ಆನ್‌ಲೈನ್ ತರಗತಿಗಿಲ್ಲ ತಡೆ : 15 ದಿನಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಮನವಿ
Team Udayavani, Nov 28, 2020, 7:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ
ಬೆಂಗಳೂರು: ಶುಲ್ಕ ಪಾವತಿಸದೆ ಇದ್ದರೆ ಆನ್‌ಲೈನ್ ತರಗತಿ ಸ್ಥಗಿತಗೊಳಿಸುವುದಾಗಿ ಹೇಳಿದ್ದ ಖಾಸಗಿ ಶಾಲಾ ಆಡಳಿತ ಮಂಡಳಿಗಳು ತಮ್ಮ ನಿಲುವಿನಿಂದ ಕೊಂಚ ಹಿಂದೆ ಸರಿದಿವೆ. ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸರಕಾರಕ್ಕೆ 15 ದಿನಗಳ ಗಡುವನ್ನು ನೀಡಿವೆ.
ಶುಲ್ಕ ಪಾವತಿಸದಿದ್ದರೆ ನ. 30 ರಿಂದ ಆನ್‌ಲೈನ್ ತರಗತಿ ಸ್ಥಗಿತಗೊಳಿ ಸುವುದಾಗಿ ಖಾಸಗಿ ಶಾಲಾಡಳಿತ ಮಂಡಳಿಗಳು ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಗಳ ವಿವಿಧ ಸಂಘಟನೆಗಳ ರಾಜ್ಯ ಪದಾಧಿಕಾರಿಗಳೊಂದಿಗೆ ಶುಕ್ರವಾರ ಶಿಕ್ಷಣ ಇಲಾಖೆ ಆಯುಕ್ತ ವಿ. ಅನುಬ್ ಕುಮಾರ್ ಸಭೆ ನಡೆಸಿದರು. ಸಭೆಯಲ್ಲಿ ಅಧಿ ಕಾರಿಗಳ ಭರವಸೆ ಮೇರೆಗೆ ಆನ್‌ಲೈನ್ ತರಗತಿಗಳನ್ನು ನಿಗದಿಯಂತೆ ಮುಂದುವರಿಸಲು ಆಡಳಿತ ಮಂಡಳಿ ಗಳು ಸಮ್ಮತಿಸಿದವು.
“ಆಯುಕ್ತರು ಸಚಿವರ ಪರವಾಗಿ ಸ್ಪಷ್ಟನೆ ನೀಡಿದರು. ಅಲ್ಲದೆ ನಮ್ಮ ಎಲ್ಲ ಸಮಸ್ಯೆಗಳನ್ನು ಆಲಿಸಿ, ಸಚಿವರ ಮುಂದೆ ಪ್ರಸ್ತಾವಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಜತೆಗೆ, 15 ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕೋರಲಾಗಿದೆ. ಅಷ್ಟರಲ್ಲಿ ಬಗೆಹರಿಯದಿದ್ದರೆ, ಆಡ ಳಿತ ಮಂಡಳಿಗಳ ಸಂಘಟನೆಗಳು ಮತ್ತೂಮ್ಮೆ ಸಭೆ ಸೇರಿ ಸೂಕ್ತ ತೀರ್ಮಾನ ಕೈಗೊಳ್ಳಲಿವೆ’ ಎಂದು ಕರ್ನಾಟಕ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ ಸಭೆಯಲ್ಲಿ “ಖಾಸಗಿ ಅನುದಾನರಹಿತ ಸಂಸ್ಥೆಗಳ ಬೋಧಕ -ಬೋಧಕೇತರ ಸಿಬಂದಿ ಸಂಬಳವಿಲ್ಲದೆ, ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹಳಷ್ಟು ಪೋಷಕರು ಶುಲ್ಕ ಪಾವತಿಸುತ್ತಿಲ್ಲ’ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಅಲವತ್ತುಕೊಂಡರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವ್ಯಾಪಾರಿಯಿಂದ ಹಣ ದೋಚಿದ ಪ್ರಕರಣ : ಹನೂರು ಪೊಲೀಸರಿಂದ 4 ಮಂದಿ ಆರೋಪಿಗಳ ಬಂಧನ
ಕರ್ನಾಟಕದ ಒಂದಿಂಚು ಭೂಮಿಯನ್ನು ಬಿಟ್ಟು ಕೊಡೆವು : ಉದ್ಧವ್ ಠಾಕ್ರೆ ಹೇಳಿಕೆಗೆ BSY ಖಂಡನೆ
ಬೆಂಗಳೂರಿನಲ್ಲೂ ರೈತರ ಟ್ರ್ಯಾಕ್ಟರ್, ಬೈಕ್ ಪೆರೇಡ್: ಕುರುಬೂರು ಶಾಂತಕುಮಾರ್
ಸಿಡಿ ಬಗ್ಗೆ ನಾನೇನು ಹೇಳಿಲ್ಲ, ಡಿಕೆಶಿ ಹೇಳಿದ್ದನ್ನಷ್ಟೇ ಮತ್ತೆ ಹೇಳಿದೆ: ಯತ್ನಾಳ್
6 ವರ್ಷದೊಳಗಿನ ಮಕ್ಕಳ ಸರ್ವೇ ಕೈಗೊಳ್ಳಲು ಸೂಚನೆ