ತುಳು ರಂಗಭೂಮಿಯಲ್ಲಿ ಬೆರಗು ಸೃಷ್ಟಿಸಿದ “ಶಿವದೂತೆ ಗುಳಿಗೆ’! ರಂಗ ವೇದಿಕೆಯಲ್ಲಿ ಸಂಚಲನ

ದ್ವಿಶತಕದತ್ತ ಕಾಲಿಟ್ಟ ತುಳುವಿನ ವಿಭಿನ್ನ ನಾಟಕ

Team Udayavani, Mar 10, 2022, 1:05 PM IST

ತುಳು ರಂಗಭೂಮಿಯಲ್ಲಿ ಬೆರಗು ಸೃಷ್ಟಿಸಿದ “ಶಿವದೂತೆ ಗುಳಿಗೆ’!

ಮಹಾನಗರ : ರೂಪೊಡು ಕರ್ಗಂಡ ಕರಿಯೆ… ಧರ್ಮೊನು ದಂಟ್‌ಂಡ ಕೆರ್‌ವೆ.. ಮುಕ್ಕಣ್ಣ ಮೆಯಿಜತ್ತಿ ಬೆಗರ್‌.. ಉಂಡಾಂಡ್‌ ಸತ್ಯೊದ ತುಡರ್‌.. ಬೆಮ್ಮೆರೆ ಸೃಷ್ಟಿ ಗುಳಿಗನ ದಿಟ್ಟಿ ಮಾಮಲ್ಲ ಶಕ್ತಿ… ಶಿವದೂತೆ ಗುಳಿಗೆ..’

ತುಳು ರಂಗಭೂಮಿಯಲ್ಲಿ ಯಾರ ಊಹೆಗೂ ನಿಲುಕದೆ ಕ್ಷಿಪ್ರ ಸಮಯದಲ್ಲಿ ದಾಖಲೆಯ ಪ್ರದರ್ಶನದ ಮೂಲಕ ತುಳುನಾಡಿನಾದ್ಯಂತ ಮನೆಮಾತಾದ ನಾಟಕ “ಶಿವದೂತೆ ಗುಳಿಗೆ’. ತುಳು ರಂಗಭೂಮಿಯ ನಿಗದಿತ ಚೌಕಟ್ಟನ್ನು ಮೀರಿ, ಕಾಮಿಡಿ ಲೆಕ್ಕಾಚಾರವನ್ನೂ ಬದಿಗಿರಿಸಿ ವಿಜಯ್‌ ಕುಮಾರ್‌ ಕೊಡಿಯಾಲಬೈಲು ನಿರ್ದೇಶನದಲ್ಲಿ ಸೃಷ್ಟಿಯಾದ “ಶಿವದೂತೆ ಗುಳಿಗೆ’ ರೋಮಾಂಚನಗೊಳಿಸಿದ ಬಗೆ ಅನನ್ಯ.

2020 ಜ. 2ರಂದು ಮೊದಲ ಪ್ರದರ್ಶನ ಕಂಡ ಶಿವದೂತೆ ಗುಳಿಗೆ ಕಳೆದ ವರ್ಷ ಎ. 3ರಂದು ಎಕ್ಕೂರಿನಲ್ಲಿ 100ನೇ ಪ್ರದರ್ಶನ ಕಂಡಿತ್ತು. ಇದೀಗ ನಾಟಕ 200ನೇ ದಿನದ ಪ್ರದರ್ಶನ, ಸಂಭ್ರಮಾಚರಣೆ ಮಾ. 12ರಂದು ಮಂಗಳೂರಿನ ಕೋಡಿಕಲ್‌ ಆಲಗುಡ್ಡೆಯಲ್ಲಿ ನಡೆಯಲಿದೆ.

