ಬೆಂಗಳೂರಿನ ಸಮಸ್ಯೆಗಳಿಗೆ ಶೀಘ್ರ ಪರಿಹಾರ : ಸಿಎಂ ಬೊಮ್ಮಾಯಿ

Team Udayavani, Nov 19, 2022, 9:10 AM IST

cm-b-bommai

ಬೆಂಗಳೂರು: ಬೆಂಗಳೂರಿನ ಸಮಸ್ಯೆಗೆ ಪರಿಹಾರ ‌ದೊರಕಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತೀಯ ಹೋಟೆಲ್ ಮತ್ತು ರೆಸ್ಟರಾಂಟ್ ಗಳ ಸಂಘದ ವಾರ್ಷಿಕ ಸಮ್ಮೇಳನವನ್ನು   ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿಗೆ ನಿತ್ಯ ಲಕ್ಷಾಂತರ ಜನರು ಬರುತ್ತಿರುವುದರಿಂದ ಇಲ್ಲಿ ಹೂಡಿಕೆ ಹಾಗೂ ಕೆಲಸ ಮಾಡುವವರು ಹೆಚ್ವಿರುವುದರಿಂದ ಸಂಚಾರ ದಟ್ಟಣೆ ಸಾಮಾನ್ಯ.  ರಾಜ್ಯದಲ್ಲಿ ಐದು ಹೊಸ ನಗರಗಳ ನಿರ್ಮಾಣ ಮಾಡಲು ತೀರ್ಮಾನಿಸಿದ್ದು, ನಗರದಲ್ಲಿ ಆಧುನಿಕ ಸೌಲಭ್ಯಗಳುಳ್ಳ ವ್ಯವಸ್ಥೆ ಕಲ್ಪಿಸಲಾಗುವುದು. ಇದ್ದನ್ನು ನಾವು ನವ ಕರ್ನಾಟಕ ಎಂದು ಕರೆಯುತ್ತೇವೆ. ಈ ವರ್ಷ ಮೂರು ವಿಮಾನ ನಿಲ್ದಾಣಗಳ ಆರಂಭಿಸಲಿದ್ದು, ಮುಂದಿನ ವರ್ಷ ಮತ್ತೆ ಮೂರು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದ್ದೇವೆ. ದೂರದ ಸ್ಥಳಗಳನ್ನು ತಲುಪಲು ಏರ್ ಸ್ಟ್ರಿಪ್ಸ್ ನಿರ್ಮಾಣವಾಗಲಿದೆ ಎಂದರು.

ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ದಿ: ರಾಜ್ಯದ ಅನೇಕ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ದಿ ಮಾಡಲಿದ್ದೇವೆ‌. ಅಂಜನಾದ್ರಿ ಹಾಗೂ ಜೋಗ ಫಾಲ್ಸ್ ಸೇರಿದಂತೆ ಒಟ್ಟು ಆರು ರೋಪ್ ವೇಗಳ  ನಿರ್ಮಾಣವಾಗುತ್ತಿದೆ. ಪ್ರಗತಿಪರ, ಸ್ನೇಹಮಯಿ ರಾಜ್ಯ ವಾಗಿದ್ದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತಿಥ್ಯ ಪ್ರಮುಖ ಪ್ರಾತ್ರ ವಹಿಸುತ್ತದೆ. ಉತ್ತಮ ಆತಿಥ್ಯ ಜನರನ್ನು ಆಕರ್ಷಿಸುತ್ತದೆ ಮಾತ್ರವಲ್ಲದೆ ರಾಜ್ಯದ ಬಗ್ಗೆಯೂ ಉತ್ತಮ ಅಭಿಪ್ರಾಯ ಮೂಡಿಸುತ್ತದೆ. ಸಂಘದ ಬೇಡಿಕೆಗಳನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.  ಜಿ.ಎಸ್.ಟಿ ಯಲ್ಲಿ ರಿಯಾಯಿತಿ ನೀಡುವ ಬಗ್ಗೆ ಪರಿಶೀಲಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.

ಗಾಡ್ಸ್ ಮೋಸ್ಟ್ ಲವ್ಡ್ ಕಂಟ್ರಿ: ಒಂದು ರಾಜ್ಯ ಹಲವು ಜಗತ್ತು ಎಂಬ ರಾಜ್ಯದ ಪ್ರವಾಸೋದ್ಯಮ ಘೋಷವಾಕ್ಯಕ್ಕೆ ಗಾಡ್ಸ್ ಮೋಸ್ಟ್ ಲವ್ಡ್ ಕಂಟ್ರಿ ಎಂದು ಹೊಸ ಟ್ಯಾಗ್ ಲೈನ್ ನೀಡಬೇಕು ಎಂದು ಸಲಹೆ ನೀಡಿದರು. ಹೊಸ ಆಲೋಚನೆ ಹೊಸ ವಿಚಾರ ಗಳೊಂದಿಗೆ ಬನ್ನಿ ನಮ್ಮ ಸರ್ಕಾರ ನಿಮಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದರು.

