ರೈತರಿಗೆ ಅನುಕೂಲವಾಗುವಂತಹ ಹೊಸ ಸಕ್ಕರೆ ನೀತಿ ರೂಪಿಸಲು ಕೇಂದ್ರಕ್ಕೆ ಮನವಿ :ಸಚಿವ ಮುನೇನಕೊಪ್ಪ
Team Udayavani, Sep 7, 2021, 8:29 PM IST
ನವದೆಹಲಿ : ರಾಜ್ಯದ ರೈತರಿಗೆ ಅನುಕೂಲವಾಗುವಂತಹ ಹೊಸ ಸಕ್ಕರೆ ನೀತಿಯೊಂದನ್ನು ರೂಪಿಸುವಂತೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಲ್ಲಿ ಮನವಿ ಮಾಡಿದರು.
ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಅವರು ಪ್ರಸ್ತುತ ಚಾಲ್ತಿಯಲ್ಲಿರುವ ಸಕ್ಕರೆ ನೀತಿಯಲ್ಲಿ ಕಬ್ಬಿನಿಂದ ಉತ್ಪಾದನೆಯಾಗುವ ಸಕ್ಕರೆಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ನೀತಿ ರೂಪಿಸಲಾಗಿದೆ. ಸಕ್ಕರೆ ಉತ್ಪಾದನೆ ಜೊತೆಗೆ ಕಬ್ಬು ಅರೆಯುವಿಕೆಯಿಂದ ಬರುವ ಮೊಲಾಸಿಸ್, ಎಥನಾಲ್, ಕೊಜನರೇಷನ್ ಒಳಗೊಂಡತೆ ಸಹ ಉತ್ಪನ್ನಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಸಕ್ಕರೆ ನೀತಿಯೊಂದನ್ನು ರೈತರ ಹಿತದೃಷ್ಟಿಯಿಂದ ರೂಪಿಸಬೇಕೆಂದು ಸಚಿವ ಶಂಕರ. ಪಾಟೀಲ ಮುನೇನಕೊಪ್ಪ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಈ ಬಗ್ಗೆ ಶೀಘ್ರದಲ್ಲೇ ರಾಜ್ಯ ಸರ್ಕಾರಗಳೊಂದಿಗೆ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ :ಮೈಸೂರು ಪ್ರಕರಣ : ತಮಿಳುನಾಡಿನಲ್ಲಿ ಅಡಗಿದ್ದ 7ನೇ ಆರೋಪಿ ಸೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರ್ಮಿಕ ಸ್ಥಳಗಳ ಧ್ವನಿವರ್ಧಕಗಳು ಶಾಲೆಗಳಿಗೆ ಹಸ್ತಾಂತರ
ಸಣ್ಣ ಪಟ್ಟಣಗಳಿಗೂ ಇನ್ನು ದುಬಾರಿ ಸಂಶೋಧನಾ ಉಪಕರಣಗಳು!
“ಬ್ರಿಟಿಷರು ನಮ್ಮನ್ನು ಒಡೆದಿದ್ದು ಹೀಗೇ’: ದಕ್ಷಿಣ-ಉತ್ತರ ಸಿನಿ ಜಗಳದ ಬಗ್ಗೆ ಅಕ್ಷಯ್ ಕಿಡಿ
ರಾಹುಲ್ ಬಾಬಾ ನಿಮ್ಮ ಇಟಲಿ ಕನ್ನಡಕ ತೆಗೆಯಿರಿ: ಅಮಿತ್ ಶಾ ಟಾಂಗ್
ತೆರಿಗೆ ಇಳಿಕೆಗೆ ಕೇಂದ್ರದ ಸಮರ್ಥನೆ: ಮಹಾರಾಷ್ಟ್ರ, ಒಡಿಶಾದಿಂದಲೂ ವ್ಯಾಟ್ ಇಳಿಕೆ