ರಂಗ ವೇದಿಕೆಯಲ್ಲಿ ಸಂಚಲನ!
ತುಳುನಾಡಿನ ಕಾರಣಿಕ ಶಕ್ತಿ ಗುಳಿಗನ ಹುಟ್ಟು-ಬದುಕು, ಶಕ್ತಿಯ ನೆಲೆಯನ್ನು ತುಳುರಂಗಭೂಮಿಯ ಪರಿಧಿಯಲ್ಲಿ ನಿರೀಕ್ಷೆಗೂ ಮೀರಿದ ಸ್ವರೂಪದಲ್ಲಿ ಪ್ರದರ್ಶನ ನೀಡಿದ ಬಗೆ ಅದ್ವಿತೀಯ. ಹಿಂದೆ ಯಕ್ಷಗಾನದಲ್ಲಿ “ಸೀನು ಸೀನರಿ’ ಎಂಬ ಪರಿಕಲ್ಪನೆ ಬಹುದೊಡ್ಡ ಸುದ್ದಿಯಾದ ಮಾದರಿಯಲ್ಲಿಯೇ ತುಳು ರಂಗಭೂಮಿಯಲ್ಲಿ ನಾನಾ ಬಗೆಯ ಸೀನು ಸೀನರಿ, ಸೊಗಸಾದ ಸೆಟ್‌ನಲ್ಲಿ ಈ ನಾಟಕ ರೂಪಿಸಿರುವ ಶೈಲಿ ಅದ್ಭುತ, ರೋಮಾಂಚಕ. ಶಿವಪಾರ್ವತಿ ವಿರಾಜಮಾನರಾಗುವ ಕೈಲಾಸ ಪರ್ವತ, ಶೇಷಶಯನ ವಿಷ್ಣುವಿನ ಕ್ಷೀರಸಾಗರವನ್ನು ಬಿಂಬಿಸುವ ದೃಶ್ಯಗಳು, ನೆಲವುಲ್ಲ ಸಂಕೆಯೆ ಅಬ್ಬರ ಇತ್ಯಾದಿ ಪರಿಕಲ್ಪನೆಗಳು ರಂಗ ವೇದಿಕೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

“ಗುಳಿಗ’ನಾಗಿ ಅಭಿನಯಿಸಿದ ಕಿರುತೆರೆ ನಟ ಸ್ವರಾಜ್‌ ಶೆಟ್ಟಿ ನಟನೆ ಎಲ್ಲೆಡೆ ಶಹಬ್ಟಾಸ್‌ಗಿರಿ ಪಡೆದಿದೆ. ರಮೇಶ್‌ ಕಲ್ಲಡ್ಕ, ರಜಿತ್‌ ಕದ್ರಿ, ನಿತೇಶ್‌, ಪ್ರೀತೇಶ್‌, ವಿನೋದ್‌ರಾಜ್‌ ಕೋಕಿಲ, ವಿಶಾಲ್‌ರಾಜ್‌ ಕೋಕಿಲ, ಜಯರಾಮ್‌, ಸಾಗರ್‌ ಮಡಂತ್ಯಾರು, ಸುದರ್ಶನ್‌, ವಸಂತ್‌, ರಕ್ಷಿತಾ ಸಹಿತ ಹಲವರ ಪಾತ್ರ ನಾಟಕಕ್ಕೆ ಹೊಸ ಸ್ವರೂಪ ನೀಡಿದೆ. ಪೂರ್ವಮುದ್ರಿತಗೊಳಿಸಿರುವ ನಾಟಕದ ಸಂಭಾಷಣೆ, ಅದರಲ್ಲಿ ಹಿರಿಯ ಕಲಾವಿದರ ಧ್ವನಿ ಗುಳಿಗನ ನಾಟಕಕ್ಕೆ ಆಕರ್ಷಣೆ ಒದಗಿಸಿದೆ.

