ಗೋ ಹತ್ಯೆಗೆ ಪ್ರಚೋದನೆ ನೀಡಿದರೆ ಸಿದ್ದರಾಮಯ್ಯರನ್ನೇ ಜೈಲಿಗೆ ಹಾಕುತ್ತೇವೆ : ಪ್ರಭು ಚವ್ಹಾಣ್
Team Udayavani, Jan 13, 2021, 9:09 PM IST
ಕೊಪ್ಪಳ: ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರೂ ಸಿದ್ದರಾಮಯ್ಯ ಅವರು ಗೋ ಮಾಂಸ ತಿನ್ನುವೆ ಎಂದೆನ್ನುತ್ತಿದ್ದಾರೆ. ಈ ರೀತಿ ಗೋ ಹತ್ಯೆಗೆ ಪ್ರಚೋದನೆ ನೀಡಿದರೆ ಅವರನ್ನೇ ಜೈಲಿಗೆ ಹಾಕ್ತೇವೆ ಎಂದು ಪಶು ಪಾಲನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದೇವೆ. ಗೋವುಗಳನ್ನು ನಾವು ಮಾತೆ ಎಂದು ಪೂಜೆ ಮಾಡುತ್ತೇವೆ. ಅವುಗಳನ್ನು ಹತ್ಯೆ ಮಾಡಿ ತಿನ್ನುವುದು ಮಹಾ ಅಪರಾಧ. ಸಿದ್ದರಾಮಯ್ಯ ಅವರೂ ಗೋವುಗಳನ್ನು ಮಾತೆ ಎಂದು ಪೂಜೆ ಮಾಡ್ತಾರೆ. ಆದರೆ ಗೋ ಮಾಂಸ ತಿನ್ನುತ್ತೇವೆ ಎನ್ನುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ಎಂದರಲ್ಲದೇ, ಜಗದೀಶ್ ಶೆಟ್ಟರ್ ಅವರು ನನಗೊಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಕೊಕ್ಕಡ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ : ರಬ್ಬರ್, ದಾಖಲೆ ಪತ್ರ ಬೆಂಕಿಗಾಹುತಿ
ಮುಂದಿನ ದಿನದಲ್ಲಿ ಗೋವು ಹತ್ಯೆಗೆ ಪ್ರಚೋದನೆ ನೀಡುವವರ ಮೇಲೆ ಕ್ರಮ ಕೈಗೊಳ್ಳುವ ಕಾಯ್ದೆ ತರುವಂತೆ ಹೇಳಿದ್ದಾರೆ. ಅದರಂತೆ ಗೋಹತ್ಯೆ ಬಗ್ಗೆ ಪ್ರೋಚದನೆ ನೀಡಿದರೆ ನಾವು ಸಿದ್ದರಾಮಯ್ಯರನ್ನೂ ಜೈಲಿಗೆ ಹಾಕ್ತೇವೆ. ಸಿದ್ದರಾಮಯ್ಯ ಹಿಂದೂವಾದ್ರೂ, ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ವಿರೋಧಿಸುತ್ತಾರೆ. ಅವರೊಬ್ಬ ವಿರೋಧ ಪಕ್ಷದ ನಾಯಕರಾಗಿ ಕಾಯ್ದೆಯನ್ನ ವಿರೋಧ ಮಾಡುತ್ತಿದ್ದಾರೆ ಅಷ್ಟೆ ಎಂದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444