ಪ್ರವಾಸೋದ್ಯಮ ಸರ್ಕಿಟ್: ಕರ್ನಾಟಕ, ತಮಿಳುನಾಡು, ಕೇರಳ ಎಲ್ಲ ರಾಜ್ಯಗಳು ಒಂದೆ ರೀತಿಯಲ್ಲಿ ಪ್ರವಾಸಿಗರನ್ನು ಸೆಳೆಯಬೇಕು. ಕರ್ನಾಟಕ ಅತಿ ಉದ್ದವಾದ ಪಶ್ಚಿಮ ಘಟ್ಟ ಪ್ರದೇಶ ಹೊಂದಿದೆ. ಪಶ್ಚಿಮ ಘಟ ಸ್ವಿಡ್ಜರ್ ಲ್ಯಾಂಡ್ ಗಿಂತ ಸುಂದರವಾಗಿದೆ. ಆದರೆ, ನಾವು ಅದನ್ನು ಗುರುತಿಸುತ್ತಿಲ್ಲ. ನಮ್ಮಲ್ಲಿ ಧಾರ್ಮಿಕ ಸ್ಥಳಗಳೂ ಇವೆ.  ಪ್ರವಾಸೋದ್ಯಮ ವಲಯದಲ್ಲಿ ಕರ್ನಾಟಕ ಒಳ್ಳೆಯ ಸೇವೆ ಸಲ್ಲಿಸುತ್ತಿದೆ. ಪ್ರವಾಸೋದ್ಯಮ ನೀತಿ ಹೊಂದಿದ್ದು, ಮೈಸೂರು ಹಾಗೂ ಹಂಪಿ ಪ್ರವಾಸಿ ಸರ್ಕಿಟ್ ಹೊಂದಲಿದ್ದೇವೆ. ಒಂದು ಟಿಕೆಟ್ ನಲ್ಲಿ ಎಲ್ಲವನ್ನು ನೋಡುವ ವ್ಯವಸ್ಥೆ ಕಲ್ಪಿಸಲಾಗುವುದು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯ. ಬೆಂಗಳೂರನ್ನು ಎಲ್ಲರೂ ಪ್ರೀತಿಸುತ್ತಾರೆ. ಪ್ರತಿ ದಿನ ಐದರಿಂದ ಹತ್ತು ಸಾವಿರ ವಿಜ್ಞಾನಿಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ವಿಶ್ವದ ಯಾವುದೇ ರಾಜ್ಯದಲ್ಲಿರದ 400 ಆರ್ ಆಂಡ್ ಡಿ ಕೇಂದ್ರಗಳು  ಬೆಂಗಳೂರಿನಲ್ಲಿವೆ. ದೇಶದಲ್ಲಿಯೇ ಅತಿ ಹೆಚ್ಚಿನ ಜನರು ಬಂದು ಹೋಗುವ ತಾಣ ಬೆಂಗಳೂರು ಎಂದರು.

ಪ್ರವಾಸೋದ್ಯಮ ಎಲ್ಲ ವ್ಯವಸ್ಥೆ ಕಲ್ಪಿಸಬೇಕು. ವಿವಿಧ ಕಾರಣಗಳಿಗಾಗಿ ಬರುವ ಜನರ ಅವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆಯತ್ತ ಗಮನಹರಿಸಬೇಕು.  ಯೋಜನಾ ಬದ್ಧವಾಗಿ ಪ್ರವಾಸೋದ್ಯಮದ ಅಭವೃದ್ಧಿಗೆ ಯೋಜನೆ ರೂಪಿಸಿಕೊಳ್ಳಲು ಸಲಹೆ ನೀಡಿ ಪ್ರವಾಸೋದ್ಯಮಕ್ಕೆ ಯಾವುದೇ ಗಡಿಗಳ ಮಿತಿ ಇಲ್ಲ ಎಂದರು.

ಪ್ರಕೃತಿದತ್ತ ಬೀಚ್ ಗಳ  ಅಭಿವೃದ್ಧಿ: ಕರ್ನಾಟಕ ಅತಿ ಉದ್ದವಾದ ಪಶ್ಚಿಮ ಘಟ್ಟ ಪ್ರದೇಶ ಹೊಂದಿದೆ. ಪಶ್ಚಿಮ ಘಟ್ಟ ಸ್ವಿಡ್ಜರ್ ಲ್ಯಾಂಡ್ ಗಿಂತ ಸುಂದರವಾಗಿದೆ. ಆದರೆ, ನಾವು ಅದನ್ನು ಗುರುತಿಸುತ್ತಿಲ್ಲ. ನಮ್ಮಲ್ಲಿ ಧಾರ್ಮಿಕ ಸ್ಥಳಗಳೂ ಇವೆ.

