Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
ಪೇಜರ್ಸ್ ಸ್ಫೋಟದ ನಂತರ ವಾಕಿಟಾಕಿ ಸ್ಫೋಟಗೊಂಡು 30ಕ್ಕೂ ಅಧಿಕ ಮಂದಿ ಸಾವು...
Team Udayavani, Sep 20, 2024, 11:43 AM IST
ಲೆಬನಾನ್: ಲೆಬನಾನ್(Lebanon) ನಲ್ಲಿ ವಾಕಿಟಾಕಿ ಮತ್ತು ಪೇಜರ್ ಸ್ಫೋಟಗೊಂಡು 30ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೆ ಬೈರೂತ್ ರಫೀಕ್ ಹರ್ರಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಚರಿಸುವ ವಿಮಾನಗಳಲ್ಲಿ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವುದನ್ನು ಕತಾರ್ (Qatar Airways) ಏರ್ ವೇಸ್ ನಿಷೇಧಿಸಿದೆ.
ಈ ನಿರ್ಬಂಧ ಪ್ರಯಾಣಿಕರ ಲಗೇಜ್ ಹಾಗೂ ಸರಕುಗಳಿಗೂ ಅನ್ವಯವಾಗಲಿದ್ದು, ಮುಂದಿನ ಸೂಚನೆಯವರೆಗೂ ಪೇಜರ್ ಮತ್ತು ವಾಕಿಟಾಕಿ ಒಯ್ಯಲು ಅನುಮತಿ ಇಲ್ಲ ಎಂದು ಕತಾರ್ ಏರ್ ವೇಸ್ ತಿಳಿಸಿದೆ.
ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್ ಆಫ್ ದ ರಿಪಬ್ಲಿಕ್ ಲೆಬನಾನ್ ನಿಂದ ನಮಗೆ ನಿರ್ದೇಶನ ಬಂದಿದ್ದು, ಅದರಂತೆ ತಕ್ಷಣವೇ ಜಾರಿಯಾಗುವಂತೆ ಬೈರೂತ್ ನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಪೇಜರ್ಸ್, ವಾಕಿಟಾಕಿ ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ ಎಂದು ಕತಾರ್ ಏರ್ ವೇಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಲೆಬನಾನ್ ನಲ್ಲಿ ಪೇಜರ್ಸ್ ಸ್ಫೋಟದ ನಂತರ ವಾಕಿಟಾಕಿ ಸ್ಫೋಟಗೊಂಡು 30ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದುರಂತದ ನಂತರ ಪೇಜರ್ಸ್ ಮತ್ತು ವಾಕಿಟಾಕಿ ಮೇಲೆ ಹೆಚ್ಚಿನ ಗಮನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UN posts ಮೇಲೆಯೇ ಇಸ್ರೇಲ್ ದಾಳಿ! ; 600 ಭಾರತೀಯ ಸೈನಿಕರು ಅಪಾಯದಲ್ಲಿ!!
PM Modi ಭೇಟಿಯಾದ ಕೆನಡಾ ಪ್ರಧಾನಿ: ಭಾರತೀಯರ ಸುರಕ್ಷತೆ ಕುರಿತು ಹೇಳಿದ್ದೇನು?
Kamala Harris ಪರವಾಗಿ ಲೈವ್ ಮ್ಯೂಸಿಕ್ ಕನ್ಸರ್ಟ್ ನಡೆಸಲಿರುವ ಎ.ಆರ್.ರೆಹಮಾನ್
Israel ವಾಯುದಾಳಿಗೆ ಬೈರುತ್ ನಲ್ಲಿ 22 ಮಂದಿ ಬಲಿ: ಹೆಜ್ಬುಲ್ಲಾ ಪ್ರಮುಖ ನಾಯಕ ಎಸ್ಕೇಪ್
Nobel; ಜಪಾನ್ ನ ಪರಮಾಣು ಬಾಂಬ್ ಸರ್ವೈವರ್ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.