ಸಂಗಾಪೂರ ಕೆರೆ ಹೂಳೆತ್ತಲು ಜನಸಾಮಾನ್ಯರು ಕೈಜೋಡಿಸಲು ರೈತರ ಮನವಿ
Team Udayavani, Jun 17, 2020, 5:09 PM IST
ಗಂಗಾವತಿ: ಸಂಗಾಪೂರ ಪುರಾತನ ಕೆರೆ ಇದು ಪ್ರಕೃತಿ ಸೌಂದರ್ಯದ ಮಧ್ಯದಲ್ಲಿದ್ದು ಇದರ ಒತ್ತುವರಿ ತೆರವು, ಜೀರ್ಣೋದ್ಧಾರ ಕಾರ್ಯಕ್ಕೆ ಸಂಘ ಸಂಸ್ಥೆಯ ಮುಖಂಡರು ರೋಟರಿ ಲಯನ್ಸ್ ಕ್ಲಬ್ ಸೇರಿ ಸರ್ವರೂ ಕೈ ಜೋಡಿಸುವಂತೆ ಎಪಿಎಂಸಿ ಮಾಜಿ ನಿರ್ದೇಶಕ ತಾಳೂರಿ ಸೂರ್ಯರಾವ್ ಮನವಿ ಮಾಡಿದರು.
ಅವರು ಸಂಗಾಪೂರ ಕೆರೆ ಪ್ರದೇಶದಲ್ಲಿ ಚಾರಣ ತಂಡದಿಂದ ದೇಣಿಗೆ ಸ್ವೀಕರಿಸಿ ಮಾತನಾಡಿದರು.
ಕೆರೆ ಒತ್ತುವರಿ ತೆರವುಗೊಳಿಸಿ ಜೀರ್ಣೋದ್ಧಾರ ಮಾಡಲು ಜಿಲ್ಲಾಧಿಕಾರಿಗಳು ಮಾರ್ಗದರ್ಶನ ಮಾಡಿದ್ದು ಕೆರೆಯ ಫಲವತ್ತಾದ ಮಣ್ಣನ್ನು ರೈತರು ಉಚಿತ ತೆಗೆದುಕೊಂಡು ಹೋಗಿ ತಮ್ಮ ಹೊಲಗದ್ದೆಗೆ ಹಾಕಿಕೊಳ್ಳುವಂತೆ ಮನವಿ ಮಾಡಿದರು.
ದೇಣಿಗೆ ವಿತರಣೆ: ಗಂಗಾವತಿ ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ್ ಹಾಗು ನಗರಸಭೆ ಸದಸ್ಯ ಉಮೇಶ ಸಿಂಗನಾಳ ವೈಯಕ್ತಿಕವಾಗಿ 8 ಸಾವಿರ ರೂಪಾಯಿ ದೇಣಿಗೆ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಜಾಬ್ ವಿಷಯದಲ್ಲಿ ಕೋರ್ಟ್ ತೀರ್ಪು ಪಾಲಿಸಲಿ: ಬಿ.ಸಿ. ನಾಗೇಶ್
ಜಾತ್ರೆಗೆ ಹೊರಟ ವಾಹನ ಅಪಘಾತ: 18 ಮಂದಿ ಭಕ್ತಾಧಿಗಳಿಗೆ ಗಾಯ
ಪಂಪಾ ಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀ ಚಕ್ರ ಸ್ಥಳಾಂತರಕ್ಕೆ ಸಂಜೀವ ಮರಡಿ ವಿರೋಧ
ಗರ್ಭಗುಡಿಯ ಮೂರ್ತಿ ಶ್ರೀಚಕ್ರ ಸ್ಥಳಾಂತರ: ಸ್ಥಳಕ್ಕೆ ಭೇಟಿ ನೀಡದ ಸಚಿವ ಆನಂದ್ ಸಿಂಗ್; ಆಕ್ರೋಶ
ಕುಷ್ಟಗಿ: ಬೈಕ್ ಗಳ ಮುಖಾಮುಖಿ ; ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