ತುಳುವ ಮಣ್ಣಿನ ಕಂಪು ಪಸರಿಸಿದ “ಗುಳಿಗ’!
ಎ.ಕೆ. ವಿಜಯ್‌ ಕೋಕಿಲ ಅವರ ಸಂಗೀತ ರಂಗಾಸಕ್ತರ ಮನ ಸೆಳೆಯುತ್ತಿದೆ. ಪಟ್ಲ ಸತೀಶ್‌ ಶೆಟ್ಟಿ ಅವರ ಧ್ವನಿಯಲ್ಲಿ ಮೂಡಿಬಂದ “ರೂಪೊಡು ಕರ್ಗಂಡ ಕರಿಯೆ.. ಶಿವದೂತೆ ಗುಳಿಗೆ..’ ಹಾಡು,ದೇವದಾಸ್‌ ಕಾಪಿಕಾಡ್‌ ಅವರ “ಆರತಿ.. ಆರತಿ.. ದೂಪೊದಾರತಿ’ ಹಾಡು, ರವೀಂದ್ರ ಪ್ರಭು, ಡಾ| ವೈಷ್ಣವಿ ನರಸಿಂಹ ಕಿಣಿ ಹಿನ್ನೆಲೆ ಗಾಯನ ಮತ್ತೆ ಮತ್ತೆ ಕೇಳಿಸುವಂತೆ ಮಾಡುತ್ತಿದೆ.

ಕನ್ನಡ-ಮಲಯಾಳದಲ್ಲಿಯೂ “ಶಿವದೂತೆ ಗುಳಿಗೆ’!
ತುಳುರಂಗಭೂಮಿಯಲ್ಲಿ ಚರಿತ್ರೆ ಬರೆಯುವ ಸಾಹಸವನ್ನು ಶಿವದೂತೆ ಗುಳಿಗೆ ಮಾಡುತ್ತಿದೆ. ಬೇರೆ ಜಿಲ್ಲೆ, ರಾಜ್ಯದಲ್ಲಿಯೂ ಪ್ರದರ್ಶನಕ್ಕೆ ಆಹ್ವಾನ ಬಂದಿದೆ. ಇದಕ್ಕಾಗಿ ನಾಟಕವನ್ನು ಕನ್ನಡ, ಕೇರಳ ಭಾಗಕ್ಕೆ ಮಲಯಾಳ ಭಾಷೆಗೆ ಬದಲಾಯಿಸಿ ಪ್ರದರ್ಶಿ ಸ ಲು ನಿರ್ಧರಿಸಲಾಗಿದೆ. ದುಬಾೖ ಸಹಿತ ವಿದೇಶದಲ್ಲಿಯೂ ಪ್ರದರ್ಶನಕ್ಕೆ ಆಹ್ವಾನ ಬಂದಿದೆ. ಹೀಗಾಗಿ 500ನೇ ಪ್ರದರ್ಶನವನ್ನು ಅತೀ ಬೇಗನೆ ಮಾಡಲಿದ್ದೇವೆ. ಮುಂದೆ ಶಿವಾಜಿಯ ಜೀವನ ಆಧರಿತ “ಶಿವಾಜಿ’ ನಾಟಕ ಸಿದ್ಧವಾಗಲಿದೆ. “ಮಣಿಕಂಠ ಮಹಿಮೆ’ ಕೂಡ ಶೀಘ್ರದಲ್ಲಿ ಹೊಸ ಸ್ವರೂಪದಲ್ಲಿ ಸಿದ್ಧವಾಗಿದೆ.
– ವಿಜಯ್‌ ಕುಮಾರ್‌ ಕೊಡಿಯಾಲಬೈಲ್‌, ನಿರ್ದೇಶಕರು

ಟಾಪ್ ನ್ಯೂಸ್

ಜಮೀನು ವಿವಾದ: ಸಹೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದುಕೊಂಡ ಆರೋಪಿಗಳು

ಜಮೀನು ವಿವಾದ: ಸಹೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದುಕೊಂಡ ಆರೋಪಿಗಳು

4

ಮಸ್ಕಿ: ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ಟ್ರಕ್‌ ನಲ್ಲಿತ್ತು 40 ಲಕ್ಷ ಮೌಲ್ಯದ 400 ಕೆಜಿ ಗಾಂಜಾ: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಚಾಲಕ

ಟ್ರಕ್‌ ನಲ್ಲಿತ್ತು 40 ಲಕ್ಷ ರೂ. ಮೌಲ್ಯದ 400 ಕೆಜಿ ಗಾಂಜಾ: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಚಾಲಕ

ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್;‌ 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್;‌ 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

