Udayavni Special

ತಾಳುವಿಕೆಗಿಂತನ್ಯ ತಪವು ಇಲ್ಲ


Team Udayavani, Apr 15, 2021, 6:40 AM IST

ತಾಳುವಿಕೆಗಿಂತನ್ಯ ತಪವು ಇಲ್ಲ

ಮಾತು ಮಾತಿಗೂ ತಾಳ್ಮೆ ಕೆಟ್ಟು ಸಿಟ್ಟಿನಿಂದ ವರ್ತಿಸಿ ಮನೆಯ ವರೊಡನೆ ಜಗಳವಾಡಿ ಕಂಡ ಕಂಡ ವಸ್ತುಗಳನ್ನೆಲ್ಲ ಅಲ್ಲಲ್ಲಿ ಎಸೆಯುತ್ತಿದ್ದ ಮಗನಿಗೆ ತಂದೆ ತಾಳ್ಮೆಯಿಂದ ಕಬ್ಬಿಣದ ಮೊಳೆ ತುಂಬಿದ ಚೀಲವೊಂದನ್ನು ಕೊಟ್ಟು ಸಿಟ್ಟು ಬಂದಾಗಲೆಲ್ಲ ಅದನ್ನು ಮನೆಯ ಹಿಂಭಾಗದ ಗೋಡೆಗೆ ಒಂದೊಂದನ್ನೇ ಹೊಡೆಯಲು ಹೇಳಿದ.

ಬಾಲಕ ಮರುದಿನದಿಂದಲೇ ತಂದೆಯ ಸಲಹೆಯನ್ನು ಅನುಸರಿಸಿದ. ಸಿಟ್ಟು ಬಂದಾ ಗಲೆಲ್ಲ ತನ್ನವರೊಂದಿಗೆ ಕಿರುಚಾಡು ವು ದನ್ನು ಬಿಟ್ಟು ಗೋಡೆಯ ಬಳಿ ಹೋಗಿ ಮೊಳೆ ಹೊಡೆಯಲು ಆರಂಭಿಸಿದ. ಮೊದಲ ದಿನ ಇಪ್ಪತ್ತು ಆಣಿಗಳನ್ನು ಗೋಡೆಯಲ್ಲಿ ಹೊಡೆದು ಬಂದ. ಮಾರನೆಯ ದಿನ ಹದಿನೆಂಟು, ಮತ್ತೆ ಹದಿನಾರು.. ಹೀಗೆ ದಿನ ಹೋದಂತೆಲ್ಲ ಗೋಡೆಗೆ ಹೊಡೆಯುವ ಆಣಿಗಳ ಸಂಖ್ಯೆ ಕಡಿಮೆಯಾಗುತ್ತ ಬಂತು. ಗಟ್ಟಿಯಾದ ಗೋಡೆಯಲ್ಲಿ ಕಬ್ಬಿಣದ ಆಣಿಗಳನ್ನು ಹೊಡೆದು ಕೂರಿಸುವ ಕಷ್ಟಕ್ಕಿಂತ ಸಿಟ್ಟನ್ನು ನಿಯಂತ್ರಿಸಿಕೊಳ್ಳುವುದೇ ಸುಲಭ ಅಂತ ಬಾಲಕನಿಗೆ ಅನಿಸಿಬಿಟ್ಟಿತು. ಈ ಕಷ್ಟದ ಕೆಲಸದಿಂದ ತಪ್ಪಿಸಿಕೊಳ್ಳುವ ನಿರ್ಧಾರ ಮಾಡಿ ಸಿಟ್ಟನ್ನು ನಿಯಂತ್ರಿಸತೊಡಗಿದ. ಕ್ರಮೇಣ ಸಿಟ್ಟು ಕಡಿಮೆಯಾಗಿ ಗೋಡೆಯಲ್ಲಿ ಒಂದು ಮೊಳೆಯನ್ನೂ ಹೊಡೆಯದ ದಿನವೊಂದು ಬಂದು ಬಿಟ್ಟಿತು. ಖುಷಿಯಿಂದ ತಂದೆಯ ಬಳಿ ಬಂದು ಇದನ್ನು ತಿಳಿಸಿದ.

