ರೇಣು@ 59 ಜನ ಸೇವಕ ನಾಯಕ


Team Udayavani, Mar 1, 2021, 8:00 AM IST

ರೇಣು@ 59 ಜನ ಸೇವಕ ನಾಯಕ

ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಹೋರಾಟ, ಜನಸೇವೆ ಮೂಲಕ ಇಡೀ ಕ್ಷೇತ್ರದ ಮನೆಮಾತಾದ ರಾಜಕಾರಣಿ. ಸಂಘಟನೆಗಳ ಮೂಲಕ ರಾಜಕೀಯ ಪ್ರವೇಶಿಸಿ ಎದುರಾದ ಅನೇಕ ಕಷ್ಟಗಳನ್ನು ಎದುರಿಸಿ ಸೋಲು-ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಜನಾನುರಾಗಿ. ನೇರ ನಡೆ-ನುಡಿಯ ವ್ಯಕ್ತಿತ್ವದ ರೇಣುಕಾಚಾರ್ಯ 59 ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದು ತಮ್ಮ ಹತ್ತು ಹಲವು ಚಿಂತನೆ, ಅಭಿವೃದ್ಧಿ ಕಾರ್ಯಗಳೊಂದಿಗೆ ಸೇವೆ ಮುಂದುವರಿಸಿದ್ದಾರೆ.

ಬಡವರು, ನಿರ್ಗತಿಕರು, ದೀನದಲಿತರ ಸೇವೆ ಮಾಡುವ ಯಾವುದೇ ವ್ಯಕ್ತಿಗೆ ಸಮಾಜ ಸೇವೆಯೊಂದಿಗೆ ರಾಜಕೀಯ ಇಚ್ಛಾಶಕ್ತಿ ಇದ್ದಲ್ಲಿ ಎಂತಹ ಅಡೆತಡೆಗಳನ್ನಾದರೂ ಮೆಟ್ಟಿ ನಿಂತು ಸಾಧಿಸಬಲ್ಲರು ಎಂಬುದಕ್ಕೆ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಸಾಕ್ಷಿಯಾಗಿದ್ದಾರೆ.

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಜನಮಾನಸದಲ್ಲಿ ಜನಸೇವಕರಾಗಿ ಗುರುತಿಸಿಕೊಂಡು ಕ್ರಮೇಣ ಜನನಾಯಕರಾಗಿ ತಮ್ಮನ್ನು ರೂಪಿಸಿಕೊಂಡ ಅಪರೂಪದ ರಾಜಕಾರಣಿ.

“ತನ್ನಂತೆ ಪರರ ಬಗೆದೊಡೆ ಜಗದೊಳಗೆ ಕೈಲಾಸ ಕಾಣಬಹುದು’ ಎಂಬ ಸರ್ವಜ್ಞನ ವಚನದಂತೆ ಬಡಜನರ ಸ್ಫೂರ್ತಿಯಾಗಿ ಕ್ಷೇತ್ರದ ಜನತೆಯ ಪಾಲಿನ ನೆಚ್ಚಿನ ಸೇವಕ-ನಾಯಕರಾಗಿ ರೇಣುಕಾಚಾರ್ಯ ಅವರು ಬೆಳೆದು ಬಂದ ದಾರಿ ನಿಜಕ್ಕೂ ವಿಸ್ಮಯಕಾರಿ.

