ಸರ್ವೀಸ್‌ ರಸ್ತೆಯ ಕೂಡುಮಾರ್ಗಕ್ಕಿಲ್ಲ ಇನ್ನೂ ಮುಕ್ತಿ : ನಗರ ಪ್ರವೇಶವೇ ಹೊಂಡಗುಂಡಿ

Team Udayavani, Mar 14, 2021, 5:30 AM IST

ಸರ್ವೀಸ್‌ ರಸ್ತೆಯ ಕೂಡುಮಾರ್ಗಕ್ಕಿಲ್ಲ ಇನ್ನೂ ಮುಕ್ತಿ : ನಗರ ಪ್ರವೇಶವೇ ಹೊಂಡಗುಂಡಿ

ಕುಂದಾಪುರ: ನಗರದಲ್ಲಿ ಹಾದು ಹೋಗುವ ಹೆದ್ದಾರಿಯ ಸರ್ವೀಸ್‌ ರಸ್ತೆಗಳಿಗೆ 30ರಷ್ಟು ಅಧಿಕ ಒಳ ರಸ್ತೆಗಳು ಕೂಡುತ್ತವೆ. ಇವುಗಳ ಸಂಪರ್ಕವೆಲ್ಲ ಹಾಳಾ ಗಿದ್ದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸುವ ಗುತ್ತಿಗೆದಾರರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಕೂಡು ರಸ್ತೆಗಳು
ಸಂಗಂನಿಂದ ಆರಂಭಿಸಿ ವಿನಾಯಕದ ವರೆಗೆ ಒಂದು ಬದಿಯಲ್ಲಿ ಇರುವ ರಸ್ತೆಗಳು ಹೀಗಿವೆ. ಈ ಎಲ್ಲ ರಸ್ತೆಗಳೂ ಸರ್ವೀಸ್‌ ರಸ್ತೆಗೆ ಕೂಡುವಲ್ಲಿ ಹೊಂಡಗುಂಡಿಗಳಿಂದ ತುಂಬಿವೆೆ. ಆನಗಳ್ಳಿಗೆ ಹೋಗುವ ರಸ್ತೆ, ಗ್ಯಾರೇಜ್‌ ಸಮೀಪದ ರಸ್ತೆ, ಸಿಂಡಿಕೇಟ್‌ ಬ್ಯಾಂಕ್‌ ಸಮೀಪದ ರಸ್ತೆ, ಬಾಲಾಜಿ ಹಾರ್ಡ್‌ವೇರ್‌ ಬಳಿಯ ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಒಳ ಹೋಗುವ, ಹೊರಬರುವ ಸಂಪರ್ಕ, ನಂದಿಬೆಟ್ಟ ರಸ್ತೆ, ಕಲ್ಲಾಗರ ರಸ್ತೆ, ಶೆಲೋಮ್‌ ಹೊಟೇಲ್‌ ಬಳಿಯ ರಸ್ತೆ, ಶ್ರೀದೇವಿ ಆಸ್ಪತ್ರೆಗೆ ಹೋಗುವ ರಸ್ತೆ, ಬಿಟಿಆರ್‌ ರಸ್ತೆ, ಶಾಂತಿ ನಿಕೇತನ ರಸ್ತೆ, ಮಠದಬೆಟ್ಟು ರಸ್ತೆ, ಕೈಲ್ಕೆರೆ ರಸ್ತೆ, ನಂದಿನಿ ಡೈರಿ ಬಳಿಯ ರಸ್ತೆ, ಕಾರಂತರ ಓಣಿ ರಸ್ತೆ, ಹುಚ್ಕೆàರಿ ರಸ್ತೆ, ಪ್ರಕಾಶ್‌ ಗ್ಯಾರೇಜ್‌ ಬಳಿ ರಸ್ತೆ, ಮೆಸ್ಕಾಂ ಸಬ್‌ ಸ್ಟೇಶನ್‌ ಬಳಿ, ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ಬಸ್ರೂರು ಮೂರುಕೈ ಕೂಡು ಕವಲು ರಸ್ತೆಗಳಿವೆ. ಈ ಪೈಕಿ ಶ್ರೀದೇವಿ ಆಸ್ಪತ್ರೆ ರಸ್ತೆ, ಹುಚ್ಕೆರಿ ರಸ್ತೆಯ ಸಂಪರ್ಕ ತಕ್ಕಮಟ್ಟಿಗೆ ಇದೆ. ಉಳಿದಂತೆ ಎಲ್ಲ ಕಡೆ ಎಂಟು ಹತ್ತು ಮೀಟರ್‌ ರಸ್ತೆಯೇ ಇಲ್ಲ. ಅನಂತರ ಕಾಂಕ್ರೀಟ್‌, ಡಾಮರು ರಸ್ತೆ ಇದೆ. ಕೆಲವೆಡೆ ಒಳಚರಂಡಿಯಿಂದ ಎತ್ತರದಲ್ಲಿ ರಸ್ತೆ, ಕೆಲವೆಡೆ ಒಳಚರಂಡಿಯೇ ಎತ್ತರದಲ್ಲಿ ರಸ್ತೆ ತಗ್ಗಿನಲ್ಲಿ ಇದೆ.

