ಇರುವೆಯ ಹಲ್ಲಿನ ರಹಸ್ಯ ಬಯಲು! ಸತುವಿನ ಅಣುಗಳಿಂದಲೇ ಇರುವೆಗೆ ಸೂಪರ್ ಪವರ್
Team Udayavani, Sep 7, 2021, 8:00 PM IST
ನವ ದೆಹಲಿ : ತಂತ್ರಜ್ಞಾನವು ಬೆಳೆಯುತ್ತಾ ಹೋದಂತೆ, ವಸ್ತುಗಳ ಗಾತ್ರ ಚಿಕ್ಕದಾಗುತ್ತಾ ಹೋಗುತ್ತಿದೆ. ಬೃಹದಾಕಾರದ ಕಂಪ್ಯೂಟರ್, ಸ್ಥಿರ ದೂರವಾಣಿಯಿಂದ ನಾವೀನ ಅಂಗೈಯಗಲದ ಮೊಬೈಲ್ ಫೋನ್‌ನ ಜಗತ್ತಿಗೆ ಕಾಲಿರಿಸಿದ್ದೇವೆ. ಮುಂದೆಯೂ ಇದೇ ರೀತಿ ಸಣ್ಣ ಗಾತ್ರದ ಡಿವೈಸ್ ಗಳೇ ಲೋಕವನ್ನು ಆಳಲಿದೆ.
ಅದಕ್ಕೆ ಪೂರಕವೆಂಬಂತೆ, ಸಂಶೋಧಕರೀಗ ನೋಡಲು ಅತಿ ಪುಟಾಣಿಯಾದರೂ ಸೂಪರ್ ಪವರ್ ಹೊಂದಿರುವ ಕೀಟದತ್ತ ಮುಖ ಮಾಡಿದ್ದಾರೆ. ಆ ಕೀಟವೇ “ಇರುವೆ’.
ಅರೆರೆ, ಇರುವೆಯಲ್ಲಿ ಅಂಥ ಸಾಮರ್ಥ್ಯ ಏನಿದೆ ಎಂದು ಯೋಚಿಸುತ್ತಿದ್ದೀರಾ? ಖಂಡಿತಾ ಇದೆ. ಇರುವೆಯ ಹಲ್ಲುಗಳಿಗೆ ಗಟ್ಟಿಯಾದ ವಸ್ತುವನ್ನು ಕತ್ತರಿಸುವಂಥ ಶಕ್ತಿಯಿದೆ. ಮನುಷ್ಯನ ಚರ್ಮವನ್ನು ಕಚ್ಚಿದರೂ ಅದಕ್ಕೆ ಯಾವುದೇ ಹಾನಿ ಆಗುವುದಿಲ್ಲ.
ಇರುವೆಯ ಹಲ್ಲಿನಲ್ಲಿರುವ ಹರಿತ(ಮೊನಚು)ಕ್ಕೆ ಸಂಬಂಧಿಸಿದ ಬಲವು “ ಶಕ್ತಿಯ ಉಳಿತಾಯ’ ಮಾಡುವುದಲ್ಲದೇ, ಇರುವೆಯಂಥ ಸಣ್ಣ ಕೀಟಗಳಿಗೂ ಗಟ್ಟಿಯಾದ ವಸ್ತುವನ್ನು ಕತ್ತರಿಸುವಂಥ ಸಾಮರ್ಥ್ಯವನ್ನು ಒದಗಿಸುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಇದನ್ನೂ ಓದಿ :ಕೇರಳದಲ್ಲಿ ನಿಫಾ ವೈರಸ್ ಪತ್ತೆ ; ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ತೀವ್ರ ನಿಗಾ
ಹಲ್ಲಲ್ಲೇ ಎಲ್ಲ:
ಇರುವೆಗಳ ಹಲ್ಲು ಮನುಷ್ಯನ ಕೂದಲ ಎಳೆಗಿಂತಲೂ ತೆಳ್ಳಗಿರುತ್ತದೆ. ಆದರೂ, ಗಟ್ಟಿಯಾದ ಎಲೆಗಳನ್ನು ಹಲ್ಲಿನಿಂದಲೇ ಕಚ್ಚಿ ಇಬ್ಭಾಗ ಮಾಡುವಷ್ಟು ಶಕ್ತಿ ಅದಕ್ಕಿದೆ. ಇದಕ್ಕೆ ಕಾರಣವೇನೆಂದು ಪರೀಕ್ಷಿಸಿದಾಗ ಗೊತ್ತಾಗಿದ್ದಿಷ್ಟು. ಹಲ್ಲುಗಳಲ್ಲಿರುವ ಸತುವಿನ ಕಣಗಳು(ಝಿಂಕ್ ಆಟೋಮ್) ಇದಕ್ಕೆ ಕಾರಣ. ಈ ಕಣಗಳು ಶಕ್ತಿಯ ಸಮಾನ ಹಂಚಿಕೆ ಮಾಡುತ್ತವೆ. ಹೀಗಾಗಿ, ಇರುವೆಯ ಹಲ್ಲುಗಳಲ್ಲಿರುವ ಸತು ಮತ್ತು ಮ್ಯಾಂಗನೀಸ್‌ನ ಪ್ರಮಾಣವನ್ನು ಪರೀಕ್ಷಿಸಲು ಸಂಶೋಧಕರು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಾನವ ನಿರ್ಮಿತ ವಸ್ತುಗಳಲ್ಲೂ ಇದನ್ನು ಬಳಕೆ ಮಾಡಬಹುದು. ಅಲ್ಲದೇ, ಇಂಥ ವಸ್ತುಗಳಲ್ಲಿ ಸತುವಿನ ಸಮಾನ ಪದರವನ್ನು ಅಳವಡಿಸುವ ಮೂಲಕ ಅವುಗಳು ಹೆಚ್ಚು ಬಾಳಿಕೆ ಬರುವಂತೆಯೂ ನೋಡಿಕೊಳ್ಳಬಹುದು ಎನ್ನುವುದು ಸಂಶೋಧಕರ ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಸ್-ಲಾರಿ ನಡುವೆ ಭೀಕರ ಅಪಘಾತ: ಎಂಟು ಜನರ ದುರ್ಮರಣ; 27 ಮಂದಿಗೆ ಗಂಭೀರ ಗಾಯ
ಇನ್ಫಿನಿಕ್ಸ್ ಹಾಟ್ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ
ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ
ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್ ಪವರ್; ಇಂದು ಗುಜರಾತ್-ರಾಜಸ್ಥಾನ್ ಮುಖಾಮುಖಿ
ಚೀನ ತಡೆಗೆ ಹೊಸ ವೇದಿಕೆ: ಅಮೆರಿಕ ನೇತೃತ್ವದಲ್ಲಿ ಐಪಿಇಎಫ್ ರಚನೆ