ಅರೆಮಲೆನಾಡು ಹೊನ್ನಾಳಿ ತಾಲೂಕಿನ ಪುಣ್ಯಕ್ಷೇತ್ರ ಹನುಮೊದಿಸಿದ ನಾಡೆಂದು ಹೆಸರಾದ ಕುಂದೂರು ಎಂಬ ಗ್ರಾಮದಲ್ಲಿ ಸುಸಂಸ್ಕೃತ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಆದರ್ಶ ಶಿಕ್ಷಕರಾಗಿ, ಕೃಷಿ ಕಾಯಕ ಮಾಡುತ್ತಿದ್ದ ವೇದಮೂರ್ತಿಗಳಾದ ಎಂ. ಪಂಚಾಕ್ಷರಯ್ಯ ಮತ್ತು ಶರಣೆ ಕಮಲಮ್ಮ ನವರ ಉದರದಲ್ಲಿ ರೇಣುಕಾಚಾರ್ಯ 28-2-1961ರಲ್ಲಿ ಜನಿಸಿದರು. 8 ಜನ ಸಹೋದರರು ಇಬ್ಬರು ಸಹೋದರಿಯರ ತುಂಬು ಕುಟುಂಬದಲ್ಲಿ ನಾಲ್ಕನೇ ಪುತ್ರರಾದ ರೇಣುಕಾಚಾರ್ಯ ಬಾಲ್ಯದಿಂದಲೂ ಅತ್ಯಂತ ಚುರುಕು.

ಕುಂದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿ ಇಲ್ಲಿಯೇ 7ನೇ ತರಗತಿ ಉತೀ¤ರ್ಣರಾದರು. ನಂತರ ಕೂಲಂಬಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 8 ರಿಂದ ಎಸ್ಸೆಸ್ಸೆಲ್ಸಿ ವರೆಗೆ ಪ್ರೌಢ ಶಿಕ್ಷಣ ಪಡೆದರು. ಬಳಿಕ ಹೊನ್ನಾಳಿಯ ಚನ್ನಪ್ಪಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಪದವಿ ಪ್ರವೇಶ ಪಡೆದು ಓದುತ್ತಿದ್ದಾಗಲೇ ಅಲ್ಲಿನ ಅನೇಕ ರಾಜಕೀಯ ಮುಖಂಡರ ಹೋರಾಟದ ಬದುಕು ಇವರಲ್ಲಿರುವ ಸೇವೆ ಹಾಗೂ ಹೋರಾಟದ ಮನೋಭಾವವನ್ನು ಬಡಿದೆಬ್ಬಿಸಿತು. ಇದೇ ವೇಳೆ ಅಖೀಲ ಭಾರತ ವಿದ್ಯಾರ್ಥಿ ಪರಿಷತ್ತು ಸೇರಿ ಸಂಚಾಲಕರಾಗಿ ತಮ್ಮ ಹೋರಾಟ ಆರಂಭಿಸಿದ ಪದವಿ ಓದುತ್ತಿದ್ದ ವಿದ್ಯಾರ್ಥಿ ರೇಣುಕಾಚಾರ್ಯ ಆಗಲೇ ಸಂಘಟನೆಯಲ್ಲಿ ವಿಭಿನ್ನ ಛಾಪು ಮೂಡಿಸಿದ್ದರು. ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದವರಾದ ಸಮಾಜವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲರ ಸಮಾಜವಾದಿ ಚಿಂತನೆ, ಅವರ ಒಡನಾಡಿ ಲೋಕನಾಯಕ, ಜನತಾ ಪಕ್ಷದ ಸಂಸ್ಥಾಪಕ ಜಯಪ್ರಕಾಶ ನಾರಾಯಣರ ಆದರ್ಶ ಹೋರಾಟಗಳು ರೇಣುಕಾಚಾರ್ಯರ ಸಂಘಟನೆ, ಹೋರಾಟಗಳಿಗೆ ಮಾರ್ಗದರ್ಶಿ ಮತ್ತು ಪ್ರೇರಣೆಯಾಗಿದ್ದವು.

