾಗಿ ಈ ರಾಷ್ಟ್ರವನ್ನು ಸೃಷ್ಟಿಸಲಾಗಿದೆ.

ಈ ರಾಷ್ಟ್ರದ ನಾಗರಿಕರಾಗಲು ಬಯಸುವವರಿಗೆ ಮುಕ್ತ ಸ್ವಾಗತವಿದೆ’ ಎಂದು ಘೋಷಿಸಲಾಗಿದೆ.
ಎಲ್ಲಿದೆ ಈ ದೇಶ? ವರ್ಷಗಳ ಹಿಂದೆ ಈಕ್ವೆಡಾರ್‌ ನಲ್ಲಿ ದ್ವೀಪವೊಂದನ್ನು ಖರೀದಿಸಿದ್ದ ನಿತ್ಯಾನಂದ,
ಈಗ ಅದೇ ದ್ವೀಪವನ್ನು ತನ್ನ ಹೊಸ ರಾಷ್ಟ್ರವೆಂದು ಘೋಷಿಸಿಕೊಂಡಿದ್ದಾನೆ. ಅಲ್ಲದೆ, ಈ ರಾಷ್ಟ್ರಕ್ಕೆ
ತನ್ನದೇ ಆದ ಪ್ರತ್ಯೇಕ ಪಾಸ್‌ಪೋರ್ಟ್‌ ವ್ಯವಸ್ಥೆಯಿದೆ ಹೇಳಿದ್ದಾನೆ ನಿತ್ಯಾನಂದ.

ಗೃಹ, ರಕ್ಷಣೆ ಎಲ್ಲವೂ ಅವನದ್ದೇ!: ಕೈಲಾಸ ರಾಷ್ಟ್ರದ ಸರ್ಕಾರದಡಿ ಸದ್ಯಕ್ಕೆ 10 ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಗೃಹ, ರಕ್ಷಣೆ, ವಾಣಿಜ್ಯ, ಶಿಕ್ಷಣ ಇಲಾಖೆ, ಅಂತಾರಾಷ್ಟ್ರೀಯ ಸಂಬಂಧಗಳು ಹಾಗೂ ಡಿಜಿಟಲ್‌ ಎಂಗೇಜ್‌ಮೆಂಟ್‌ ಆ್ಯಂಡ್‌ ಸೋಷಿಯಲ್‌ ಮೀಡಿಯಾ ಇಲಾಖೆಗಳು ಪ್ರಮುಖವಾದವು. ಎಲ್ಲಾ ಇಲಾಖೆಗಳಿಗೂ ಭಗವಾನ್‌ ನಿತ್ಯಾನಂದರೇ
ಮುಖ್ಯಸ್ಥರಾಗಿರಲಿದ್ದಾರೆ ಎಂದು ಕೈಲಾಸ ವೆಬ್‌ ಸೈಟ್‌ ಹೇಳುತ್ತದೆ. ಈ ರಾಷ್ಟ್ರದಲ್ಲಿ ನೀಡಲಾಗುವ ಪಾಸ್‌ಪೋರ್ಟ್‌ನಿಂದ 14 ಲೋಕಗಳಿಗೆ ಭೇಟಿ  ನೀಡಬಹುದಾಗಿದೆ ಎಂದು ಹೇಳಲಾಗಿದೆ.

