ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್-ತೆಲುಗು ಟೈಟಾನ್ಸ್ ಪಂದ್ಯ ಡ್ರಾ
Team Udayavani, Jan 25, 2022, 10:44 PM IST
ಬೆಂಗಳೂರು: ಅತ್ಯಂತ ಕುತೂಹಲ ಮತ್ತು ರೋಮಾಂಚನ ಕೆರಳಿಸಿದ ತೆಲುಗು ಟೈಟಾನ್ಸ್ ಮತ್ತು ಹರ್ಯಾಣ ಸ್ಟೀಲರ್ ನಡುವಿನ ಮಂಗಳವಾರದ ಪ್ರೊ ಕಬಡ್ಡಿ ಪಂದ್ಯ 39-39 ಅಂಕದಿಂದ ಡ್ರಾ ದಲ್ಲಿ ಮುಕ್ತಾಯಕಂಡಿದೆ.
ಪಂದ್ಯದ ಆರಂಭದಿಂದಲೂ ಇತ್ತಂಡಗಳ ಆಟ ಜಿದ್ದಾಜಿದ್ದಿನಿಂದ ಕೂಡಿತ್ತು. ಉಭಯ ತಂಡಗಳ ಆಟಗಾರರು ಜಿದ್ದಿಗೆ ಬಿದ್ದವರಂತೆ ಅಂಕ ಗಳಿಸುತ್ತಲೇ ಸಾಗುತ್ತಿದ್ದರು. ಪಂದ್ಯದ ಅಂತಿಮ ಕ್ಷಣದಲ್ಲಿ ಹರ್ಯಾಣ ಒಂದು ಅಂಕ ಮುನ್ನಡೆ ಸಾಧಿಸಿತ್ತು. ಆದರೆ ತೆಲುಗು ತಂಡದ ಆಟಗಾರ ಅಂಕಿತ್ ಮಿಂಚಿನ ರೈಡಿಂಗ್ ಮೂಲಕ ಒಂದು ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
ತೆಲುಗು ಪರ ರೈಡರ್ ಅಂಕಿತ್ (10), ಡಿಫೆಂಡರ್ ಸಂದೀಪ್ (6) ಅಂಕ ಗಳಿಸಿ ಮಿಂಚಿದರು. ಇತ್ತ ಹರ್ಯಾಣದಲ್ಲಿ ನಾಯಕ ವಿಕಾಸ್ ಕಂಡೊಲಾ (10), ರೋಹಿತ್ ಗುಲಿಯಾ, ವಿನಯ್ ತಲಾ 8 ಅಂಕ ಸಂಪಾದಿಸಿದರು.