ಕನ್ನಡ ಸಂಘ ಸ್ಥಾಪನೆ
ಗ್ರಾಮದ ನೂರಾರು ಯುವಕರೊಡನೆ ಭುವನೇಶ್ವರಿ ಕನ್ನಡ ಸಂಘವನ್ನು ಸ್ಥಾಪಿಸುವ ಮೂಲಕ ಗ್ರಾಮದಾದ್ಯಂತ ಯುವಕರನ್ನು ಸಂಘಟಿಸಿ ಕೇವಲ ಸಾರ್ವಜನಿಕ ದೇಣಿಗೆ ಮೂಲಕ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಿ ಪರಿಸರ ರಕ್ಷಣೆ, ಆರೋಗ್ಯ ಶಿಬಿರ ಸೇರಿ ಹಲವು ಸಮಾಜಮುಖೀ ಕಾರ್ಯ ಕೈಗೊಂಡು ತಮ್ಮ ಜನಸೇವೆಗೆ ನಾಂದಿ ಹಾಡಿದರು.

ಸ್ವಗ್ರಾಮ ಕುಂದೂರಿನಿಂದ ಹೊನ್ನಾಳಿ ಪಟ್ಟಣಕ್ಕೆ ಬಂದು ನೆಲೆಸಿದ ನಂತರ ವ್ಯಾಪಾರ ಆರಮಭಿಸಿದರೂ ತಮ್ಮ ಹೋರಾಟ ಹಾಗೂ ಜನಸೇವೆ ಮಾಡುವ ಕಾರ್ಯವನ್ನು ಅವರು ಬಿಡಲಿಲ್ಲ. ವೈಯಕ್ತಿಕ ಬದುಕಿನ ಜೊತೆಗೆ ರೈತರ ಬದುಕಿಗೆ ದಾರಿ ಮಾಡಿಕೊಡುವ ಉದ್ದೇಶದಿಂದ “ಚನ್ನೇಶ ಬೋರ್‌ವೆಲ್ಸ್‌ ” ಎಂಬ ಸಂಸ್ಥೆ ಸ್ಥಾಪಿಸಿ ಬೋರ್‌ವೆಲ್‌, ಪಂಪ್‌ಸೆಟ್‌ ವ್ಯಾಪಾರ ಪ್ರಾರಂಭಿಸಿದರು. ಆ ಸಮಯದಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸುತ್ತಾಡಿ ಬೋರ್‌ವೆಲ್‌ ಕೊರೆಯುವ ವೇಳೆ ಹಗಲು ರಾತ್ರಿಯೆನ್ನದೆ ರೈತರು, ಬಡವರ ಹತ್ತು ಹಲವಾರು ಸಮಸ್ಯೆಗಳನ್ನು ಆಲಿಸುತ್ತಿದ್ದರು. ಕ್ರಮೇಣ ತಮ್ಮ ವ್ಯಾಪಾರವನ್ನು ವಿಸ್ತರಿಸಿದಂತೆ ಜನಸೇವೆಯನ್ನೂ ಹೆಚ್ಚಿಸಿದರು. ಜಿಲ್ಲಾದ್ಯಂತ ರೈತರು, ಜನಸಾಮಾನ್ಯರಿಗೆ ಧ್ವನಿಯಾಗುತ್ತ ಹಲವು ಒಳ್ಳೆಯ ಕೆಲಸ ಮಾಡಿಸಿಕೊಟ್ಟರು. ಸಾವಿರಾರು ರೈತರು ಈಗಲೂ ರೇಣುಕಾಚಾರ್ಯರ ಕಾರ್ಯವನ್ನು ಸ್ಮರಿಸುತ್ತಿರುವುದು ಇವರ ಜನಸೇವೆಗೆ ಸಾಕ್ಷಿಯಾಗಿದೆ.

