Udayavni Special

ರಾಹುಲ್‌ ದ್ರಾವಿಡ್‌-ಸೌರವ್‌ ಗಂಗೂಲಿ ಟೆಸ್ಟ್‌ ಪದಾರ್ಪಣೆಯ ಬೆಳ್ಳಿಹಬ್ಬ

Team Udayavani, Jun 20, 2021, 7:00 AM IST

ರಾಹುಲ್‌ ದ್ರಾವಿಡ್‌-ಸೌರವ್‌ ಗಂಗೂಲಿ ಟೆಸ್ಟ್‌ ಪದಾರ್ಪಣೆಯ ಬೆಳ್ಳಿಹಬ್ಬ

ಅದು ಐತಿಹಾಸಿಕ ಲಾರ್ಡ್ಸ್‌. 1996ರಲ್ಲಿ ಮೊಹಮ್ಮದ್‌ ಅಜರುದ್ದೀನ್‌ ಸಾರಥ್ಯದ ಭಾರತ 0-1 ಹಿನ್ನಡೆ ಬಳಿಕ ಇಂಗ್ಲೆಂಡ್‌ ವಿರುದ್ಧ ಇಲ್ಲಿ ಸರಣಿಯ ದ್ವಿತೀಯ ಟೆಸ್ಟ್‌ ಆಡಲಿಳಿದಿತ್ತು. ಪ್ರವಾಸಿ ಭಾರತ ಇಬ್ಬರು ನೂತನ ಬ್ಯಾಟ್ಸ್‌ ಮನ್‌ಗಳಿಗೆ ಬಾಗಿಲು ತೆರೆದಿತ್ತು. ಅದ್ಯಾವ ಗಳಿಗೆಯಲ್ಲಿ ಇವರು ಟೆಸ್ಟ್‌ ಪದಾರ್ಪಣೆ ಮಾಡಿದರೋ, ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿ ನೂತನ ಶಕ್ತಿಯೊಂದು ಪ್ರವಹಿಸಿತು. ಮುಂದಿನ ಒಂದೂವರೆ ದಶಕದ ಕಾಲ ಇದು ಜಾಗತಿಕ ಕ್ರಿಕೆಟ್‌ನಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತು. ಎದುರಾಳಿ ಬೌಲರ್‌ಗಳು ಬಳಲಿ ಬೆಂಡಾಗುತ್ತ ಹೋದರು.

ಭಾರತದ ಬ್ಯಾಟಿಂಗ್‌ ಸರದಿಗೆ ಚೈತನ್ಯ ತುಂಬಿದ ಈ ಬ್ಯಾಟ್ಸ್‌ಮನ್‌ಗಳು ಬೇರ್ಯಾರೂ ಅಲ್ಲ, ರಾಹುಲ್‌ ದ್ರಾವಿಡ್‌ ಮತ್ತು ಸೌರವ್‌ ಗಂಗೂಲಿ. ಇವರಿಬ್ಬರು ಟೆಸ್ಟ್‌ ಪ್ರವೇಶಗೈದು ರವಿವಾರಕ್ಕೆ ಭರ್ತಿ 25 ವರ್ಷ. ಬೆಳ್ಳಿ ಹಬ್ಬದ ಸಂಭ್ರಮ!

ಸವಾಲು ಮೆಟ್ಟಿ ನಿಂತ ಜೋಡಿ
1996ರ ಜೂನ್‌ 20ರಂದು ಆರಂಭಗೊಂಡ ಈ ಟೆಸ್ಟ್‌ ಪಂದ್ಯ ಭಾರತಕ್ಕೆ ಭಾರೀ ಸವಾಲಿನದ್ದಾಗಿತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ಎದುರಾದ 8 ವಿಕೆಟ್‌ ಸೋಲಿನಿಂದ ಅಜರ್‌ ಪಡೆ ಹೊರಬರಬೇಕಿತ್ತು. ಇಂಥ ಪರಿಸ್ಥಿತಿಯಲ್ಲಿ ಚೊಚ್ಚಲ ಟೆಸ್ಟ್‌ ಆಡಲಿಳಿದಿದ್ದ ಈ ಯುವ ಬ್ಯಾಟ್ಸ್‌ಮನ್‌ಗಳಿಬ್ಬರೂ ಈ ಜವಾಬ್ದಾರಿಯನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿದರು.

ವನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬಂದ ಎಡಗೈ ಆಟಗಾರ ಗಂಗೂಲಿ 435 ನಿಮಿಷಗಳ ಕಾಲ ಕ್ರೀಸ್‌ ಆಕ್ರಮಿಸಿಕೊಂಡು 131 ರನ್‌ ಪೇರಿಸಿ ಲಾರ್ಡ್ಸ್‌ ಹೀರೋ ಎನಿಸಿದರು. ಭವಿಷ್ಯದಲ್ಲಿ “ಗೋಡೆ’ ಎನಿಸಿಕೊಂಡು ತಂಡದ ಬೆನ್ನೆಲುಬಾಗಿ ನಿಂತ ದ್ರಾವಿಡ್‌ ಅಂದು ಕ್ರೀಸ್‌ ಇಳಿದದ್ದು 7ನೇ ಕ್ರಮಾಂಕದಲ್ಲಿ! ಅವರೇ ಕೊನೆಯ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ ಆಗಿದ್ದರು. ಆದರೆ ಅಂದೇ ಕ್ರೀಸಿಗೆ ಅಂಟಿಕೊಂಡು ನಿಲ್ಲುವ ಸಾಮರ್ಥ್ಯವನ್ನು ಸಾಬೀತುಪಡಿಸಿದ ದ್ರಾವಿಡ್‌ 267 ಎಸೆತಗಳಿಂದ ಬಹುಮೂಲ್ಯ 95 ರನ್‌ ಕೊಡುಗೆ ಸಲ್ಲಿಸಿದರು. ಐದೇ ರನ್ನಿನಿಂದ ಶತಕ ತಪ್ಪಿತ್ತು.

ಅಂದಹಾಗೆ ಇವರಿಬ್ಬರಿಗಾಗಿ ತಂಡದಿಂದ ಹೊರಬಿದ್ದ ಆಟಗಾರರನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಅದು ಅಜಯ್‌ ಜಡೇಜ ಮತ್ತು ಸಂಜಯ್‌ ಮಾಂಜ್ರೆಕರ್‌!

ಮುಂದಿನದು ಇತಿಹಾಸ.

ನಂಟು ಮುಂದುವರಿದಿದೆ…
ಈಗಲೂ ದ್ರಾವಿಡ್‌, ಗಂಗೂಲಿ ಆಟ ಟೀಮ್‌ ಇಂಡಿಯಾ ಆಟಗಾರರಿಗೊಂದು ಸ್ಫೂರ್ತಿ. ಈಗಲೂ ಇವರು ಕ್ರಿಕೆಟ್‌ ನಂಟು ಹೊಂದಿರುವುದು ಭಾರತದ ಕ್ರಿಕೆಟಿಗೊಂದು ಶಕ್ತಿ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾದರೆ, ದ್ರಾವಿಡ್‌ ಕಿರಿಯರಿಗೆ ಕೋಚಿಂಗ್‌ ನೀಡುತ್ತ ಈಗ ಟೀಮ್‌ ಇಂಡಿಯಾ ಕೋಚ್‌ ಆಗಿ ಭಡ್ತಿ ಪಡೆದಿದ್ದಾರೆ. ಇವರಿಬ್ಬರ ಬ್ಯಾಟಿಂಗ್‌ ಮಹಾಯಾನವನ್ನು ಮೆಲುಕು ಹಾಕುವುದೇ ಒಂದು ರೋಮಾಂಚನ, ಖುಷಿಯ ಸಿಂಚನ!

ಟಾಪ್ ನ್ಯೂಸ್

rdffggggf

40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್‌ ತುಂಡು ಹರಾಜು!

ಕಲ್ಲುಗಣಿ  ಪ್ರದೇಶಕ್ಕೆ  ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್

rreewrre

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಕ್ಕೆ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ ಸಿಎಂ 

iiu

ಬಿಗ್ ಬಾಸ್ ಮನೆಯಲ್ಲಿ ಬೆತ್ತಲೆ ಯೋಗ ಮಾಡಲು ಆಫರ್

ಕಾಸರಗೋಡಿಗೆ ಸರ್ಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳೀನ್ ಕುಮಾರ್ ಕಟೀಲು

ಕಾಸರಗೋಡಿಗೆ ಸರ್ಕಾರಿ,  ಖಾಸಗಿ ಬಸ್ ಸಂಚಾರವಿಲ್ಲ:  ನಳೀನ್ ಕುಮಾರ್ ಕಟೀಲು

fghffhf

ಕೋವಿಡ್ :ರಾಜ್ಯದಲ್ಲಿಂದು 1987 ಹೊಸ ಪ್ರಕರಣ ಪತ್ತೆ, 1632 ಸೋಂಕಿತರು ಗುಣಮುಖಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೋಕಿಯೊ ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ ಪಿ.ವಿ.ಸಿಂಧು

ಟೋಕಿಯೊ ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ ಪಿ.ವಿ.ಸಿಂಧು

Novak Djokovic’s singles campaign ends without medal

ಪದಕವಿಲ್ಲದೆ ಟೋಕಿಯೊ ಒಲಿಂಪಿಕ್ಸ್ ಪಯಣ ಅಂತ್ಯಗೊಳಿಸಿದ ನೊವಾಕ್ ಜೊಕೊವಿಕ್

isuru udana

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಲಂಕಾ ವೇಗಿ ಇಸುರು ಉದಾನ

ಟೋಕಿಯೊ ಒಲಿಂಪಿಕ್ಸ್: ದ.ಆಫ್ರಿಕಾ ವಿರುದ್ಧ 4-3 ಅಂತರದಿಂದ ಗೆದ್ದ ಭಾರತ ವನಿತೆಯರ ತಂಡ

ಟೋಕಿಯೊ ಒಲಿಂಪಿಕ್ಸ್: ದ.ಆಫ್ರಿಕಾ ವಿರುದ್ಧ 4-3 ಅಂತರದಿಂದ ಗೆದ್ದ ಭಾರತ ವನಿತೆಯರ ತಂಡ

ben stokes

ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಕ್ರಿಕೆಟ್ ನಿಂದ ಅನಿರ್ದಿಷ್ಟಾವಧಿ ಬಿಡುವು ಪಡೆದ ಸ್ಟೋಕ್ಸ್‌!

MUST WATCH

udayavani youtube

ಅತಿವೃಷ್ಟಿ ಹೊಡೆತಕ್ಕೆ ನಲುಗಿದ ರೈತರು

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

udayavani youtube

IT ಬದುಕಿಗಿಂತ ಕೃಷಿ ತೃಪ್ತಿ ನೀಡುತ್ತೆ??

ಹೊಸ ಸೇರ್ಪಡೆ

rdffggggf

40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್‌ ತುಂಡು ಹರಾಜು!

ಕಲ್ಲುಗಣಿ  ಪ್ರದೇಶಕ್ಕೆ  ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್

rreewrre

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಕ್ಕೆ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ ಸಿಎಂ 

ಉಡುಪಿ ಜಿಲ್ಲೆಯಲ್ಲಿ 148 ಪಾಸಿಟಿವ್‌ ಪ್ರಕರಣ ಪತ್ತೆ

ಉಡುಪಿ ಜಿಲ್ಲೆಯಲ್ಲಿ 148 ಪಾಸಿಟಿವ್‌ ಪ್ರಕರಣ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.