ಕತಾರ್‌: ವಲಸೆ ಕಾರ್ಮಿಕರಿಗೆ ಹೆಚ್ಚು ಕೆಲಸ !


Team Udayavani, Apr 25, 2020, 11:17 AM IST

ಕತಾರ್‌: ವಲಸೆ ಕಾರ್ಮಿಕರಿಗೆ ಹೆಚ್ಚು ಕೆಲಸ !

ಮಣಿಪಾಲ : ಕೋವಿಡ್ 19 ವೈರಸ್‌ ವಿಶ್ವದಲ್ಲಿ ವಲಸೆ ಕಾರ್ಮಿಕರಿಗೆ ಸೃಷ್ಟಿಸಿರುವ ಸಮಸ್ಯೆ ಒಂದೇ-ನಿರುದ್ಯೋಗ ಮತ್ತು ಆರ್ಥಿಕ ನಷ್ಟ. ಯಾಕೆಂದರೆ ಲಾಕ್‌ ಡೌನ್‌ ಕಾರಣದಿಂದ ಯಾರಿಗೂ ಕೆಲಸ ಇಲ್ಲ. ಕೆಲವು ರಾಷ್ಟ್ರಗಳಲ್ಲಿ ಅವರಿಗೆ ಊಟ- ಉಪಾಹಾರದ ವ್ಯವಸ್ಥೆ ಮಾಡುತ್ತಿವೆ. ಆದರೆ ಕತಾರ್‌ ಆಡಳಿತ ವಲಸೆ ಕಾರ್ಮಿಕರನ್ನು ಹೆಚ್ಚಾಗಿ ದುಡಿಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.

ದಿ ಗಾರ್ಡಿಯನ್‌ ವರದಿ ಮಾಡಿರುವ ಪ್ರಕಾರ, ಕತಾರ್‌ 2022ರ ವಿಶ್ವಕಪ್‌ ಪೂರ್ವ ತಯಾರಿ ನಡೆಸುತ್ತಿದೆ. ಕ್ರೀಡಾಂಗಣ ನಿರ್ಮಾಣ ಕೆಲಸದಲ್ಲಿ ವಲಸೆ ಕಾರ್ಮಿಕರನ್ನು ಬಳಸಲಾಗುತ್ತಿದೆ. ಕ್ರೀಡಾಕೂಟಕ್ಕೆ ಇನ್ನೂ ಎರಡು ವರ್ಷಗಳಿದ್ದು, ಕಾಮಗಾರಿ ನಡೆಸಲು ಸಮಯವಿದೆ. ಆದರೆ ಅದರ ಬಗ್ಗೆ ಗಮನ ಹರಿಸದ ಕತಾರ್‌ ಆಡಳಿತ, ಪ್ರತಿನಿತ್ಯವೂ ನೂರಾರು ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದೆ. ಅಲ್ಲಿ ಸಾಮಾಜಿಕ ಅಂತರವಾಗಲೀ, ಸುರಕ್ಷತಾ ಕ್ರಮವಾಗಲಿ ಪಾಲಿಸುತ್ತಿಲ್ಲ ಎನ್ನಲಾಗುತ್ತಿದೆ.

ದಿನದಿಂದ ದಿನಕ್ಕೆ ಸೋಂಕಿಗೆ ತುತ್ತಾಗುತ್ತಿರುವವ ಸಂಖ್ಯೆ ಹೆಚ್ಚುತ್ತಿರುವ ಇಂತಹ ಪರಿಸ್ಥಿತಿಯಲ್ಲೂ ಸೀಮಿತ ಜಾಗದಲ್ಲಿ ಹೆಚ್ಚು ಕಾರ್ಮಿಕ ಶಿಬಿರಗಳನ್ನು ನಿರ್ಮಿಸಿದೆ. ಒಂದೇ ವಸತಿ ನಿಲಯವನ್ನು ಹಲವರಿಗೆ ನೀಡಿದ್ದು, ಎಲ್ಲಿಯೂ ನಿಯಮ ಪಾಲನೆಯಾಗುತ್ತಿಲ್ಲ ಎಂದು ವರದಿ ಉಲ್ಲೇಖೀಸಿದೆ.

