ಮಂಗಳವಾರ ಐಟಿ ಕಚೇರಿಯಲ್ಲಿ ಪರಮೇಶ್ವರ್ ವಿಚಾರಣೆ

Team Udayavani, Oct 12, 2019, 9:48 AM IST

ಬೆಂಗಳೂರು: ತಮ್ಮ ಮನೆ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಆದಾಯ ತನಿಖೆ ಇಲಾಖೆ ಕಚೇರಿಯಲ್ಲಿ ಡಾ.ಜಿ.ಪರಮೇಶ್ವರ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಬೆಳಿಗ್ಗೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿಗಳು, ಗುರುವಾರರಂದು ಬೆಳಗ್ಗೆ 7 ಗಂಟೆಗೆ ಸರ್ಚ್ ವಾರೆಂಟ್ ನೊಂದಿಗೆ ಅಧಿಕಾರಿಗಳು ಬಂದಿದ್ದಾರೆ.  ನಾನು ನನ್ನ ಕ್ಷೇತ್ರದ ಕೆರೆ ತುಂಬಿದ್ದಕ್ಕೆ ಪೂಜೆಗೆ ಹೋಗಿದ್ದೆ. ಮುಗಿಸಿ ಐಬಿಯಲ್ಲಿ ಇರುವಾಗ ಮಾಹಿತಿ ಇತ್ತು. ಸಿದ್ಧಾರ್ಥ ಮೆಡಿಕಲ್ ಕಾಲೇಜ್ ಬಳಿ ಸಾಕಷ್ಟು ವಾಹನಗಳು ಬಂದಿರುವ ಬಗ್ಗೆ ಮಾಹಿತಿ ಗೊತ್ತಾಯ್ತು. ಬಳಿಕ ಐಬಿಗೆ ಬಂದ ಇಬ್ಬರು ಅಧಿಕಾರಿಗಳು ಬಂದು ಸದಾಶಿವ ನಗರ ಮನೆಗೆ ಕರೆದುಕೊಂಡು ಬಂದರು ಎಂದು ದಾಳಿಯ ಬಗೆಗಿನ ಮಾಹಿತಿ ನೀಡಿದರು.

ಸಿದ್ದಾರ್ಥ ಕಾಲೇಜು ಸಂಬಂಧಿಸಿದಂತೆ ಮಾತನಾಡಿದ ಅವರು, ಮೊದಲು ನನ್ನ ಸಹೋದರ ಕಾಲೇಜು ಜವಾಬ್ದಾರಿ ಹೊತ್ತಿದ್ದರು. ಈಗ ಕಳೆದ ಆರು ತಿಂಗಳಿಂದ ನಾನು ಜವಾಬ್ದಾರಿ ಪಡೆದಿದ್ದೇನೆ. ಕಾಲೇಜಿನಲ್ಲಿ ದಾಖಲಾತಿ ವಿಚಾರವಾಗಿ ನನಗೆ ಗೊತ್ತಿಲ್ಲ. ಕಾಲೇಜ್ ಕಡೆಯಿಂದ ಮಾಹಿತಿ ಪಡೆದುಕೊಳ್ಳಿ ಎಂದು ಹೇಳಿದ್ದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆಗೆ ಬರಲು ಹೇಳಿದ್ದಾರೆ. ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