- Sunday 08 Dec 2019
ಪಿಯುಸಿ ಬಳಿಕ ಡಿಪ್ಲೊಮಾ 2ನೇ ವರ್ಷಕ್ಕೆ ಸೇರಲು ಅವಕಾಶ
ಬ್ರಿಡ್ಜ್ ಕೋರ್ಸ್ ಮೂಲಕ ಮೊದಲ ವರ್ಷದ ತಾಂತ್ರಿಕ ವಿಷಯಗಳ ಬೋಧನೆ
Team Udayavani, Jun 17, 2019, 6:00 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ದ್ವಿತೀಯ ಪಿಯುಸಿಯನ್ನು ವಿಜ್ಞಾನ ಅಥವಾ ತಾಂತ್ರಿಕ ವಿಷಯದಲ್ಲಿ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ 2ನೇ ವರ್ಷಕ್ಕೆ ದಾಖಲಾಗಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದಕ್ಕಾಗಿ ಬ್ರಿಡ್ಜ್ ಕೋರ್ಸ್ ಕೂಡ ಸಿದ್ಧವಾಗುತ್ತಿದೆ.
ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ ಸೇರಿಕೊಳ್ಳಲು ಈ ವರೆಗೂ ಅವಕಾಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ದಾಖಲಾಗಲು ಅವಕಾಶ ನೀಡಿದೆ.
ನೇರವಾಗಿ ಎರಡನೇ ವರ್ಷಕ್ಕೆ ಸೇರುವ ವಿದ್ಯಾರ್ಥಿಗಳು ಡಿಪ್ಲೊಮಾ ಮೊದಲನೇ ವರ್ಷದಲ್ಲಿ ಇರುವ ತಾಂತ್ರಿಕ ವಿಷಯಗಳಲ್ಲಿ ಪರಿಣತಿ ಹೊಂದಿರುವುದಿಲ್ಲ. ಈ ಕಾರಣ ಕ್ಕಾಗಿ ಅಂತಹ ವಿದ್ಯಾರ್ಥಿಗಳಿಗೆ ತಾಂತ್ರಿಕ ಮಾಹಿತಿ ನೀಡಲು ಬ್ರಿಡ್ಜ್ ಕೋರ್ಸ್ ನೀಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿ ಯೊಬ್ಬರು ಮಾಹಿತಿ ನೀಡಿದರು.
ಸಮಿತಿ ರಚನೆ
ಬ್ರಿಡ್ಜ್ ಕೋರ್ಸ್ ಹೇಗಿರಬೇಕು ಎಂಬುದಕ್ಕೆ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಒಳಗೊಂಡಿರುವ ತಜ್ಞರ ಸಮಿತಿಯನ್ನು ರಚನೆ ಮಾಡಲಾಗಿದೆ. ಸಿವಿಲ್ ಎಂಜಿನಿಯರಿಂಗ್, ಪರಿಸರ ವಿಜ್ಞಾನ, ಪಿಎಚ್‌ಇ, ವಾಟರ್ ಟೆಕ್ನಾಲಜಿ ಮತ್ತು ಆರೋಗ್ಯ ವಿಜ್ಞಾನ ಬ್ರಿಡ್ಜ್ ಕೋರ್ಸ್‌ಗೆ ಐದು ಮಂದಿ ಸದಸ್ಯರ ಸಮಿತಿ ರಚಿಸಲಾಗಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್, ಆಟೋಮೊಬೈಲ್, ಏರೋ ನಾಟಿಕ್, ಮೆಕಾಟ್ರನಿಕ್ಸ್ ಮೊದಲಾದ ಎಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಸಿದ್ಧಪಡಿಸಲು 12 ಮಂದಿ ಸದಸ್ಯರ ಸಮಿತಿ ರಚಿಸಲಾಗಿದೆ. ಇತರ ವಿಷಯಗಳಿಗೆ ಪ್ರತ್ಯೇಕ ಸಮಿತಿ ರಚಿಸಲಾಗಿದೆ.
ಒಟ್ಟು 7 ಸಮಿತಿಯ ಸದಸ್ಯರು ಜೂ. 20 ರಂದು ಸಭೆ ಸೇರಿ ಬ್ರಿಡ್ಜ್ ಕೋರ್ಸ್‌ಗಳ ಬಗ್ಗೆ ಚರ್ಚಿಸಿ ವರದಿ ಸಲ್ಲಿಸಲಿದ್ದಾರೆ. ಅದರಂತೆ ಇಲಾಖೆ ಬ್ರಿಡ್ಜ್ ಕೋರ್ಸ್ ನಿಗದಿಪಡಿಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಏನಿದು ಬ್ರಿಡ್ಜ್ ಕೋರ್ಸ್?
