ರಾಜ್ಯದಲ್ಲಿ 300 ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆ : ಡಾ.ಕೆ.ಸುಧಾಕರ್

Team Udayavani, May 24, 2021, 2:18 PM IST

gfddgvcdfg

ಬೆಂಗಳೂರು : ರಾಜ್ಯದಲ್ಲಿ 300 ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಕಂಡುಬಂದಿದ್ದು, ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 300 ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಇದ್ದಾರೆ ಎಂದು ಪ್ರಾಥಮಿಕ ವರದಿ ಬಂದಿದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಇದೆ. 17 ಮೆಡಿಕಲ್ ಕಾಲೇಜುಗಳಲ್ಲಿ ಕೂಡ ವ್ಯವಸ್ಥೆ ಇದೆ. ಆದರೆ ಔಷಧಿ ಸ್ವಲ್ಪ ಕೊರತೆ ಇದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ ಎಂದರು.

ಇಡೀ ದೇಶದಲ್ಲಿ ವರ್ಷಕ್ಕೆ 100-200 ರಷ್ಟು ಜನರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗುತ್ತಿದ್ದರು. ಈಗ ರಾಜ್ಯದಲ್ಲೇ 300 ಕ್ಕೂ ಅಧಿಕ ಸೋಂಕಿತರಿರುವಾಗ ಔಷಧಿ ಕೊರತೆ ಕಂಡುಬರುತ್ತದೆ. ಇದಕ್ಕಾಗಿ ಔಷಧ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. 1 ಸಾವಿರಕ್ಕೂ ಅಧಿಕ ವೈಲ್ ಗಳನ್ನು ಕಳುಹಿಸಿಕೊಡುವ ನಿರೀಕ್ಷೆಯೂ ಇದೆ. ಬ್ಲ್ಯಾಕ್ ಫಂಗಸ್ ಗೆ 1,150 ವೈಲ್ ಔಷಧಿ ರಾಜ್ಯಕ್ಕೆ ದೊರೆತಿದೆ. 20 ಸಾವಿರ ವೈಲ್ ಗೆ ಬೇಡಿಕೆ ಇಡಲಾಗಿದೆ ಎಂದರು.

ಈ ಸೋಂಕು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಲು ಸಮಿತಿ ರಚಿಸಿದ್ದು, ಈ ಸಮಿತಿ ವರದಿ ನೀಡಿದೆ. ಸ್ಟೀರಾಯಿಡ್ ಜೊತೆಗೆ ಹ್ಯುಮಿಡಿಫೈರ್ ನಲ್ಲಿ ನಲ್ಲಿ ನೀರು ಬಳಕೆ, ಐಸಿಯು ವೆಂಟಿಲೇಟರ್ ಅನ್ನು ಇನ್ನೊಬ್ಬರಿಗೆ ಬಳಸುವಾಗ, ಒಂದೇ ಮಾಸ್ಕ್ ದೀರ್ಘಕಾಲ ಬಳಕೆ, ಟ್ಯೂಬ್, ಹಾಸಿಗೆ ಮೊದಲಾದ ಮೂಲಗಳಿಂದ ಸೋಂಕು ಬರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ತಡಗಟ್ಟುವ ಬಗೆಯನ್ನೂ ಇದರಲ್ಲಿ ತಿಳಿಸಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಕಟ್ಟಡ ನವೀಕರಣ ಕಾಮಗಾರಿ ನಡೆಸಬಾರದು, ಹೊರಗಿನವರು ವಾರ್ಡ್‍ಗೆ ಬರಬಾರದು, ಪ್ರತಿ ಪಾಳಿ ಮುಗಿದ ಮೇಲೆ ಸ್ವಚ್ಛತೆ ಮಾಡಬೇಕು, ಪ್ರತಿ ಉಪಕರಣಗಳನ್ನು ಸ್ವಚ್ಛವಾಗಿಡಬೇಕು ಎಂದು ಸೂಚಿಸಲಾಗಿದೆ ಎಂದರು.

