ಭಡ್ತಿ ಮೀಸಲು ಅನುಷ್ಠಾನಕ್ಕೆ ಆದೇಶ

Team Udayavani, May 16, 2019, 6:10 AM IST

ಬೆಂಗಳೂರು: ಮೀಸಲಾತಿ ಆಧಾರದಲ್ಲಿ ಭಡ್ತಿ ಹೊಂದಲು ರಾಜ್ಯ ಸರಕಾರ ಜಾರಿಗೆ ತಂದಿರುವ 2017ರ ತತ್ಪರಿಣಾಮದ ಜೇಷ್ಠತೆ ವಿಸ್ತರಿಸುವ ಕಾಯ್ದೆ ಅನುಷ್ಠಾನಗೊಳಿಸುವಂತೆ ರಾಜ್ಯ ಸರಕಾರ ಸಂಬಂಧ ಪಟ್ಟ ಇಲಾಖೆಗಳಿಗೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದೆ.

ಬಿ.ಕೆ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮೇ 10ರಂದು ಆದೇಶ ನೀಡಿದ್ದು, ರಾಜ್ಯ ಸರಕಾರ ಮೀಸಲಾತಿ ಆಧಾರದಲ್ಲಿ ಭಡ್ತಿ ಹೊಂದಿದ ಎಸ್ಸಿ-ಎಸ್ಟಿ ನೌಕರರ ಹಿತ ಕಾಯಲು ತತ್ಪರಿಣಾಮದ ಜೇಷ್ಠತೆ ವಿಸ್ತರಿಸುವ ಕಾಯ್ದೆ 2017ನ್ನು ಮಾನ್ಯ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ 5ರಂದು ಹೊರಡಿಸಿರುವ ಆದೇಶ ವನ್ನು ಹಿಂಪಡೆದಿದೆ. ಫೆಬ್ರ ವರಿ 27ರಂದು ರಾಜ್ಯ ಸರಕಾರ ಹೊರಡಿಸಿರುವ ಆದೇಶದಂತೆ ಮುಂಭಡ್ತಿ ಪಡೆಯುವ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಮೂವತ್ತು ದಿನಗಳೊಳಗೆ ಪೂರ್ಣಗೊಳಿಸುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ಲೋಕಸಭೆ ಚುನಾವಣೆ ಕಾರ್ಯದಲ್ಲಿ ನಿಯುಕ್ತಿಗೊಂಡಿರುವ ಅಧಿಕಾರಿಗಳು ಚುನಾವಣೆ ನೀತಿ ಸಂಹಿತೆ ಪೂರ್ಣಗೊಂಡ ಅನಂತರ ತಮಗೆ ನಿಯೋಜಿಸಿದ ಸ್ಥಳಕ್ಕೆ ವರದಿ ಮಾಡಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ. ಸದ್ಯ ಚುನಾವಣ ಕೆಲಸದ ಮೇಲಿರುವ ಅಧಿಕಾರಿಗಳ ಭಡ್ತಿ ಆದೇಶ ನೀತಿ ಸಂಹಿತೆ ಮುಕ್ತಾಯಗೊಂಡ ಅನಂತರ ಅನ್ವಯಗೊಳ್ಳಲಿದೆ.

ಸರಕಾರದ ಈ ಆದೇಶವನ್ನು ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಡಳಿತ ಮಂಡಳಿ ವ್ಯಾಪ್ತಿಗೊಳಪಡುವ ಸ್ವಾಯತ್ತ ಸಂಸ್ಥೆಗಳು, ನಿಗಮ – ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಸರಕಾರ ದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳಿಗೆ ಕಳುಹಿಸಲಾಗಿದ್ದು, ಪಾಲಿಸುವಂತೆ ಸೂಚಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕೋಲಾರ: ಲೋಕಸಭಾ ಕ್ಷೇತ್ರದ ನೂತನ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುಕ್ತ ಮಾಡಿಸಿ ಬಿಜೆಪಿ...

  • ಬ್ಯಾಡಗಿ: ವೀರಯೋಧ ಶಿವಲಿಂಗೇಶ ಪಾಟೀಲ ನಿಧನದ ಸುದ್ದಿ ಗುಂಡೇನಹಳ್ಳಿ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದ್ದು, ಇದೀಗ ಸ್ಮಶಾನ ಮೌನ ಆವರಿಸಿದೆ. ಯೋಧ ಶಿವಲಿಂಗೇಶ...

  • ಹಾವೇರಿ: ಮಳೆ ಆರಂಭಕ್ಕೂ ಮುನ್ನವೇ ಡೆಂಘೀ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ, ಶಿಕ್ಷಣ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ...

  • ಸಕಲೇಶಪುರ: ತಾಲೂಕಿನಲ್ಲಿ ಅನುಷ್ಠಾನಗೊಳಿಸ ಲಾಗುತ್ತಿರುವ ಎತ್ತಿನಹೊಳೆ ಸಮಗ್ರ ನೀರಾವರಿ ಯೋಜನೆಯಿಂದ ಮಲೆನಾಡಿನ ಪರಿಸರ ಹದಗೆಡಲು ಕಾರಣವಾಗಿದೆ ಎಂಬ ಮಾತುಗಳು...

  • ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆ ವ್ಯಾಪಾರ ಆರಂಭವಾಗಿ ಎರಡು ವಾರ ಗಳಾಗುತ್ತಾ ಬಂದರೂ ಆಲೂಗಡ್ಡೆ ಖರೀದಿಗೆ ರೈತರಿಂದ ನೀರಸ ಪ್ರತಿಕ್ರಿಯೆ...

  • ನರೇಗಲ್ಲ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಸಂಚಾರಿ ಸುರಕ್ಷಾ ಸಪ್ತಾಹ ಅಡಿಯಲ್ಲಿ ರವಿವಾರ ವಿಶೇಷ ಕಾರ್ಯಾಚರಣೆ ನಡೆಸಿ ಆಟೋಗಳ ದಾಖಲೆಗಳನ್ನು ನರಗುಂದ ಡಿವೈಎಸ್‌ಪಿ...