2

ಪ್ರತಿಷ್ಠೆ ರಾಜಕೀಯಕ್ಕೆ ಕಾರಣವಾಯ್ತಾ ಕಬ್ಬು ಹೋರಾಟ

ಸಂಸತ್ತಿಗೆ “ಅನುಭವ ಮಂಟಪ’ ದಾಖಲೆ

ಸಂಸತ್ತಿಗೆ “ಅನುಭವ ಮಂಟಪ’ ದಾಖಲೆ

ಮಕ್ಕಳಿಗೆ “ಬಾಂಬ್‌’, “ಗನ್‌’ ಎಂದು ನಾಮಕರಣ! ನಾಗರಿಕರಿಗೆ ಉ.ಕೊರಿಯಾ ಸರ್ಕಾರ ಆದೇಶ

ಮಕ್ಕಳಿಗೆ “ಬಾಂಬ್‌’, “ಗನ್‌’ ಎಂದು ನಾಮಕರಣ! ನಾಗರಿಕರಿಗೆ ಉ.ಕೊರಿಯಾ ಸರ್ಕಾರ ಆದೇಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು-ಮುಂಬಯಿ ವಿಶೇಷ ರೈಲು

ಮಂಗಳೂರು-ಮುಂಬಯಿ ವಿಶೇಷ ರೈಲು

ಮಂಗಳೂರು: ರೈಲು ಸಂಚಾರದಲ್ಲಿ ಬದಲಾವಣೆ

ಮಂಗಳೂರು: ರೈಲು ಸಂಚಾರದಲ್ಲಿ ಬದಲಾವಣೆ

ಮೂಡುಬಿದಿರೆಯ ಮಿಶೆಲ್‌ಗೆ ಡಿಆರ್‌ಐ ಶೌರ್ಯ ಪ್ರಶಸ್ತಿ

ಮೂಡುಬಿದಿರೆಯ ಮಿಶೆಲ್‌ಗೆ ಡಿಆರ್‌ಐ ಶೌರ್ಯ ಪ್ರಶಸ್ತಿ

ನೆಕ್ಸಸ್‌ ಮಾಲ್‌ಗೆ ಸೂಪರ್‌ ಸ್ಟಾರ್‌ ಅಮಿತಾಭ್‌ ಬ್ರ್ಯಾಂಡ್ ಅಂಬಾಸಿಡರ್‌

ನೆಕ್ಸಸ್‌ ಮಾಲ್‌ಗೆ ಸೂಪರ್‌ ಸ್ಟಾರ್‌ ಅಮಿತಾಭ್‌ ಬ್ರ್ಯಾಂಡ್ ಅಂಬಾಸಿಡರ್‌

ಮೀನುಗಾರರಿಗೆ ಹತ್ತು ದಿನದೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಬೃಹತ್‌ ಹೋರಾಟ: ಖಾದರ್‌

ಮೀನುಗಾರರಿಗೆ ಹತ್ತು ದಿನದೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಬೃಹತ್‌ ಹೋರಾಟ: ಖಾದರ್‌

MUST WATCH

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

ಹೊಸ ಸೇರ್ಪಡೆ

ಜಮೀನು ವಿವಾದ: ಸಹೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದುಕೊಂಡ ಆರೋಪಿಗಳು

ಜಮೀನು ವಿವಾದ: ಸಹೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದುಕೊಂಡ ಆರೋಪಿಗಳು

4

ಮಸ್ಕಿ: ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ಟ್ರಕ್‌ ನಲ್ಲಿತ್ತು 40 ಲಕ್ಷ ಮೌಲ್ಯದ 400 ಕೆಜಿ ಗಾಂಜಾ: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಚಾಲಕ

ಟ್ರಕ್‌ ನಲ್ಲಿತ್ತು 40 ಲಕ್ಷ ರೂ. ಮೌಲ್ಯದ 400 ಕೆಜಿ ಗಾಂಜಾ: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಚಾಲಕ

ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್;‌ 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್;‌ 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

3

ಮಹಾ ಸಚಿವರ ಗಡಿ ಪ್ರವೇಶಕ್ಕೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.