ಕೋವಿಡ್ ನಿಂದ ಗುಣಮುಖರಾದಾಗ ಇಎನ್ ಟಿ ವೈದ್ಯರು ಮತ್ತೆ ತಪಾಸಣೆ ಮಾಡಬೇಕು. 3, 7, 21 ನೇ ದಿನ ತಪಾಸಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಆಶಾ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗೆ ವೇತನ ಪಾವತಿಸಲಾಗಿದೆ. ವೇತನ ಹೆಚ್ಚಳಕ್ಕೆ ಸಂಬಂಧಿಸಿದ ವಿಚಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಚರ್ಚಿಸಲಾಗುವುದು. 10 ಲಕ್ಷಕ್ಕೂ ಅದಿಕ ಪಿಪಿಇ ಕಿಟ್ ನಮ್ಮ ಬಳಿ ಇದೆ. ಈ ವಸ್ತುಗಳ ಗುಣಮಟ್ಟದ ಬಗೆಗಿನ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಟಾಪ್ ನ್ಯೂಸ್

ಮಂಗಳೂರು: ಪೊಲೀಸ್‌ ಎಸ್‌ಐಗಳ ವರ್ಗಾವರ್ಗಿ

ಮಂಗಳೂರು: ಪೊಲೀಸ್‌ ಎಸ್‌ಐಗಳ ವರ್ಗಾವರ್ಗಿ

ಕೊಡಗಿನ ಗಡಿಯಲ್ಲಿ ಕೇರಳದ ತ್ಯಾಜ್ಯ ! ಅಧಿಕಾರಿಗಳಿಂದ ಪರಿಶೀಲನೆ

ಕೊಡಗಿನ ಗಡಿಯಲ್ಲಿ ಕೇರಳದ ತ್ಯಾಜ್ಯ ! ಅಧಿಕಾರಿಗಳಿಂದ ಪರಿಶೀಲನೆ

ಪಡುಪಣಂಬೂರು ಬಳಿ ಭೀಕರ ಅಪಘಾತ: ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು

ಪಡುಪಣಂಬೂರು ಬಳಿ ಭೀಕರ ಅಪಘಾತ: ಕಾರು ಢಿಕ್ಕಿ ಹೊಡೆದು ಇಬ್ಬರು ಸಾವು

ಫೆ. 11: ಪುತ್ತೂರಿಗೆ ಗೃಹ ಸಚಿವ ಅಮಿತ್‌ ಶಾ ಭೇಟಿ

ಫೆ. 11: ಪುತ್ತೂರಿಗೆ ಗೃಹ ಸಚಿವ ಅಮಿತ್‌ ಶಾ ಭೇಟಿ

ದಕ್ಷಿಣ ಕನ್ನಡದ ಎಸ್‌ಪಿ ಆಗಿ ಅಮಟೆ ವಿಕ್ರಮ್‌ ಅಧಿಕಾರ ಸ್ವೀಕಾರ

ದಕ್ಷಿಣ ಕನ್ನಡದ ಎಸ್‌ಪಿ ಆಗಿ ಅಮಟೆ ವಿಕ್ರಮ್‌ ಅಧಿಕಾರ ಸ್ವೀಕಾರ

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಅಂಡರ್‌-19 ವಿಶ್ವಕಪ್‌ ವಿಜೇತರಿಗೆ ಸಮ್ಮಾನ

ಅಂಡರ್‌-19 ವಿಶ್ವಕಪ್‌ ವಿಜೇತರಿಗೆ ಸಮ್ಮಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಚ್ಯುಟಿಗೆ ಒಪ್ಪಿಗೆ: ಧರಣಿ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು

ಗ್ರಾಚ್ಯುಟಿಗೆ ಒಪ್ಪಿಗೆ: ಧರಣಿ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು

ಶಾಲಾ ಮಕ್ಕಳ ಸಮವಸ್ತ್ರ: ಸರಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಶಾಲಾ ಮಕ್ಕಳ ಸಮವಸ್ತ್ರ: ಸರಕಾರದ ವಿರುದ್ಧ ಎಚ್‌ಡಿಕೆ ಕಿಡಿ

ರಾಜ್ಯ ಸರಕಾರದ ಕಮಿಷನ್‌ ಶೇ.80ಕ್ಕೆ: ಟ್ವೀಟ್‌ ಮೂಲಕ ಕುಟುಕಿದ ಕಾಂಗ್ರೆಸ್‌

ರಾಜ್ಯ ಸರಕಾರದ ಕಮಿಷನ್‌ ಶೇ.80ಕ್ಕೆ: ಟ್ವೀಟ್‌ ಮೂಲಕ ಕುಟುಕಿದ ಕಾಂಗ್ರೆಸ್‌

ಗ್ರಾಮ ಪಂಚಾಯತ್‌ ಚುನಾವಣೆ: ಚುನಾವಣ ಆಯೋಗದಿಂದ ವೇಳಾಪಟ್ಟಿ ಪ್ರಕಟ

ಗ್ರಾಮ ಪಂಚಾಯತ್‌ ಚುನಾವಣೆ: ಚುನಾವಣ ಆಯೋಗದಿಂದ ವೇಳಾಪಟ್ಟಿ ಪ್ರಕಟ

ದೇಶದ ಆರ್ಥಿಕ ಅಭಿವೃದ್ದಿಗೆ ಪೂರಕವಾದ ಬಜೆಟ್:ಗೃಹ ಸಚಿವ ಆರಗ ಜ್ಞಾನೇಂದ್ರ

ದೇಶದ ಆರ್ಥಿಕ ಅಭಿವೃದ್ದಿಗೆ ಪೂರಕವಾದ ಬಜೆಟ್:ಗೃಹ ಸಚಿವ ಆರಗ ಜ್ಞಾನೇಂದ್ರ

MUST WATCH

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಹೊಸ ಸೇರ್ಪಡೆ

ಮಂಗಳೂರು: ಪೊಲೀಸ್‌ ಎಸ್‌ಐಗಳ ವರ್ಗಾವರ್ಗಿ

ಮಂಗಳೂರು: ಪೊಲೀಸ್‌ ಎಸ್‌ಐಗಳ ವರ್ಗಾವರ್ಗಿ

ನಾಟಕದಿಂದ ಸಾಮಾಜಿಕ ಮೌನ ಕ್ರಾಂತಿ: ಡಾ| ಆಳ್ವ

ನಾಟಕದಿಂದ ಸಾಮಾಜಿಕ ಮೌನ ಕ್ರಾಂತಿ: ಡಾ| ಆಳ್ವ

ಕೊಡಗಿನ ಗಡಿಯಲ್ಲಿ ಕೇರಳದ ತ್ಯಾಜ್ಯ ! ಅಧಿಕಾರಿಗಳಿಂದ ಪರಿಶೀಲನೆ

ಕೊಡಗಿನ ಗಡಿಯಲ್ಲಿ ಕೇರಳದ ತ್ಯಾಜ್ಯ ! ಅಧಿಕಾರಿಗಳಿಂದ ಪರಿಶೀಲನೆ

ಪಡುಪಣಂಬೂರು ಬಳಿ ಭೀಕರ ಅಪಘಾತ: ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು

ಪಡುಪಣಂಬೂರು ಬಳಿ ಭೀಕರ ಅಪಘಾತ: ಕಾರು ಢಿಕ್ಕಿ ಹೊಡೆದು ಇಬ್ಬರು ಸಾವು

ಫೆ. 11: ಪುತ್ತೂರಿಗೆ ಗೃಹ ಸಚಿವ ಅಮಿತ್‌ ಶಾ ಭೇಟಿ

ಫೆ. 11: ಪುತ್ತೂರಿಗೆ ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.