ಅನ್ನ-ಅಕ್ಷರ ದಾಸೋಹಿ
ಜೀವನದಲ್ಲಿ ಹಲವಾರು ಎಡರು-ತೊಡರುಗಳನ್ನು ಎದುರಿಸಿದ ರೇಣುಕಾಚಾರ್ಯ ಅವರು ದಿನ ಕಳೆದಂತೆ ಜನಸಾಮಾನ್ಯರ ಬಗ್ಗೆ ಹತ್ತು ಹಲವು ಚಿಂತನೆ ನಡೆಸಿ ಸದಾ ತಮ್ಮ ಹೋರಾಟ ಮತ್ತು ರಾಜಕೀಯ ಬದುಕಿಗೆ ಆದರ್ಶ ಪ್ರಾಯರಾದ ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ರ ಮಾರ್ಗದರ್ಶನ, ಸಲಹೆ, ಸಹಕಾರಗಳಿಂದ ಉತ್ತೇಜಿತರಾಗಿ ಬಾಪೂಜಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ, ಅನ್ನದಾಸೋಹ ಕಲ್ಪಿಸಲು ಮುಂದಾದರು. ಸಣ್ಣದಾಗಿ ಆರಮಭಗೊಂಡ ಸಂಸ್ಥೆ ಇಂದು ಕುಟುಂಬ ಸದಸ್ಯರ ಪರಿಶ್ರಮ ರೇಣುಕಾಚಾರ್ಯರ ದೂರದೃಷ್ಟಿ, ಹಿರಿಯರ ಸಲಹೆ ಮೇರೆಗೆ ಬಾಪೂಜಿ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜು ಸ್ಥಾಪನೆಯೊಂದಿಗೆ ಬಹುದೊಡ್ಡ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ. ಇಂದು ದೇಶದ ವಿವಿಧ ರಾಜ್ಯಗಳ ಯುವಕ ಯುವತಿಯರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ರೇಣುಕಾಚಾರ್ಯ ಅವರು ಸಂಸ್ಥೆಯ ಕಾರ್ಯದರ್ಶಿಯಾಗಿದ್ದು ಈಗ ಕಾಲೇಜು ರಾಜ್ಯದ ಪ್ರಸಿದ್ಧ ಮಣಿಪಾಲ್‌ ಸಮೂಹದ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಬಾಪೂಜಿ ಮಣಿಪಾಲ್‌ ಆಸ್ಪತ್ರೆ ಎಂಬ ವಿನೂತನ ಹೈಟೆಕ್‌ ಆಸ್ಪತ್ರೆಯಾಗಿ ರೂಪುಗೊಳ್ಳುತ್ತಿದ್ದು ಮುಂಬರುವ ದಿನಗಳಲ್ಲಿ ಬಡ ಜನತೆಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಜ್ಜುಗೊಳ್ಳುತ್ತಿದೆ.
**
ರಾಜಕೀಯ ಪ್ರವೇಶ
ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕುಗಳ ಜನರ ಹತ್ತು ಹಲವಾರು ಜ್ವಲಂತ ಸಮಸ್ಯೆಗಳನ್ನು ಸ್ವತಃ ಮನಗಂಡು ಶೋಷಿತರು, ದುರ್ಬಲರು, ಜನಸಾಮಾನ್ಯರಿಗೆ ಕೈಲಾದಷ್ಟು ಪ್ರಾಮಾಣಿಕ ಸೇವೆ ಮಾಡಬೇಕು ಎಂದು ತೀರ್ಮಾನಿಸಿ ಲೋಕಮಾನ್ಯ ಜಯಪ್ರಕಾಶ ನಾರಾಯಣರ ಆದರ್ಶ ಮೈಗೂಡಿಸಿಕೊಂಡು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಮುಂದಾದರು.