ವಿಜ್ಞಾನ ಅಥವಾ ತಾಂತ್ರಿಕ ವಿಷಯದಲ್ಲಿ ಪಿಯುಸಿ ಮುಗಿದ ವಿದ್ಯಾರ್ಥಿಗಳು ನೇರ ವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ಸೇರಲು ಅವಕಾಶ ನೀಡುವುದರಿಂದ ಮೊದಲ ವರ್ಷದ ಎರಡು ಸೆಮಿಸ್ಟರ್‌ಗಳು ಸಿಗುವುದಿಲ್ಲ. ಆ ಪಠ್ಯದ ತಾಂತ್ರಿಕ ಅಂಶ ಗಳನ್ನು ಅತ್ಯಂತ ಸುಲಭ ಮತ್ತು ಸರಳವಾಗಿ ವಿದ್ಯಾರ್ಥಿಗಳಿಗೆ ತಿಳಿಸಲು ಬ್ರಿಡ್ಜ್ ಕೋರ್ಸ್ ನೀಡಲಾಗುತ್ತದೆ. ನೇರವಾಗಿ ಎರಡನೇ ವರ್ಷದ ಡಿಪ್ಲೊಮಾ ಕೋರ್ಸ್‌ಗೆ ಸೇರುವ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಬ್ರಿಡ್ಜ್ ಕೋರ್ಸ್ ಪಡೆಯಬೇಕಾಗುತ್ತದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
- ರಾಜು ಖಾರ್ವಿ ಕೊಡೇರಿ
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಟ 13 ಸ್ಥಾನಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್ ಜೆಡಿಎಸ್ ತಲಾ ಒಂದು ಸ್ಥಾನದಲ್ಲಿ ಗೆಲ್ಲಬಹುದು. ಮುಂದಿನ ಮೂರೂವರೆ...
-
ಕಾಂಗ್ರೆಸ್ಗೆ 5ಕ್ಕಿಂತ ಕಡಿಮೆ ಸ್ಥಾನ ಬಂದರೆ ಸಿದ್ದು ನಾಯಕತ್ವಕ್ಕೆ ಕುತ್ತು? ಉ.ಕ. ಭಾಗದಲ್ಲಿ ಬಿಜೆಪಿ ಹೆಚ್ಚು ಗೆಲ್ಲದಿದ್ದರೆ ಬಿಎಸ್ವೈಗೆ ವೈಯಕ್ತಿಕ ಹಿನ್ನಡೆ ಬೆಂಗಳೂರು:...
-
ಬೆಂಗಳೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿ ಗಳಿಗೆ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳ ದರ್ಶನ ಮಾಡಿಸುವ "ಕರ್ನಾಟಕ ದರ್ಶನ'ಕ್ಕೆ ಎಲ್ಲ ಸಮುದಾಯದವರಿಗೂ ಅವಕಾಶ ಕಲ್ಪಿಸಲು...
-
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಮೂರೂ ರಾಜಕೀಯ ಪಕ್ಷಗಳ...
-
ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಮೂಲಕ ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲು ನಿರ್ಧರಿಸಲಾಗಿದೆ...
ಹೊಸ ಸೇರ್ಪಡೆ
-
ಚಂದ್ರಶೇಖರ ಯರದಿಹಾಳ ಸಿಂಧನೂರು: ಕಲ್ಯಾಣ ಕರ್ನಾಟಕದಲ್ಲೇ ದೊಡ್ಡ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಿಂಧನೂರು ನಗರದ ಹೈಟೆಕ್ ಬಸ್ ನಿಲ್ದಾಣ ಮೇಲೆಲ್ಲ,...
-
ಡಿ.ಬಿ. ವಡವಡಗಿ ಮುದ್ದೇಬಿಹಾಳ: ಯಾವುದೇ ಪಟ್ಟಣ, ನಗರ ಸುಂದರವಾಗಿ ಕಾಣಬೇಕಾದರೆ ಅಲ್ಲಿನ ಮುಖ್ಯ ರಸ್ತೆಗಳು ಸುಂದರವಾಗಿರಬೇಕು. ರಸ್ತೆಗಳ ನೋಟದಿಂದಲೇ ಪರಸ್ಥಳದಿಂದ...
-
ಬೆಳಗಾವಿ: ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಖಾನಾಪುರ ತಾಲೂಕಿನ ನಂದಿಹಳ್ಳಿಯ ರಾಷ್ಟ್ರೀಯ...
-
ಮುಂಬಯಿ: ಸಮುದ್ರದಲ್ಲಿ ತೇಲಿ ಬಂದ ಸೂಟ್ ಕೇಸ್ ನ ರಹಸ್ಯವನ್ನು ಪೊಲೀಸರು ಬೇಧಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ದತ್ತು ಪಡೆದ ಮಗಳೊಬ್ಬಳು ತನ್ನ ಪ್ರಿಯಕರನೊಂದಿಗೆ...
-
ಬೀದರ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹಿಂದಿನ ಎಲ್ಲ ಕಾಮಗಾರಿಗಳನ್ನು ಬರುವ ಮಾರ್ಚ್ದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ...