ಎಸ್‌ಬಿಐ ಮನೆ ಸಾಲಕ್ಕೆ ಇನ್ನು ಬೀಳಲಿದೆ ಪ್ರೊಸೆಸಿಂಗ್‌ ಶುಲ್ಕ

Team Udayavani, Oct 11, 2019, 4:50 PM IST

ಬೆಂಗಳೂರು: ಸಾರ್ವಜನಿಕ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಿಂದ ಇನ್ನು ಮನೆ ಸಾಲ ಪಡೆಯುವುದು ದುಬಾರಿಯಾಗಲಿದೆ.

ಕಾರಣ ಬ್ಯಾಂಕು ಪ್ರೊಸೆಸಿಂಗ್‌ ಶುಲ್ಕ ವಿಧಿಸಲು ತೀರ್ಮಾನಿಸಿದೆ. ಇತ್ತೀಚೆಗೆ ಕೇಂದ್ರೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರಗಳನ್ನು ಕಡಿಮೆ ಮಾಡಿದ್ದು ಇದರಿಂದ ಸಹಜವಾಗಿ ಬಡ್ಡಿ ದರಗಳು ಕಡಿಮೆಯಾಗಿವೆ. ಇದರಿಂದಾಗುವ ನಷ್ಟವನ್ನು ಸರಿದೂಗಿಸಲು ಎಸ್‌ಬಿಐ ಮನೆ ಸಾಲಗಳ ಮೇಲೆ ಪ್ರೊಸೆಸಿಂಗ್‌ ಶುಲ್ಕವನ್ನು ವಿಧಿಸಲು ತೀರ್ಮಾನಿಸಿದೆ.

ಈ ಬಗ್ಗೆ ಈಗಾಗಲೇ ಎಸ್‌ಬಿಐ ಆಂತರಿಕ ಸುತ್ತೋಲೆಯೊಂದನ್ನು ಹೊರಡಿಸಿದೆ. ಆ ಪ್ರಕಾರ 2019 ಡಿ.31ರವರೆಗೆ ಇದ್ದ ಪ್ರೊಸೆಸಿಂಗ್‌ ಶುಲ್ಕ ವಿಧಿಸದೇ ಇರುವ ತೀರ್ಮಾನವನ್ನು ರದ್ದುಗೊಳಿಸಲಾಗಿದ್ದು, ಅ.15ರವರೆಗೆ ಪ್ರೊಸೆಸಿಂಗ್‌ ಶುಲ್ಕ ಮುಂದುವರಿಯಲಿದೆ ಎಂದು ಹೇಳಲಾಗಿದೆ.

ಜು.1ರಂದು ಎಸ್‌ಬಿಐ ತನ್ನ ಬಡ್ಡಿದರಗಳನ್ನು ರೆಪೊ ದರಕ್ಕೆ ಅನ್ವಯಿಸಿತ್ತು. ಇದರಿಂದ ಮೊದಲು ಎಸ್‌ಬಿಐ ಬ್ಯಾಂಕಿಂಗ್‌ ಮಾರುಕಟ್ಟೆಯಲ್ಲೇ ಅತಿ ಕಡಿಮೆ ಬಡ್ಡಿದರವನ್ನು ವಿಧಿಸುತ್ತಿತ್ತು. ರೆಪೊ ದರಕ್ಕೆ ಅನ್ವಯಿಸಿದ ಬಳಿಕ ಬಡ್ಡಿದರ ಮತ್ತಷ್ಟು ಇಳಿದಿದ್ದು ಇದು ಎಸ್‌ಬಿಐ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