Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
ಅಧಿಕಾರದ ಗದ್ದುಗೆ ಹಿಡಿಯುವಂತೆ ಮಾಡಲು ಜನರಿಗೆ ಉತ್ತಮ ಅವಕಾಶ ಇದೆ..
Team Udayavani, Sep 19, 2024, 1:11 PM IST
ಇಸ್ಲಾಮಾಬಾದ್: ಜಮ್ಮು-ಕಾಶ್ಮೀರ(Jammu and Kashmir) ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ನೆರೆಯ ಪಾಕಿಸ್ತಾನ ಮತ್ತೊಮ್ಮೆ ಭಾರತದ ಆಡಳಿತದ ವಿಚಾರದಲ್ಲಿ ಮೂಗುತೂರಿಸಿದೆ.
ಜಮ್ಮು-ಕಾಶ್ಮೀರದ ಕಲಂ 370 ಅನ್ನು ಪುನರ್ ಜಾರಿಗೊಳಿಸುವ ಬಗ್ಗೆ ಪಾಕ್ ಸರ್ಕಾರ ಮತ್ತು ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಒಂದೇ ನಿಲುವು ಹೊಂದಿರುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಅಸೀಫ್ ಸಂದರ್ಶನವೊಂದರಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಹಂತದ 24 ಕ್ಷೇತ್ರಗಳಲ್ಲಿ ಮತದಾನ ನಡೆದ ನಂತರ ಖ್ವಾಜಾ ಅಸೀಫ್ ಈ ಹೇಳಿಕೆ ಹೊರಬಿದ್ದಿರುವುದಾಗಿ ವರದಿ ತಿಳಿಸಿದೆ.
ಜಿಯೋ(Geo News) ನ್ಯೂಸ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಖ್ವಾಜಾ, ಕಣಿವೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಬಲಿಷ್ಠವಾಗಿದ್ದು, ಜಮ್ಮು-ಕಾಶ್ಮೀರದ ಅಧಿಕಾರದ ಗದ್ದುಗೆ ಹಿಡಿಯುವಂತೆ ಮಾಡಲು ಜನರಿಗೆ ಉತ್ತಮ ಅವಕಾಶ ಇದೆ ಎಂದು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ 370ನೇ ವಿಧಿ ಮತ್ತು 35ಎ ಅನ್ನು ಪುನರ್ ಜಾರಿಗೊಳಿಸುವ ವಿಚಾರದಲ್ಲಿ ಪಾಕಿಸ್ತಾನ ಹಾಗೂ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಒಂದೇ ನಿಲುವು ಹೊಂದಿರುವುದಾಗಿ ಸಚಿವ ಖ್ವಾಜಾ ಬೆಂಬಲ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಸೆ.18ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಶೇ.59ರಷ್ಟು ಮತದಾನವಾಗಿತ್ತು. ಕಿಸ್ತ್ವಾರ್ ನಲ್ಲಿ ಶೇ.77ರಷ್ಟು, ಪುಲ್ವಾಮಾದಲ್ಲಿ ಕಡಿಮೆ (ಶೇ.46) ಮತದಾನವಾಗಿರುವುದಾಗಿ ವರದಿ ವಿವರಿಸಿದೆ.
ಸೆಪ್ಟೆಂಬರ್ 25ರಂದು ಜಮ್ಮು-ಕಾಶ್ಮೀರದಲ್ಲಿ 2ನೇ ಹಂತದ ಚುನಾವಣೆ ಹಾಗೂ ಅಕ್ಟೋಬರ್ 1ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hezbollah ದುರ್ಬಲ; ನಸ್ರಲ್ಲಾ ಉತ್ತರಾಧಿಕಾರಿಗಳೆಲ್ಲ ಫಿನಿಷ್: ನೆತನ್ಯಾಹು ಹೇಳಿಕೆ
Nobel: ಕೃತಕ ಬುದ್ಧಿಮತ್ತೆ ಗಾಡ್‌ಫಾದರ್ ಸೇರಿ ಇಬ್ಬರಿಗೆ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ
Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ
Israel-Hamas War:ಹಮಾಸ್ ದಾಳಿಗೆ 1 ವರ್ಷ-ಇಸ್ರೇಲ್ ಮೇಲೆ ಹೆಜ್ಬುಲ್ಲಾ ದಾಳಿ, ಪ್ರತಿದಾಳಿ
Explosion: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.