ಪ್ರೀತಿಯಿಂದ ತಂದೆ ಮತ್ತೆ ಹೇಳಿದ, ಇನ್ನೂ ಕೆಲವು ಕಾಲ ಈ ಸಿಟ್ಟನ್ನು ನಿಯಂತ್ರ ಣದಲ್ಲಿ ಇರಿಸಿಕೊಳ್ಳಲು ಆ ಮೊಳೆಗಳನ್ನೆಲ್ಲ ನಿಧಾನವಾಗಿ ದಿನಕ್ಕೊಂದರಂತೆ ಜಾಗರೂ ಕತೆಯಿಂದ ತೆಗೆದು ಬಿಡು ಅಂತ. ಸಹನೆ ಯಿಂದ ಮಗ ಅದನ್ನೆಲ್ಲ ತೆಗೆಯಲು ಆರಂಭಿಸಿದ. ಗೋಡೆಯಲ್ಲಿ ಇದ್ದ ಮೊಳೆ ಯೆಲ್ಲ ಖಾಲಿಯಾಯಿತು. ಮತ್ತೆ ತಂದೆ ಯ ಬಳಿ ತೆರಳಿ ಈ ವಿಷಯ ತಿಳಿಸಿದ.

ಮಗನನ್ನು ತಂದೆ ಗೋಡೆಯ ಬಳಿ ಕರೆದು “ಒಳ್ಳೆಯ ಕೆಲಸವನ್ನೇ ಮಾಡಿದೆ ಮಗೂ. ಆದರೆ ಅಲ್ಲಿ ಉಳಿದ ಕಲೆಗಳನ್ನು ತೋರಿಸುತ್ತ ಗೋಡೆ ಮತ್ತೆ ಮೊದಲಿನ ಹಾಗೆಯೇ ಉಳಿದಿಲ್ಲ ನೋಡು’ ಎಂದ. ತೂತಿನಿಂದಾದ ಕಲೆಗಳು ಗೋಡೆಯನ್ನು ಹಾಳು ಮಾಡಿ ಬಿಟ್ಟಿವೆ.ಆ ಕಲೆಗಳು ತತ್‌ಕ್ಷಣ ಮಾಸಿ ಹೋಗಿಲ್ಲ. ಹಾಗೆಯೇ ಸಿಟ್ಟಿನಿಂದ ಆಡಿದ ಮಾತುಗಳು ಎಷ್ಟೇ ಕ್ಷಮೆ ಕೇಳಿದರೂ ಮನದಿಂದ ಮಾಸಿಹೋಗದು. ಅವುಗಳು ಸಣ್ಣದೊಂದು ಕಹಿಯನ್ನು ಉಳಿಸಿಯೇ ಬಿಡುತ್ತದೆ. ಆದುದರಿಂದ ತಾಳ್ಮೆ ಕಳೆದುಕೊಂಡು ಸಿಟ್ಟಿನ ಭರದಲ್ಲಿ ಮಾತನಾಡುವ ಮೊದಲು ಅದರ ಪರಿ ಣಾಮವನ್ನು ಯೋಚಿಸಬೇಕು. ರಕ್ತ ಬರುವಂತೆ ಚೂರಿಯಿಂದ ಚುಚ್ಚಿದ ಗಾಯ ಮಾಸಿ ಹೋದರೂ ಗಾಯದ ಕಲೆ ಮಾತ್ರ ಉಳಿದೇ ಬಿಡುತ್ತದೆ. ಹಾಗಾಗಿ ಕೋಪವನ್ನು ನಿಯಂತ್ರಣದಲ್ಲಿ ಇರಿಸಿ ಕೊಳ್ಳಲು ಪ್ರಯತ್ನಿಸಬೇಕು’ ಎಂದ.

ಈ ಕಥೆ ಆ ಬಾಲಕನಿಗೆ ಮಾತ್ರವಲ್ಲ, ನಮ್ಮೆಲ್ಲರ ಬದುಕಿಗೂ ಅನ್ವಯಿಸುತ್ತದೆ ಅಲ್ಲವೆ? ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ನಿಯಂತ್ರಣ ತಪ್ಪಿ ಬರುವ ಮಾತುಗಳು ಅಚ್ಚಳಿ ಯದ ನೋವನ್ನು ಉಳಿಸಿ ಹೋಗುತ್ತದೆ. ಅದೆಷ್ಟೋ ಬಾರಿ ಸಣ್ಣ ಪುಟ್ಟ ಮುಳ್ಳನ್ನು ತೆಗೆಯಲು ಬಟ್ಟೆ ಹೊಲಿಯುವ ಸೂಜಿಯ ಬದಲು ಗೋಣಿ ಹೊಲಿಯುವ ದಬ್ಬಣವನ್ನೇ ಉಪಯೋಗಿಸುತ್ತೇವೆ. ಮುಳ್ಳು ಹೋಗುವ ಬದಲು ಅದು ಒಂದಿಷ್ಟು ಗಾಯವನ್ನು ಉಂಟು ಮಾಡಬಹುದೆಂಬ ಅಪಾಯವನ್ನು ಮರೆತು ಬಿಡುತ್ತೇವೆ. ಸಿಟ್ಟಿನಲ್ಲಿ ಕಿರುಚಾಡುತ್ತೇವೆ. ಮಾತು, ಕೃತಿ ಎರಡೂ ನಿಯಂತ್ರಣ ತಪ್ಪುತ್ತದೆ. ಅನಾಹುತವಾಗುತ್ತದೆ.