ಸಂಪೂರ್ಣ ಲಾಕ್‌ಡೌನ್‌ ಆಗಿಲ್ಲ
ಕಳೆದ ವಾರ, ಕತಾರ್‌ ಅಧಿಕಾರಿಗಳು ಸಾಮೂಹಿಕ ಸಮಾರಂಭಗಳ ಆಯೋಜನೆ, ಜಿಮ್‌ಗಳು, ಚಿತ್ರಮಂದಿರಗಳು, ಶಾಪಿಂಗ್‌ ಮಾಲ್‌ಗ‌ಳು ಮತ್ತು ಬ್ಯಾಂಕ್‌ಗಳ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಆದೇಶಿಸಿದ್ದರು. ಆದರೆ ಕಟ್ಟದ ನಿರ್ಮಾಣ ಕಾರ್ಮಿಕರಿಗೆ ಮತ್ತು ಖಾಸಗಿ ವಲಯದ ಇತರ ಕೆಲಸಗಾರರಿಗೆ, ಕಾರ್ಮಿಕರಿಗೆ ಈ ನಿಯಮ ಅನ್ವಯಿಸದು ಎಂದು ತಿಳಿಸಿದರು. ಸೀಮಿತ ನಿಯಮಗಳ ಅನ್ವಯ ಸಾರ್ವ ಜನಿಕ ಉದ್ಯಾನವ ನಗಳಲ್ಲಿ, ಕಡಲತೀರಗಳು ಮತ್ತು ಸಾಮಾಜಿಕ ಕೂಟಗಳನ್ನು ನಡೆಸಬಹುದೂ ಎಂದು ಹೇಳಿದೆ. ಹಾಗಾಗಿ ಪೂರ್ಣ ಲಾಕ್‌ಡೌನ್‌ ಪಾಲಿಸುತ್ತಿಲ್ಲ.

ನಾವು ಬದುಕುವುದು ಇಷ್ಟವಿಲ್ಲವೇ ?
ಸಾರ್ವಜನಿಕ ಸ್ಥಳಗಳು ಮತ್ತು ಕೂಟಗಳಲ್ಲಿ ಸಾಮೂಹಿಕವಾಗಿ ಸೇರಬೇಡಿ ಎಂಬ ಆದೇಶ ಹೊರಡಿಸಿದ ಸುದ್ದಿಯನ್ನು ಸರಕಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಲ್ಲಿನ ಕಟ್ಟಡ ಕಾರ್ಮಿಕ ಓರ್ವರು “ಕಟ್ಟಡ ನಿರ್ಮಾಣ ಕಾರ್ಮಿಕರು ಹೇಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ? ನಮ್ಮ ಸುರಕ್ಷತೆಯ ಬಗ್ಗೆ ಯಾರೂ ಏಕೆ ಕಾಳಜಿ ವಹಿಸುವುದಿಲ್ಲ ? ನಾವು ಬದುಕುವುದು ಇಷ್ಟವಿಲ್ಲವೇ? ನಮ್ಮ ಕುಟುಂಬಗಳನ್ನು ತೊರೆದು ಜೀವದ ಆಸೆಬಿಟ್ಟು ಕೆಲಸಕ್ಕೆ ಬರಬೇಕೇ ? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.

ಇದೇ ವಿಷಯವಾಗಿ 2022ರ ಕ್ರೀಡಾಂಗಣ ಕಟ್ಟಡ ನಿರ್ಮಾಣ  ಕೆಲಸದಲ್ಲಿ ತೊಡಗಿರುವ ಕೀನ್ಯಾದ ವಲಸೆ ಕಾರ್ಮಿಕರೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, “ಪ್ರತಿದಿನ ಸೋಂಕಿನ ಭಯದಿಂದಲೇ ಮನೆಯಿಂದ ಹೊರಬೀಳುವ ನಮಗೆ ಕೆಲಸ ಮಾಡುವಾಗಲು ಅದೇ ಭಯ.

ನಮ್ಮಂಥ ಬಡ ಕಾರ್ಮಿಕರು ದಿನ ದುಡಿದೇ ತಿನ್ನಬೇಕು. ಅದಕ್ಕೆ ಆದಾಯಬೇಕು. ಅನಿವಾರ್ಯವಾಗಿ ಮತ್ತು ಒತ್ತಡದಿಂದ ಕೆಲಸಕ್ಕೆ ಬರುತ್ತಿದ್ದೇವೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.