ಯುಎಇ ಐಪಿಎಲ್ನಲ್ಲಿ ಆಡದ ವಿದೇಶೀಯರಿಗೆ ವೇತನ ಕಡಿತ?
Team Udayavani, Jun 2, 2021, 11:58 PM IST
ಮುಂಬಯಿ: ಯುಎಇಯಲ್ಲಿ ಐಪಿಎಲ್ನ ಮುಂದುವರಿದ ಭಾಗ ವನ್ನು ನಡೆಸಲು ಬಿಸಿಸಿಐ ಉದ್ದೇಶಿಸಿದೆ. ಮೂಲಗಳ ಪ್ರಕಾರ, ಈ ಅವಧಿಯಲ್ಲಿ ಬಹುತೇಕ ವಿದೇಶಿ ಆಟಗಾರರಿಗೆ ಪಾಲ್ಗೊಳ್ಳುವುದು ಕಷ್ಟ. ಇದನ್ನು ಅರಿತಿರುವ ಬಿಸಿಸಿಐ, ಯಾವ ವಿದೇಶಿ ಆಟಗಾರರು ಲಭ್ಯರಿರುವುದಿಲ್ಲವೋ, ಅವರ ವೇತನಕ್ಕೆ ಕತ್ತರಿ ಹಾಕುವ ಸುಳಿವು ನೀಡಿದೆ.
ಉದಾಹರಣೆಗೆ, ಕೆಕೆಆರ್ ಪರ ಆಡುತ್ತಿರುವ ಆಸ್ಟ್ರೇಲಿಯದ ವೇಗಿ ಕಮಿನ್ಸ್ಗೆ 15.5 ಕೋಟಿ ರೂ. ವೇತನವಿದೆ. ಅವರು ಉಳಿದ ಭಾಗದಲ್ಲಿ ಆಡದೇ ಹೋದರೆ ಕೇವಲ 7.75 ಕೋಟಿ ರೂ. ಮಾತ್ರ ಪಡೆಯಲಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ ಫ್ರಾಂಚೈಸಿಗಳು ಈ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ.
ಇದನ್ನೂ ಓದಿ : ಕೇಂದ್ರದ ನೂತನ ಐಟಿ ನಿಯಮಗಳು ತನಗೆ ಅನ್ವಯಿಸಲ್ಲ: ಗೂಗಲ್
ಒಂದು ವೇಳೆ ಆಟಗಾರರು ನ್ಯಾಯಾಲಯದ ಮೆಟ್ಟಿಲೇರಿದರೆ ಇದು ಅಂಗೀಕೃತಗೊಳ್ಳುತ್ತದೆಯೇ ಎನ್ನುವುದು ಯೋಚಿಸಬೇಕಾದ ಸಂಗತಿ. ಇಲ್ಲಿ ಅವರು ತಾವಾಗಿಯೇ ಕೂಟದಿಂದ ಹೊರಹೋಗಿಲ್ಲ. ಕೊರೊನಾ ಪರಿಸ್ಥಿತಿಯಿಂದ ಬಿಸಿಸಿಐ ತಾನೇ ಕೂಟವನ್ನು ಮುಂದೂಡಿದ್ದರಿಂದ ಹೊರಹೋಗಿದ್ದಾರೆ ಎಂಬ ಅಂಶ ಗಮನ ಸೆಳೆಯಲಿದೆ. ಬಿಸಿಸಿಐನ ನಿಗದಿತ ವೇಳಾಪಟ್ಟಿಯಲ್ಲಿ ಅವರು ಆಡಲು ಸಿದ್ಧವಿದ್ದುರಿಂದ ಇಲ್ಲಿ ವೇತನ ಕತ್ತರಿಸುವುದು ಕಷ್ಟಕರವಾಗಲಿದೆ ಎಂಬ ಲೆಕ್ಕಾಚಾರವೂ ಇದೆ.