ಮಾಂಟೆ ಕಾರ್ಲೊ ಟೆನಿಸ್: ಜೊಕೋಗೆ ಮೊದಲ ಸುತ್ತಲ್ಲೇ ಸೋಲು
Team Udayavani, Apr 14, 2022, 5:00 AM IST
ಮಾಂಟೆ ಕಾರ್ಲೊ: ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ “ಮಾಂಟೆ ಕಾರ್ಲೊ ಟೆನಿಸ್’ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ.
ಇಲ್ಲಿ 2 ಸಲ ಚಾಂಪಿಯನ್ ಆಗಿದ್ದ (2013 ಮತ್ತು 2015) ಜಕೋ ಅವರನ್ನು ವಿಶ್ವ ರ್ಯಾಂಕಿಂಗ್ನಲ್ಲಿ 46ನೇ ಸ್ಥಾನದಲ್ಲಿರುವ ಸ್ಪೇನಿನ ಅಲೆಜಾಂಡ್ರೊ ಡೆವಿಡೋವಿಕ್ ಫೋಕಿನ 6-3, 6-7 (5-7), 6-1 ಅಂತರದಿಂದ ಹಿಮ್ಮೆಟ್ಟಿಸಿದರು.
ಫೋಕಿನ ವಿರುದ್ಧ ಆಡಿದ ಹಿಂದಿನೆರಡೂ ಪಂದ್ಯಗಳಲ್ಲಿ ಜೊಕೋ ಜಯ ಸಾಧಿಸಿದ್ದರು. ಈ ಗೆಲುವು ರೋಮ್ ಮತ್ತು ಟೋಕಿಯೊ ಒಲಿಂಪಿಕ್ಸ್ನಲ್ಲಿ ಒಲಿದಿತ್ತು. ಇದು ಆಸ್ಟ್ರೇಲಿಯನ್ ಓಪನ್ ವಿವಾದದ ಬಳಿಕ ಜೊಕೋವಿಕ್ ಪಾಲ್ಗೊಂಡ ಕೇವಲ 2ನೇ ಪಂದ್ಯಾವಳಿ. ಇದಕ್ಕೂ ಮೊದಲು ಅವರು ದುಬಾೖಯಲ್ಲಿ 3 ಪಂದ್ಯ ಆಡಿದ್ದರು. ಜೊಕೋ ಕೂಟದ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ ದ್ವಿತೀಯ ನಿದರ್ಶನ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…