Putturu: ಬೆದ್ರಾಳ ತೋಡಿಗೆ ದಿಢೀರ್ ಕುಸಿದ ಗುಡ್ಡ, ತೋಟ ಜಲಾವೃತ; ಅಪಾಯದಲ್ಲಿ ಮನೆ
Team Udayavani, Aug 4, 2024, 1:40 AM IST
ಪುತ್ತೂರು: ನಗರದ ರಾಜಕಾಲುವೆ, ಉಪ ತೋಡುಗಳ ಮಳೆ ನೀರು ಹರಿಯುವ ಬೆದ್ರಾಳ ತೋಡಿಗೆ ಗುಡ್ಡೆ ಕುಸಿದು ಪಕ್ಕದ ಅಡಿಕೆ ತೋಟಗಳು ಜಲಾವೃತಗೊಂಡು ಮನೆಯೊಂದು ಅಪಾಯದ ಅಂಚಿನಲ್ಲಿದೆ.
ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು ಕೆಮ್ಮಿಂಜೆಬೈಲಿನಲ್ಲಿ ಬೆದ್ರಾಳ ತೋಡಿಗೆ ಭಾರೀ ಪ್ರಮಾಣದ ಗುಡ್ಡೆಯ ಮಣ್ಣು ಕುಸಿದು ಬಿದ್ದು ತೋಡಿನಲ್ಲಿ ಮಳೆ ನೀರು ಹರಿಯುವಿಕೆಗೆ ಅಡ್ಡಿಯಾಗಿದೆ. ಪರಿಣಾಮವಾಗಿ ಪಕ್ಕದಲ್ಲಿರುವ ಅಡಿಕೆ ತೋಟಗಳಿಗೆ ನೀರು ನುಗ್ಗಿ ತೋಟಗಳು ಜಲಾವೃತವಾಗಿವೆ.
ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಎಂಜಿನಿಯರ್ ಸಚಿನ್, ಮುತ್ತು ಶೆಟ್ಟಿ ಅವರ ತೋಟಗಳು ಜಲಾವೃತಗೊಂಡಿವೆ. ತೋಡಿನ ಬದಿಯಲ್ಲಿರುವ ಯಶೋದಾ ಅವರ ಮನೆ ಅಪಾಯದ ಅಂಚಿನಲ್ಲಿದೆ. ಸ್ಥಳಕೆ ನಗರಸಭಾ ಸದಸ್ಯ ಬಾಲಚಂದ್ರ, ಪೌರಾಯುಕ್ತ ಮಧು ಎಸ್. ಮನೋಹರ್ ಮತ್ತು ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಪುತ್ತೂರು: ರಾಜ್ಯ ಹೆದ್ದಾರಿ ಬದಿ ಕುಸಿತ
ಪುತ್ತೂರು: ಉಪ್ಪಿನಂಗಡಿ-ಪುತ್ತೂರು ರಾಜ್ಯ ಹೆದ್ದಾರಿಯಲ್ಲಿ ಆ.3 ರಾತ್ರಿ ಏಕಾಏಕಿ ಬರೆ ಕುಸಿದಿದೆ. ಕೋಡಿಂಬಾಡಿ ಸಮೀಪ ಶಾಸಕ ಅಶೋಕ್ ಕುಮಾರ್ ರೈ ಅವರ ನಿವಾಸದಿಂದ ಕೂಗಳತೆ ದೂರದಲ್ಲಿ ಘಟನೆ ನಡೆದಿದೆ. ರಸ್ತೆಯ ಇನ್ನೊಂದು ಭಾಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮಣ್ಣು ತೆರವು ಕಾರ್ಯ ಆರಂಭಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ಸೇತುವೆಯ ಸಾಮರ್ಥ್ಯ ತಪಾಸಣೆ ಯಂತ್ರ ಆಗಮನ
Puttur ರಸ್ತೆ: ಕಂಡ ಕಂಡಲ್ಲಿ ಹೊಂಡ; ಸಂಚಾರಕ್ಕೆ ಪರದಾಡುವ ಸ್ಥಿತಿ
Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು
BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
Bolanthuru: ಗಣೇಶೋತ್ಸವ ಮೆರವಣಿಗೆಯಲ್ಲಿ ತಿಂಡಿ- ಪಾನೀಯ ನೀಡದಂತೆ ಮಸೀದಿಗೆ ಪತ್ರ
MUST WATCH
ಹೊಸ ಸೇರ್ಪಡೆ
Kottigehara: ಭಕ್ತಿಗೆ ಬಡತನವಿಲ್ಲವೆಂದು ತೋರಿಸಿಕೊಟ್ಟ ಬಾಲಕ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ
Davanagere; ಎಸ್.ಪಿ ಕಾರಿನ ಮೇಲೆ ಕಲ್ಲೆಸೆದ ಮಾನಸಿಕ ಅಸ್ವಸ್ಥ ಮಹಿಳೆ!
Bhopal: ರಸ್ತೆ ಬದಿ ಕುಳಿತಿದ್ದವರ ಮೇಲೆ ಏಕಾಏಕಿ ನರಿ ದಾಳಿ: ವಿಡಿಯೋ ವೈರಲ್
IAF: ವಿಂಗ್ ಕಮಾಂಡರ್ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.