ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು, ಸಮೀರ್, ಕ್ವಾರ್ಟರ್ ಫೈನಲ್ ಪ್ರವೇಶ
Team Udayavani, Jan 22, 2021, 2:05 AM IST
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತೀಯರ ಓಟ ಮುಂದುವರಿದಿದೆ. ಪಿ.ವಿ. ಸಿಂಧು ಮತ್ತು ಸಮೀರ್ ವರ್ಮ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ಕೂಡ ಎಂಟರ ಸುತ್ತಿಗೆ ಪಯಣ ಬೆಳೆಸಿದ್ದಾರೆ.
ಗುರುವಾರದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಪಿ.ವಿ. ಸಿಂಧು ವಿಶ್ವದ 92ನೇ ರ್‍ಯಾಂಕಿಂಗ್ ಆಟಗಾರ್ತಿ ಮಲೇಶ್ಯದ ಕಿಸೋನಾ ಸೆಲ್ವದುರೇ ಅವರನ್ನು ಕೇವಲ 35 ನಿಮಿಷಗಳ ಆಟದಲ್ಲಿ 21-10, 21-12 ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಅವರು ಥಾಯ್ಲೆಂಡಿನ ರಚನೋಕ್ ಇಂತಾನನ್ ಅಥವಾ ಕೊರಿಯಾದ ಸುಂಗ್ ಜಿ ಹ್ಯುನ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ 31ನೇ ರ್‍ಯಾಂಕಿಂಗ್ ಆಟಗಾರ ಸಮೀರ್ ವರ್ಮ ಅವರ ಕನಸಿನ ಓಟ ಮುಂದುವರಿದಿದೆ. ದ್ವಿತೀಯ ಸುತ್ತಿನಲ್ಲಿ ಅವರು ಡೆನ್ಮಾರ್ಕ್‌ನ ರಾಸ್ಮಸ್ ಜೆಮೆ ಅವರನ್ನು 21-12, 21-9 ಅಂತರದಿಂದ ಸುಲಭದಲ್ಲಿ ಮಣಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಭಾರತೀಯನ ಎದುರಾಳಿ ಡೆನ್ಮಾರ್ಕ್‌ನ ಆ್ಯಂಡ್ರೆಸ್ ಆ್ಯಂಟನ್ಸೆನ್.
ಆದರೆ ಎಚ್.ಎಸ್. ಪ್ರಣಯ್ ದ್ವಿತೀಯ ಸುತ್ತು ದಾಟುವಲ್ಲಿ ವಿಫಲರಾದರು. ಅವರು ಮಲೇಶ್ಯದ ಡ್ಯಾರನ್ ಲ್ಯೂ ವಿರುದ್ಧ 17-21, 18-21ರಿಂದ ಪರಾಭವಗೊಂಡರು.
ಡಬಲ್ಸ್ ಗೆಲುವು
ಪುರುಷರ ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ಅಮೋಘ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಇವರು ಕೊರಿಯಾದ 7ನೇ ಶ್ರೇಯಾಂಕದ ಚೊ ಸೊಲ್ಯು-ಸೆವೊ ಸುಂಗ್ ಜೇ ವಿರುದ್ಧ 21-18, 23-21 ಅಂತರದ ರೋಚಕ ಜಯ ಸಾಧಿಸಿದರು. ಮಿಕ್ಸೆಡ್ ಡಬಲ್ಸ… ಸ್ಪರ್ಧೆಯಲ್ಲಿ ಸಾತ್ವಿಕ್ -ಅಶ್ವಿನಿ ಪೊನ್ನಪ್ಪ ಜೋಡಿ ಕೂಡ ಕ್ವಾ. ಫೈನಲ್ ಪ್ರವೇಶಿಸಿದ್ದಾರೆ. ಭಾರತದ ಈ ಜೋಡಿ ಜರ್ಮನ್‌ನ ಲ್ಯಾಮ್ಸ್‌ಫಸ್ ಮತ್ತು ಇಸಬೆಲ್ ಹೆರ್‌ಟ್ರಿಚ್ ಜೋಡಿಯನ್ನು 22-20, 14-21, 21-16 ಅಂತರದಿಂದ ಹಿಮ್ಮೆಟ್ಟಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತಮಿಳುನಾಡು: ನೀತಿ ಸಂಹಿತೆ ಉಲ್ಲಂಘನೆ, ರಾಹುಲ್ ವಿರುದ್ಧ ಬಿಜೆಪಿ ಕಿಡಿ
ಸುಶಾಂತ್ ಸಿಂಗ್ ಡ್ರಗ್ ಪ್ರಕರಣ: 33 ಜನರ ಹೆಸರು, 30 ಸಾವಿರ ಪುಟಗಳ ಚಾರ್ಜ್ ಶೀಟ್!
ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ? ಅವರ ಹಿನ್ನೆಲೆ ಏನು? ಯಡಿಯೂರಪ್ಪ
‘ರೈಮ್ಸ್’ ಮೇಲೆ ಅಜಿತ್ ಜಯರಾಜ್ ಕನಸು
ಅಭಿಮಾನಿಗಳ ಹಬ್ಬಕ್ಕೆ ದಿನಗಣನೆ: ತರುಣ್ ಬಿಚ್ಚಿಟ್ಟರು ರಾಬರ್ಟ್ ಸೀಕ್ರೇಟ್!