ಪ್ರತ್ಯೇಕ ರಾಷ್ಟ್ರಧ್ವಜ
ಕೈಲಾಸ ರಾಷ್ಟ್ರಕ್ಕಾಗಿ ಪ್ರತ್ಯೇಕ ರಾಷ್ಟ್ರಧ್ವಜವನ್ನು ರೂಪಿಸಲಾಗಿದ್ದು, ಕಡುಕೆಂಪು ಬಣ್ಣದ ಹಿನ್ನೆಲೆಯಲ್ಲಿ ನಿತ್ಯಾನಂದ ದೈತ್ಯ ಶಿವನ ಆಕೃತಿಯ ಪಾದದಲ್ಲಿ ನಿತ್ಯಾನಂತ ಧ್ಯಾನಾಸಕ್ತನಾಗಿರುವುದು ಹಾಗೂ ಆತನ ಮುಂದೆ ನಂದಿ ವಿಗ್ರಹ ಇರುವ ಚಿತ್ರಗಳಿವೆ. ಕೈಲಾಸ ರಾಷ್ಟ್ರದ ರಾಷ್ಟ್ರೀಯ ಮರವನ್ನಾಗಿ ಆಲದ ಮರವನ್ನು ಆಯ್ಕೆ ಮಾಡಲಾಗಿದ್ದರೆ, ನಂದಿಯನ್ನು ಆ ರಾಷ್ಟ್ರದ ರಾಷ್ಟ್ರೀಯ ಪ್ರಾಣಿಯಾಗಿಸಲಾಗಿದೆ. ಪ್ರಾಣಿಯ ದೇಹದವನ್ನು ಹೊಂದಿ, ಕುತ್ತಿಗೆಯಿಂದ ಆಚೆಗೆ ಮನುಷ್ಯನ ಆಕಾರವನ್ನು ಹೊಂದಿರುವ ಶರಭವನ್ನು ರಾಷ್ಟ್ರ ಪಕ್ಷಿಯನ್ನಾಗಿಸಲಾಗಿದೆ.

ವಿಶೇಷತೆಯೇನು?
ಕೈಲಾಸ ರಾಷ್ಟ್ರದಲ್ಲಿ ಅನೇಕ ವಿಶೇಷತೆಗಳಿವೆ. ದೇಗುಲ-ಆಧಾರಿತ ಜೀವನ ವ್ಯವಸ್ಥೆಯಿದೆ. ಅಲ್ಲಿನ ನಾಗರಿಕರಿಗೆ ಶಿವನ ಮೂರನೇ ಕಣ್ಣಿನ ಹಿಂದಿರುವ ವಿಜ್ಞಾನ, ಯೋಗ, ಧ್ಯಾನಗಳನ್ನು ಹೇಳಿಕೊಡಲಾಗುತ್ತದೆ. ಇನ್ನು, ಮಕ್ಕಳಿಗೆ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ಇರಲಿದೆ. ಇದಲ್ಲದೆ, ಅಲ್ಲಿನ ನಾಗರಿಕರಿಗೆ ಉಚಿತ ಆರೋಗ್ಯ ಸೇವೆಗಳು, ಉಚಿತ ಶಿಕ್ಷಣ, ಉಚಿತ ಆಹಾರ ಸೌಲಭ್ಯ ಇರಲಿವೆ. ನಿತ್ಯಾನಂದ ಟೈಮ್ಸ್‌ ಎಂಬ ವೆಬ್‌ಸೈಟ್‌ ಹಾಗೂ ಪತ್ರಿಕೆಯೂ ಇದೆ.

ವಿಶ್ವಸಂಸ್ಥೆಗೆ ಮೊರೆ!
ಎಲ್ಲಕ್ಕಿಂತ ವಿಶೇಷವೆಂದರೆ, ತನ್ನೀ ದೇಶಕ್ಕೆ ವಿಶ್ವಸಂಸ್ಥೆಯ ಸ್ಥಾನಮಾನ ದೊರಕಿಸಿಕೊಳ್ಳಲು
ನಿತ್ಯಾನಂದ ಪ್ರಯತ್ನಿಸುತ್ತಿರುವುದು! ಅಚ್ಚರಿಯೆನಿಸಿದರೂ, ಇದು ಸತ್ಯ. ತನ್ನ ಹೊಸ ಪರಿಕಲ್ಪನೆಯಂತೆ ಕೈಲಾಸ ರಾಷ್ಟ್ರ ಕಟ್ಟಿರುವುದಾಗಿ ಘೋಷಿಸಿಕೊಂಡಿರುವ ನಿತ್ಯಾನಂದ, ತನ್ನೀ
ರಾಷ್ಟ್ರಕ್ಕೆ ದೇಶದ ಸ್ಥಾನಮಾನ ನೀಡಬೇಕೆಂದು ವಿಶ್ವಸಂಸ್ಥೆಯನ್ನು ಕೋರಿದ್ದಾನೆ. ವಿಶ್ವಸಂಸ್ಥೆಯಲ್ಲಿ
ಆತನ ಕಾನೂನು ಸಲಹೆಗಾರರಿಂದ ಅರ್ಜಿಯೂ ಸಲ್ಲಿಕೆಯಾಗಿದೆ!

