Udayavni Special

ಕೋಟಿ ಮೀರಿದ ಒಲಿಂಪಿಕ್ಸ್‌ ಶೂರರ ಕಾಣಿಕೆ : ಪ್ರಧಾನಿ ಮೋದಿ ಜನ್ಮದಿನ ಸಂದರ್ಭ ಉಡುಗೊರೆ ಹರಾಜು

Team Udayavani, Sep 18, 2021, 7:20 AM IST

ಕೋಟಿ ಮೀರಿದ ಒಲಿಂಪಿಕ್ಸ್‌ ಶೂರರ ಕಾಣಿಕೆ : ಪ್ರಧಾನಿ ಮೋದಿ ಜನ್ಮದಿನ ಸಂದರ್ಭ ಉಡುಗೊರೆ ಹರಾಜು

ಹೊಸದಿಲ್ಲಿ: ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್‌ ಚೋಪ್ರಾ ಅವರ ಜಾವೆಲಿನ್‌, ಪ್ಯಾರಾಲಿಂಪಿಕ್ಸ್‌ನಲ್ಲಿ ಬಂಗಾರದ ಬೇಟೆಯಾ3ಡಲು ಕೃಷ್ಣ ನಗರ್‌ ಬಳಸಿದ್ದ ಬ್ಯಾಡ್ಮಿಂಟನ್‌ ರ್ಯಾಕೆಟ್‌, ಪಿ.ವಿ. ಸಿಂಧುಗೆ ಕಂಚಿನ ಪದಕ ತಂದಿತ್ತ ರ್ಯಾಕೆಟ್‌…

– ಟೋಕಿಯೊದಲ್ಲಿ ನಡೆದ ಎರಡು ಒಲಿಂಪಿಕ್ಸ್‌ ಕೂಟಗಳಲ್ಲಿ ಬಳಕೆಯಾದ ಕ್ರೀಡೋಪಕರಣಗಳು ಈಗ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ವಸ್ತುಗಳು! ಪ್ರಧಾನಿ ಮೋದಿ ಅವರ 71ನೇ ಜನ್ಮದಿನ ಪ್ರಯುಕ್ತ ಸಂಸ್ಕೃತಿ ಸಚಿವಾಲಯವು ಮೋದಿ ಅವರಿಗೆ ವಿವಿಧ ಸಂದರ್ಭಗಳಲ್ಲಿ ಲಭಿಸಿದ ಉಡುಗೊರೆಗಳನ್ನು ಹರಾಜಿಗೆ ಇರಿಸಿದೆ. ಇವುಗಳಲ್ಲಿ ಕ್ರೀಡೋಪಕರಣಗಳು, ಚಿತ್ರಕಲಾಕೃತಿಗಳು, ಅಂಗವಸ್ತ್ರ ಇತ್ಯಾದಿಗಳು ಸೇರಿವೆ. ಪ್ರತೀ ವಸ್ತುಗಳ ಮೇಲೆ ಉಡುಗೊರೆ ನೀಡಿದವರ ಸಹಿ ಇದೆ.

ಖರೀದಿಗೆ ಅಕ್ಟೋಬರ್‌ 3ರ ವರೆಗೆ ಕಾಲಾವಕಾಶ ನೀಡಲಾಗಿದೆಯಾದರೂ ಹಲವು ಉಡುಗೊರೆಗಳ ಹರಾಜು ಈಗಾಗಲೇ ಪೂರ್ಣ ಗೊಂಡಿದೆ. https://pmmementos.gov.in/- ಜಾಲತಾಣದಲ್ಲಿ ಇವುಗಳ ಖರೀದಿಗೆ ಸಚಿವಾಲಯ ಅವಕಾಶ ತೆರೆದಿರಿಸಿದೆ.

ಕತ್ತಿವರಸೆ ಖಡ್ಗ 10 ಕೋಟಿ ರೂ.
ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡು ದಾಖಲೆ ನಿರ್ಮಿಸಿದ್ದ ಭಾರತದ ಮೊದಲ ಫೆನ್ಸಿಂಗ್‌ ಪಟು ಸಿ.ಎ. ಭವಾನಿ ದೇವಿ ನೀಡಿದ ಕತ್ತಿವರಸೆ ಖಡ್ಗ 10 ಕೋಟಿ ರೂ.ಗಳಿಗೆ ಬಿಕರಿಯಾಗಿದೆ.

ಬ್ಯಾಡ್ಮಿಂಟನ್‌ ರ್ಯಾಕೆಟ್‌ 10 ಕೋಟಿ ರೂ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಚಿನ್ನದ ಪದಕ ತಂದುಕೊಟ್ಟ ಬ್ಯಾಡ್ಮಿಂಟನ್‌ ತಾರೆ ಕೃಷ್ಣ ನಗರ್‌ ಬಳಸಿದ್ದ ರ್ಯಾಕೆಟ್‌ ಕೂಡ 10 ಕೋಟಿ ರೂ.ಗಳಿಗೆ ಹರಾಜಾಗಿದೆ.