ಪ್ರವಾಸೋದ್ಯಮ ವಲಯದಲ್ಲಿ ಕರ್ನಾಟಕ ಒಳ್ಳೆಯ ಸೇವೆ ಸಲ್ಲಿಸುತ್ತಿದೆ. ನಾವು ಪ್ರವಾಸೋದ್ಯಮ ನೀತಿ ಹೊಂದಿದ್ದೆವೆ.ಕರಾವಳಿ ಭಾಗದ ಪ್ರವಾಸೋದ್ಯಮದ ಅಭಿೃದ್ಧಿಗೆ ಹೊಸ ಸಿ ಅರ್ ಝೆಡ್ ನಿಯಮಾವಳಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕರ್ನಾಟಕದಲ್ಲಿ ಪ್ರಕೃತಿದತ್ತ ಬೀಚ್ ಗಳಿದ್ದು , ಇವುಗಳ ಅಭಿವೃದ್ಧಿಗೆ ಈ ನಿಯಮಗಳು ಸಹಕಾರಿಯಾಗಲಿದೆ ಎಂದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್,  ಸಂಘದ ಅಧ್ಯಕ್ಷ ಕೆ.ಶ್ಯಾಮ ರಾಜು ಹಾಗೂ ಸಂಘದ  ಪದಾಧಿಕಾರಿಗಳು ಉಪಸ್ಥಿತರಿದ್ದರು

ಟಾಪ್ ನ್ಯೂಸ್

“ನೀವು ಯಾರನ್ನಾದರೂ ಡೇಟ್‌ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್

“ನೀವು ಯಾರನ್ನಾದರೂ ಡೇಟ್‌ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್

2-chikmagaluru

ಚಿಕ್ಕಮಗಳೂರು: ಕಾರಿನಲ್ಲಿ ಮದ್ಯದ ಬಾಟಲ್, ಸಿ.ಟಿ.ರವಿ ಕ್ಯಾಲೆಂಡರ್‌, ಲಾಂಗ್ ಪತ್ತೆ

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

TDY-1

ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್‌ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ

Malayalam-actor-innocent

ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ

bjp cong election fight

ವಿಧಾನ-ಕದನ 2023: ಪ್ರಚಾರಕ್ಕೆ ಎಲ್ಲಿದೆ ದಿನಾಂಕದ ಭಾರ

politi

ನಮ್ಮ ಹಕ್ಕೊತ್ತಾಯ: ಬಂಟ್ವಾಳ – ರಂಗಮಂದಿರ, ಕ್ರೀಡಾಂಗಣ ಬೇಗ ಈಡೇರಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ರೆಬೆಲ್‌ಸ್ಟಾರ್‌ ಅಂಬರೀಶ್‌ ಸ್ಮಾರಕ ಲೋಕಾರ್ಪಣೆ

ಇಂದು ರೆಬೆಲ್‌ಸ್ಟಾರ್‌ ಅಂಬರೀಶ್‌ ಸ್ಮಾರಕ ಲೋಕಾರ್ಪಣೆ

ಚುನಾವಣಾ ಅಕ್ರಮಗಳ ತಡೆಗೆ ಗಡಿ ಚೆಕ್‌ಪೋಸ್ಟ್‌ ಜಾಲ; ಈಗಾಗಲೇ 171 ತಪಾಸಣಾ ವ್ಯವಸ್ಥೆ ಸ್ಥಾಪನೆ

ಚುನಾವಣಾ ಅಕ್ರಮಗಳ ತಡೆಗೆ ಗಡಿ ಚೆಕ್‌ಪೋಸ್ಟ್‌ ಜಾಲ; ಈಗಾಗಲೇ 171 ತಪಾಸಣಾ ವ್ಯವಸ್ಥೆ ಸ್ಥಾಪನೆ

ಕೆಆರ್‌ಪಿಪಿ ಪ್ರಚಾರಕ್ಕೆ ರೆಡ್ಡಿ ಹೊಸ ಹೆಲಿಕಾಪ್ಟರ್‌

ಕೆಆರ್‌ಪಿಪಿ ಪ್ರಚಾರಕ್ಕೆ ರೆಡ್ಡಿ ಹೊಸ ಹೆಲಿಕಾಪ್ಟರ್‌

ಕೇಡರ್‌ ಬಲವರ್ಧನೆ: ಶಾ ನೇತೃತ್ವದಲ್ಲಿ ಕೋರ್‌ ಕಮಿಟಿ ಸಭೆ

ಕೇಡರ್‌ ಬಲವರ್ಧನೆ: ಶಾ ನೇತೃತ್ವದಲ್ಲಿ ಕೋರ್‌ ಕಮಿಟಿ ಸಭೆ

ಮೀಸಲು ರಾಜಕೀಯ ಹಗ್ಗಜಗ್ಗಾಟ

ಮೀಸಲು ರಾಜಕೀಯ ಹಗ್ಗಜಗ್ಗಾಟ: ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ನೇರ ವಾಗ್ಯುದ್ಧ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

“ನೀವು ಯಾರನ್ನಾದರೂ ಡೇಟ್‌ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್

“ನೀವು ಯಾರನ್ನಾದರೂ ಡೇಟ್‌ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್

2-chikmagaluru

ಚಿಕ್ಕಮಗಳೂರು: ಕಾರಿನಲ್ಲಿ ಮದ್ಯದ ಬಾಟಲ್, ಸಿ.ಟಿ.ರವಿ ಕ್ಯಾಲೆಂಡರ್‌, ಲಾಂಗ್ ಪತ್ತೆ

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

TDY-1

ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್‌ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ

Malayalam-actor-innocent

ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.