ಟಾಪ್ ನ್ಯೂಸ್

Untitled-1

ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

fcgrdtr

ಅವಮಾನಿಸಿದ ಪಕ್ಷದಲ್ಲಿ ಇರಬೇಡಿ,ಬಿಜೆಪಿಗೆ ಬನ್ನಿ : ಅಮರೀಂದರ್ ಗೆ ಅಠಾವಳೆ ಆಹ್ವಾನ

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

ನಾಳೆ ಸಿಇಟಿ, ಪಿಯುಸಿ ಫ‌ಲಿತಾಂಶ

ನಾಳೆ ಸಿಇಟಿ, ಪಿಯುಸಿ ಫ‌ಲಿತಾಂಶ

ರಸ್ತೆ ಅಪಘಾತ : ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಸಾವು

ರಸ್ತೆ ಅಪಘಾತ : ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಸಾವು

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ : ಕಣ್ಣೆದುರೇ ಹೊತ್ತಿ ಉರಿದ ಕಾರು

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ : ಕಣ್ಣೆದುರೇ ಹೊತ್ತಿ ಉರಿದ ಕಾರು

ಐದು ವರ್ಷಗಳಿಂದ ಪ್ರೀತಿಸಿ ಮದುವೆಗೆ ಒಲ್ಲೆ ಎಂದ ಯುವಕನಿಗೆ ಠಾಣೆ ಮುಂದೆ ಧರ್ಮದೇಟು

ಐದು ವರ್ಷಗಳಿಂದ ಪ್ರೀತಿಸಿ ಮದುವೆಗೆ ಒಲ್ಲೆ ಎಂದ ಯುವಕನಿಗೆ ಠಾಣೆ ಮುಂದೆಯೇ ಥಳಿಸಿದ ಯುವತಿ

MUST WATCH

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

udayavani youtube

ನದಿಗೆ ಹಾರಿ ಎರಡು ದಿನ ಕಳೆದರೂ ಪತ್ತೆಯಾಗದ ದೇಹ : ಶೋಧ ಕಾರ್ಯ ಮುಂದುವರಿಕೆ

udayavani youtube

ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ನೂತನ ಮುಖ್ಯಮಂತ್ರಿ|UDAYAVANI NEWS BULLETIN|19/9/2021

udayavani youtube

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಹೊಸ ಸೇರ್ಪಡೆ

Untitled-1

ಜಿಲ್ಲೆಯ ಬಹುತೇಕ ಪಶು ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ

Untitled-1

ಜಿಲ್ಲೆಯಲ್ಲೇ ಅತೀ ಹೆಚ್ಚು ಮಕ್ಕಳು: ಶಿಕ್ಷಕರ ಕೊರತೆ 

Untitled-1

ಪ್ರವೇಶಾತಿ ಏರಿಕೆ; ಮೂಲಸೌಕರ್ಯ ಕೊರತೆ

ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸ್ವಾವಲಂಬನೆಯತ್ತ ದ.ಕ. ಜಿಲ್ಲೆ ದಿಟ್ಟ ಹೆಜ್ಜೆ

ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸ್ವಾವಲಂಬನೆಯತ್ತ ದ.ಕ. ಜಿಲ್ಲೆ ದಿಟ್ಟ ಹೆಜ್ಜೆ

Untitled-1

ಚೆನ್ನಾವರ ಸರಕಾರಿ ಕಿ.ಪ್ರಾ.ಶಾಲೆ: ತರಗತಿ ಕೊಠಡಿ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.