ಜಾವೆಲಿನ್‌- 1.5 ಕೋಟಿ ರೂ.
ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ದೇಶಕ್ಕೆ ಚಿನ್ನ ತಂದುಕೊಟ್ಟ ನೀರಜ್‌ ಚೋಪ್ರಾ ಬಳಸಿದ್ದ ಜಾವೆಲಿನ್‌ 1.5 ಕೋಟಿ ರೂ. ಮೊತ್ತದಲ್ಲಿದ್ದು, ಇದು ತನ್ನ ಹರಾಜು ದರವನ್ನು ಏರಿಸಿಕೊಳ್ಳುತ್ತಲೇ ಇದೆ.

ಬ್ಯಾಡ್ಮಿಂಟನ್‌ ರ್ಯಾಕೆ ಟ್‌- 90 ಲಕ್ಷ ರೂ.
ಒಲಿಂಪಿಕ್ಸ್‌ನಲ್ಲಿ ಇತ್ತೀಚೆಗೆ ಕಂಚು ಗೆದ್ದ ಪಿ.ವಿ. ಸಿಂಧು ಸಹಿ ಮಾಡಿರುವ ರ್ಯಾಕೆಟ್‌ನ ಹರಾಜು ಬೆಲೆ 90 ಲಕ್ಷ ರೂ. ಮೀರಿ ಕೋಟಿ ರೂ. ಗಡಿ ಸಮೀಪಿಸಿದೆ.

ಕೇದಾರನಾಥ ಚಿತ್ರ 5 ಲಕ್ಷ ರೂ.
ಕೇದಾರನಾಥದಲ್ಲಿ ಮೋದಿ ನಿಂತಿರುವ ವರ್ಣಚಿತ್ರ ಹರಾಜಿಗಿದೆ. ಇದು ಐಎಎಸ್‌ ಅಧಿಕಾರಿಯೊಬ್ಬರ ಕೊಡುಗೆ.

ವಿದೇಶಗಳಲ್ಲಿ ಮೋದಿ 8 ಲಕ್ಷ ರೂ.
ವಿದೇಶಗಳ ನಾಯಕರೊಂದಿಗೆ ನರೇಂದ್ರ ಮೋದಿ ಇರುವ ವರ್ಣಚಿತ್ರ ಆಕರ್ಷಣೆ ಹುಟ್ಟಿಸಿದೆ. ಮನೋಜ್‌ ಗುಪ್ತಾ ಎಂಬವರ ಕಾಣಿಕೆ ಇದು.

ತಾರಾಪಥದಲ್ಲಿ ಮೋದಿ 5 ಲಕ್ಷ ರೂ.
ಇದು ಮೊಹ್ಸಿನ್‌ ಶೇಖ್‌ ಎಂಬವರ ಚಿತ್ರಕಲಾಕೃತಿ. ಗ್ರಹ-ತಾರೆಗಳ ನಡುವೆ ಮೋದಿ ಅವರು ಕೈಬೀಸುತ್ತಿರುವಂತಿದೆ.

ಟಾಪ್ ನ್ಯೂಸ್

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮ್ಮಾಯಿ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

1-www

ಲ್ಯಾಪ್‌ಟಾಪ್‌ಗಳಲ್ಲಿ ಅಡಗಿಸಿಟ್ಟಿದ್ದ 2.19 ಕೋಟಿ ಮೌಲ್ಯದ ಚಿನ್ನ ವಶ !

jala

ಉತ್ತರಾಖಂಡದಲ್ಲಿ ಜಲಪ್ರಳಯ : 64 ಮಂದಿ ಬಲಿ, 7,000 ಕೋಟಿ ರೂ ನಷ್ಟ

ದೇಶದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ: ಬೆಲೆ ಏರಿಕೆಗೆ ಸಚಿವರ ಪ್ರತಿಕ್ರಿಯೆ

ದೇಶದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ: ಬೆಲೆ ಏರಿಕೆಗೆ ಸಚಿವರ ಪ್ರತಿಕ್ರಿಯೆ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭ

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭ: ವಿದ್ಯಾರ್ಥಿಗಳ ಸಂಭ್ರಮ

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭ: ವಿದ್ಯಾರ್ಥಿಗಳ ಸಂಭ್ರಮ

ಹೆದ್ದಾರಿಯಿಂದ ನಗರಕ್ಕೆ ಪ್ರವೇಶ: ಸಮಿತಿ ರಚನೆ

ಹೆದ್ದಾರಿಯಿಂದ ನಗರಕ್ಕೆ ಪ್ರವೇಶ: ಸಮಿತಿ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.