ಬದುಕು ಸುಂದರವಾಗಿರಬೇಕೆಂದರೆ ಸಿಟ್ಟನ್ನು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸ ಬೇಕು. ಸಿಟ್ಟಿನಲ್ಲಿರುವಾಗ ಯಾವ ಮಾತುಗಳನ್ನೂ ಆಡದೆ ಆದಷ್ಟು ಸುಮ್ಮನಿ ರಬೇಕು. ಆಡಿದ ಮಾತನ್ನು ಮರಳಿ ಪಡೆಯಲಾಗದು. ಗೋಡೆಯಲ್ಲಿ ಕಲೆಗಳು ಉಳಿದುಬಿಟ್ಟ ಹಾಗೆ ಸಿಟ್ಟಿನಿಂದ ಹೊರಬಿದ್ದ ಮಾತುಗಳು ಮನದ ಗೋಡೆಯಲ್ಲಿ ಕಲೆಗಳಾಗಿ ಅಚ್ಚೊತ್ತಿ ಬಿಡಬಹುದು. ಸಿಟ್ಟನ್ನು ತಣ್ಣಗಾಗಿಸುವ ದಾರಿ ಹುಡುಕಿ ಪ್ರಶಾಂತವಾಗಿರಲು ಕಲಿಯೋಣ.

– ವಿದ್ಯಾ ಅಮ್ಮಣ್ಣಾಯ, ಕಾಪು

ಟಾಪ್ ನ್ಯೂಸ್

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

yytyyt

2ನೇ ಮೀರಜ್‌ ಖ್ಯಾತಿ ಬಾಗಲಕೋಟೆಯಲ್ಲಿ ಆಕ್ಸಿಜನ್‌ ಆತಂಕ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಪರೀಕ್ಷೆ ವೇಳೆ ಕೋವಿಡ್ ಲಕ್ಷಣ ಇರುವವರಿಗೆ ಮಾತ್ರೆ ನೀಡುವಂತೆ ಅರೋಗ್ಯ ಇಲಾಖೆ ಸೂಚನೆ

yuyutu6

ತಂದೆ ಕಳೆದುಕೊಂಡ ಮರುದಿನವೇ ವೈದ್ಯ ಸೇವೆಗೆ ಹಾಜರ್‌

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anivasi kannadiga

ಅವನ ಕಣ್ಣಲ್ಲಿ ನನ್ನೂರಿನ ಬೆಳಕು

“I ‘m my strength

“ನಾನೇ’ ನನ್ನ ಶಕ್ತಿ

ಮಾನವೀಯ ದೃಷ್ಟಿಯಿಂದ ಒಂದಾಗೋಣ

ಮಾನವೀಯ ದೃಷ್ಟಿಯಿಂದ ಒಂದಾಗೋಣ

ಲಸಿಕೆಯ ಕೊರತೆ ಬಗೆಹರಿಯದೇ 18+ ಲಸಿಕೆ ಅನುಮಾನ

ಲಸಿಕೆಯ ಕೊರತೆ ಬಗೆಹರಿಯದೇ 18+ ಲಸಿಕೆ ಅನುಮಾನ

a story of covid time

ಕೋವಿಡ್‌ ಶಕೆಯ ಸುಖಾಂತ್ಯದ ಕತೆ

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

6-22

ಆಮ್ಲಜನಕ ಲಭ್ಯತೆ ಸಮಸ್ಯೆ; ಶಾಸಕ ಹಾಲಪ್ಪ ಆತಂಕ

6-21

ಕೆಲ ಅಸಮಾಧಾನದ ಮಧ್ಯೆಯೂ ಜನಪರ ಕೆಲಸದ ಸಂತೃಪ್ತಿ ಇದೆ : ಹಕ್ರೆ

6-20

ಸೋಂಕು ತಡೆಗೆ ಎಲ್ಲ ವಾರ್ಡ್‌ಗಳಲ್ಲಿ ಸ್ಯಾನಿಟೈಸ್‌

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.