ಮಕರಜ್ಯೋತಿ: ಪಂಪಾಗೆ ಖಾಸಗಿ ವಾಹನಗಳಿಗೆ ನಿರ್ಬಂಧ

Team Udayavani, Jan 15, 2020, 11:49 AM IST

ಶಬರಿಮಲೆ: ಶಬರಿಮಲೆಯಲ್ಲಿ ಇಂದು ಸಂಜೆ ಮಕರಜ್ಯೋತಿ‌ ದರ್ಶನವಾಗುವ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ವಾಹನಗಳನ್ನು ಪಂಪಾಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ.

ಎಲ್ಲಾ ವಾಹನಗಳು ನೀಲಕ್ಕಲ್ ಶಿವ ದೇವಸ್ಥಾನದ ಸಮೀಪದಲ್ಲಿರುವ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಬೇಕಿದೆ. 1 ರಿಂದ 12 ವಿಭಾಗಗಳನ್ನು ಮಾಡಲಾಗಿದ್ದು, ಕಾರು, ವ್ಯಾನ್, ಬಸ್ ಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಮೇಲಿನ ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

ವಾಹನಗಳ ದಟ್ಟನೆ  ಹೆಚ್ಚಳವಾಗಿದ್ದು ಪರಿಣಾಮವಾಗಿ, ಬೆಳಿಗ್ಗೆ 11 ಗಂಟೆಯ ನಂತರ ನಿಲಕ್ಕಲ್‌ನಿಂದ ಖಾಸಗಿ ವಾಹನಗಳನ್ನು ಪಂಪಾಗೆ ಅನುಮತಿಸಲಾಗುವುದಿಲ್ಲ. ನೀಲಕ್ಕಲ್ ನಿಂದ ಪಂಪಾವರೆಗೆ  ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾತ್ರ ಇದ್ದು,ಈ ರಸ್ತೆಯಲ್ಲಿ ತುರ್ತು ಸೇವೆಯ ವಾಹನ ಹಾಗೂ ಕೇರಳ ರಾಜ್ಯ ಸಾರಿಗೆ ವಾಹನಗಳು ಮಾತ್ರ ಓಡಾಟ ನಡೆಸಲು ಅವಕಾಶ ನೀಡಲಾಗಿದೆ.

ಈಗಾಗಲೇ ಪೊಲೀಸ್ ಇಲಾಖೆಯು ಈ ಕುರಿತು ನೀಲಕ್ಕಲ್ ನಲ್ಲಿ  ಭಕ್ತಾಧಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಪತ್ತನಂತಿಟ್ಟ ಜಿಲ್ಲಾಧಿಕಾರಿ ಪಿ.ಬಿ.ಕೃಷ್ಣನ್ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಈ ಹಿಂದೆ 3 ಬಾರಿ, ಸಾವಿರಕ್ಕೂ ಅಧಿಕ ಕಲಾವಿದರಿಂದ ಹಾಡಿಸಿ ಲಿಮ್ಕಾ ದಾಖಲೆಗೆ ಸಾಕ್ಷಿಯಾಗಿದ್ದ "ರಂಗಸಂಸ್ಥಾನ'ವು ಪ್ರಸ್ತುತ "ನಾದ ಮಂಜರಿ' ಎಂಬ ಸಮೂಹ ಗಾಯನ ಏರ್ಪಡಿಸಿದೆ....

  • "ವಿಮಾನ ಏರುವುದಕ್ಕೂ ಮೊದಲು, ಕೊಳಲನ್ನು ನುಡಿಸುತ್ತಾ ನುಡಿಸುತ್ತಾ ಆಕಾಶ ಕಂಡವನು ನಾನು. ಮನಸ್ಸು ಹಕ್ಕಿಯಾಗಿ, ಭೂಮಿಗೆ ಇಳಿಯುವುದನ್ನೇ ಮರೆಯುತ್ತಿದ್ದೆ' ಎಂದವರು,...

  • ಶಿಖರ್‌ ಧವನ್‌ ಸತತ ಗಾಯಗಳಿಂದಾಗಿ ಮುಂಬರುವ ನ್ಯೂಜಿಲೆಂಡ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಧವನ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಸರಣಿಯ...

  • ಕುಂದಾಪುರ: ನಗರದಲ್ಲಿ ಬಿಸಿಎಂ ಹಾಸ್ಟೆಲ್‌ ಎಲ್ಲಿದೆ ಎಂದು ಕೇಳಿದರೆ ಸಿಗುವ ಉತ್ತರ ಬಹಳ ಸುಲಭದ್ದು. ಇಲ್ಲಿನ ತಾಲೂಕು ಪಂಚಾಯತ್‌ ಬಳಿಯ ರಸ್ತೆಯಲ್ಲಿ ಹೋಗುವಾಗ...

  • ನಾಯಿಯನ್ನು ಬಹುವಾಗಿ ಪ್ರೀತಿಸುವವರಿದ್ದಾರೆ. ಕೆಲವರಿಗೆ ಬೀದಿನಾಯಿಯೂ ಮುದ್ದು ಅನ್ನಿಸುವುದುಂಟು. ಇನ್ನು, ನೂರಾರು ಮುದ್ದು ಮುದ್ದು ನಾಯಿಗಳು ಒಂದೆಡೆ ಸೇರಿದರೆ,...