ಪ್ರಾಥಮಿಕ ವಿದ್ಯಾಭ್ಯಾಸದ ದಿನಗಳಿಂದಲೇ ಆದರ್ಶ ಗುಣಗಳ ಜೊತೆಗೆ ಸಮಾಜಸೇವೆ ಹೋರಾಟದಂತಹ ಕ್ರಾಂತಿಕಾರಿ ಮನೋಭಾವನೆಗಳನ್ನು ಮೈಗೂಡಿಸಿಕೊಂಡಿದ್ದ ಅವರು ನಾನೂ ಕೂಡ ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು, ಜನಸೇವೆ ಮಾಡಬೇಕು ಎಂಬ ತಮ್ಮ ಮನದಾಳದ ಚಿಂತನೆಗೆ ಚಾಲನೆ ನೀಡಿ ರಾಜಕೀಯ ಕ್ಷೇತ್ರದಿಂದ ಜನರ ಹಲವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಆಲೋಚಿಸಿದರು. ಮೊದಲೇ ವಿದ್ಯಾರ್ಥಿ ಸಂಘಟನೆ, ಚಳುವಳಿಯಲ್ಲಿ ಪಾಲ್ಗೊಂಡಿದ್ದ ರೇಣುಕಾಚಾರ್ಯ ತಮ್ಮ ಸಂಸ್ಕಾರ, ಸಂಸ್ಕೃತಿ, ಚಿಂತನೆಗಳಿಗೆ ಒಪ್ಪುವುದಾದರೆ ಬಿಜೆಪಿ ಸರಿಯಾದ ಪಕ್ಷ ಎಂದು ತೀರ್ಮಾನಿಸಿದರು. ಅಲ್ಲದೆ ರೈತ ನಾಯಕ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಅವಿರತ ಹೋರಾಟಗಳಿಂದ ಪ್ರೇರಣೆ ಪಡೆದಿದ್ದ ರೇಣುಕಾಚಾರ್ಯ ಅವರ ನಾಯಕತ್ವದಲ್ಲೇ ರಾಜಕೀಯ ಹೆಜ್ಜೆಹಾಕಲು ನಿರ್ಧರಿಸಿ 1990ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಸದುದ್ದೇಶದಿಂದ ಬಿಜೆಪಿಯ ರಾಷ್ಟ್ರೀಯ ಮುಖಂಡ ಎಲ್‌.ಕೆ. ಅಡ್ವಾಣಿಯವರ ನೇತೃತ್ವದ ರಾಮಮಂದಿರ ರಥಯಾತ್ರೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿಯವರು ಹೊನ್ನಾಳಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ನೂರಾರು ಮುಖಂಡರ ಜತೆಗೆ ಅವರಿಗೆ ಭವ್ಯ ಸ್ವಾಗತ ನೀಡಿ ಅಂದೇ ಬಿಜೆಪಿ ಸೇರ್ಪಡೆಯಾಗುವ ಮೂಲಕ ರಾಜಕೀಯದಲ್ಲಿ ಮೊದಲ ಹೆಜ್ಜೆ ಊರಿದರು.

ಬಿಜೆಪಿ ಗರಡಿಯಲ್ಲಿ ಬೆಳೆಯುತ್ತ ತಾಲೂಕು ಯುವಮೋರ್ಚಾ ಅಧ್ಯಕ್ಷರಾಗಿ ನಿಯುಕ್ತಿಗೊಂಡ ನಂತರ ಹಗಲಿರುಳು ಎನ್ನದೇ ತಮ್ಮ ಚಿಂತನೆಯಲ್ಲಿ ಹತ್ತು ಹಲವು ಹೋರಾಟಗಳನ್ನು ನಡೆಸಿದರು. ರಾಜಕೀಯವಾಗಿ ಯಾವುದೇ ಅಧಿಕಾರ ಅವಕಾಶಗಳಿಲ್ಲದ ಕ್ಲಿಷ್ಟ ಪರಿಸ್ಥಿತಿ ಎದರಾದರೂ ಅದನ್ನೆಲ್ಲ ಲೆಕ್ಕಿಸದೆ ಎಂತಹ ಕಠಿಣ ಸಂದರ್ಭದಲ್ಲೂ ಬಡವರ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಲು ಟೊಂಕ ಕಟ್ಟಿ ನಿಂತರು. ಹಲವಾರು ಯುವಕರ ಮನವೊಲಿಸಿ ಸಾರ್ವಜನಿಕರ ಸಹಕಾರ ಪಡೆದು ಕ್ಷೇತ್ರದ ಪ್ರತಿ ಹಳ್ಳಿಯ ಗಲ್ಲಿಗಲ್ಲಿಯಲ್ಲೂ ಓಡಾಡಿ ವಿಭಿನ್ನ ಹೋರಾಟ ರೂಪಿಸಿ ಸಂಘಟನೆ ಬಲಪಡಿಸಿದರು.

ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿ ಅಂಬೆಗಾಲಿಡುತ್ತಿದ್ದ ದಿನಗಳಿಂದ ಆರಂಭಿಸಿ ಜಯಪ್ರಕಾಶ ನಾರಾಯಣ ಚಳವಳಿ, ವಿದ್ಯಾರ್ಥಿ ಪರಿಷತ್ತಿನ ಪ್ರೇರಣೆಯೊಂದಿಗೆ ಛಲಬಿಡದ ತ್ರಿವಿಕ್ರಮನಂತೆ ಎದ್ದುನಿಂತು ಇಂದಿನವರೆಗೂ ರೇಣುಕಾಚಾರ್ಯರು ಬಡವರ ಆಶಾಕಿರಣ ಎಂದರೆ ಅತಿಶಯೋಕ್ತಿಯಲ್ಲ.

ರೈತನಾಯಕ, ಹುಟ್ಟು ಹೋರಾಟಗಾರ ಬಿ.ಎಸ್‌.ಯಡಿಯೂರಪ್ಪನವರ ಗರಡಿಯಲ್ಲಿ ಬೆಳೆದು ಹಲವಾರು ಜನಪರ ಹೋರಾಟಗಳ ಮೂಲಕ ತಮ್ಮ ವೈಯಕ್ತಿಕ ಬದುಕನ್ನೂ ಬದಿಗೊತ್ತಿ ಇಂದಿನವರೆಗೂ ಹಮ್ಮು- ಬಿಮ್ಮು ಯಾವುದನ್ನೂ ತೋರದೆ ಕ್ಷೇತ್ರದ ಜನತೆಯ ಸಹಕಾರ ಆಶೀರ್ವಾದಗಳಿಂದ ಧೀಮಂತ‌ ನಾಯಕರಾಗಿದ್ದಾರೆ.

ಸಾಮಾನ್ಯ ಶಿಕ್ಷಕನ ಮಗನಾಗಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದ ಯಾವುದೇ ಕಾರ್ಯಕ್ರಮವಿದ್ದರೂ ಭಿತ್ತಿಪತ್ರ ಅಂಟಿಸುವುದು ದ್ವಿಚಕ್ರವಾಹನದಲ್ಲಿ ಕ್ಷೇತ್ರದ ಪ್ರತಿಹಳ್ಳಿಗೂ ಕಾಲಿಗೆ ಚಕ್ರ ಕಟ್ಟಿ ಕೊಂಡರಂತೆ ಹಲವಾರು ಯುವಪಡೆ ಹಿರಿಯರ ಮುಖಂಡರ ಜೊತೆಗೆ ರೈತರು, ಬಡವರು, ಶೋಷಿತರು, ದುರ್ಬಲವರ್ಗದವರ ಸಂಕಷ್ಟಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಹಗಲಿರುಳು ಬಿಸಿಲು ಮಳೆಯನ್ನದೆ ಸಮಸ್ಯೆ ಬಗೆಹರಿಸುತಿರುವ ಧೀಮಂತ ರಾಜಕಾರಣಿಯಾಗಿ ಹೊರಹೊಮ್ಮಿರುವುದನ್ನು ಕಂಡು ಕ್ಷೇತ್ರದ ಜನತೆ ಹೆಮ್ಮೆ ಪಡುತ್ತಿದ್ದಾರೆ. ಜನಪರ ಹೋರಾಟಗಳ ಮೂಲಕ ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಹೆಮ್ಮರವಾಗಿ ಬೆಳೆಸುತ್ತಿದ್ದಾರೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.