ಇನ್ನೊಂದು ಬದಿ
ವಿನಾಯಕದಿಂದ ಆರಂಭವಾಗಿ ಸಂಗಂವರೆಗೆ ಇನ್ನೊಂದು ಬದಿಯಲ್ಲಿ ಇರುವ ಕೂಡು ರಸ್ತೆಗಳು ಹೀಗಿವೆ. ವಿನಾಯಕ ಕೋಡಿ ರಸ್ತೆ, ಟಿ.ಟಿ. ರೋಡ್‌, ಪೆಟ್ರೋಲ್‌ ಪಂಪ್‌ ರಸ್ತೆ, ಕಾರ್ಪೊರೇಶನ್‌ ಬ್ಯಾಂಕ್‌ ಬಳಿ, ರಾಯಪ್ಪನ ಮಠ ರಸ್ತೆ, ಎಲ್‌ಐಸಿ ರಸ್ತೆ, ನೆಹರು ಮೈದಾನ ಬಳಿಯ ರಸ್ತೆ, ಭಂಡಾರ್‌ಕಾರ್ಸ್‌ ಕಾಲೇಜು ರಸ್ತೆ, ನಗರದೊಳಗೆ ಪ್ರವೇಶಿಸುವ ಮುಖ್ಯ ರಸ್ತೆ, ಹರಿಪ್ರಸಾದ್‌ ಹೊಟೇಲ್‌ ಬಳಿಯ ರಸ್ತೆ, ಕುಂದೇಶ್ವರ ದ್ವಾರದ ಎದುರಿನ ರಸ್ತೆ, ಲಕ್ಷ್ಮೀ ಗ್ಯಾರೇಜ್‌ ಬಳಿಯ ರಸ್ತೆ, ಹಳೆ ಆದರ್ಶ ಆಸ್ಪತ್ರೆ ಬಳಿ, ಎಪಿಎಂಸಿ ಬಳಿಯ ರಸ್ತೆ, ಎಪಿಎಂಸಿ ಪ್ರವೇಶ ನಿರ್ಗಮನ, ಮೀನು ಮಾರುಕಟ್ಟೆ ರಸ್ತೆ, ಚಿಕ್ಕನ್‌ಸಾಲ್‌ ರಸ್ತೆ ಹೀಗೆ ರಸ್ತೆಗಳಿವೆ. ಇವುಗಳ ಪೈಕಿ ಎಲ್‌ಐಸಿ ರಸ್ತೆಯ ಸಂಪರ್ಕ ತೀರಾ ಹದಗೆಟ್ಟಿದೆ. ಇಲ್ಲಿ ಪೊಲೀಸ್‌ ಉಪ ವಿಭಾಗ, ಮೆಸ್ಕಾಂ, ಲೋಕೋಪಯೋಗಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎಲ್‌ಐಸಿ ಕಚೇರಿ, ವ್ಯಾಸರಾಯ ಮಠ ಸೇರಿದಂತೆ ಅನೇಕ ಜನ ಭೇಟಿ ನೀಡುವ ಸ್ಥಳಗಳಿವೆ. ಪ್ರತಿದಿನ ನೂರಾರು ವಾಹನಗಳು ಓಡಾಡುತ್ತವೆ. ಹಾಗಿದ್ದರೂ ಕೂಡು ರಸ್ತೆಗೆ ಸರಿಯಾದ ಸಂಪರ್ಕ ಇನ್ನೂ ಸಾಧ್ಯ ವಾಗಿಲ್ಲ. ನಗರದೊಳಗೆ ಪ್ರವೇಶಿಸುವಲ್ಲಿಯೂ ಹೊಂಡಗುಂಡಿಯೇ ತುಂಬಿದ್ದು ವಾಹನದಲ್ಲಿ ನಿದ್ದೆ ಮಾಡಿದರೂ ಕುಂದಾಪುರ ನಗರ ಪ್ರಾರಂಭ ಎಂದು ತತ್‌ಕ್ಷಣ ತಿಳಿಯುವಂತಿದೆ. ಹಳೆ ಆದರ್ಶ ಆಸ್ಪತ್ರೆ ಬಳಿ ಒಳಚರಂಡಿ ವ್ಯವಸ್ಥೆಯೇ ಇಲ್ಲ.

ಮಾಡಿಸಲಾಗುವುದು
ಕೂಡು ರಸ್ತೆಗೆ ಸರ್ವೀಸ್‌ ರಸ್ತೆಯನ್ನು ಲಿಂಕ್‌ ಮಾಡಿಸುವುದು ಹೆದ್ದಾರಿ ಪ್ರಾಧಿಕಾರದ ಗುತ್ತಿಗೆದಾರರ ಕೆಲಸ. ಇದನ್ನು ಪ್ರಾಧಿಕಾರದ ಗಮನಕ್ಕೆ ತರಲಾಗಿದ್ದು ಫ್ಲೈಓವರ್‌ ಕಾಮಗಾರಿ ಮುಗಿದ ಕೂಡಲೇ ಈ ಕಾಮಗಾರಿಗಳನ್ನು ಮಾಡಿಕೊಡುವ ಭರವಸೆ ನೀಡಿದ್ದಾರೆ.
-ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ

ಟಾಪ್ ನ್ಯೂಸ್

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

12-

Gangolli: ರಿಕ್ಷಾ-ಕಾರು ಢಿಕ್ಕಿ

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.