ಭಾಗವತ್-ಮುಲಾಯಂ ಭೇಟಿ ಫೋಟೋ ವೈರಲ್
"ಸಮಾಜವಾದಿ ಪಕ್ಷದ ಮೊದಲ ಪದ "ಎಸ್' ಎಂದರೆ ಸಂಘವಾದವೇ' ಎಂದು ಪ್ರಶ್ನಿಸಿದೆ.
Team Udayavani, Dec 22, 2021, 11:40 AM IST
ಹೊಸದಿಲ್ಲಿ/ಲಕ್ನೋ: ಸಮಾಜ ವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೊಸದಿಲ್ಲಿಯಲ್ಲಿ ಭೇಟಿಯಾದ ಫೋಟೋ ಈಗ ವೈರಲ್ ಆಗಿದೆ.
ಸೋಮವಾರ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೊಮ್ಮಗಳ ವಿವಾಹ ಆರತಕ್ಷತೆಯಲ್ಲಿ ಅವರಿಬ್ಬರು ಭೇಟಿಯಾಗಿದ್ದರು.
ಉ.ಪ್ರ.ಪ್ರದೇಶ ಕಾಂಗ್ರೆಸ್ ಸಮಿತಿ ಈ ಫೋಟೋ ಟ್ವೀಟ್ ಮಾಡಿ, “ಸಮಾಜವಾದಿ ಪಕ್ಷದ ಮೊದಲ ಪದ “ಎಸ್’ ಎಂದರೆ ಸಂಘವಾದವೇ’ ಎಂದು ಪ್ರಶ್ನಿಸಿದೆ.
ಅದಕ್ಕೆ ತಿರುಗೇಟು ನೀಡಿದ ಉ.ಪ್ರ.ಬಿಜೆಪಿ ಘಟಕ “ಫೋಟೋವೇ ಎಲ್ಲವನ್ನೂ ಹೇಳುತ್ತದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿ ತಿರುಗೇಟು ನೀಡಿದೆ. ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್