ಮಧ್ಯಪ್ರದೇಶ ರಾಜ್ಯದ ಚಿತ್ರಣವೇ ಬದಲು: ಶಿವರಾಜ್‌ ಸಿಂಗ್‌ ಚವ್ಹಾಣ್‌

Team Udayavani, Nov 24, 2022, 7:54 PM IST

tdy-11

ಬೆಂಗಳೂರು: “ಈ ಹಿಂದೆ ಮಧ್ಯಪ್ರದೇಶ ರಸ್ತೆಗಳೂ ಅಪಹಾಸ್ಯದ ವಿಷಯಗಳಾಗಿ ಬಳಕೆ ಆಗುತ್ತಿದ್ದವು. ಆದರೆ, ಈಗ ಆ ರಾಜ್ಯದ ಚಿತ್ರಣ ಬದಲಾಗಿದ್ದು, ಅಲ್ಲಿನ ಜಮೀನು (ಹೊಲ)ಗಳಿಗೂ ರಸ್ತೆ ನಿರ್ಮಿಸಲಾಗಿದೆ. ಇದು ಅಭಿವೃದ್ಧಿ ಮಂತ್ರದ ಫ‌ಲ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚವ್ಹಾಣ್‌ ತಿಳಿಸಿದರು.

ಮಧ್ಯಪ್ರದೇಶದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ನಗರದ ಯಶವಂತಪುರದ ತಾಜ್‌ ಹೋಟೆಲ್‌ನಲ್ಲಿ ಗುರುವಾರ ರೋಡ್‌ ಶೋ ನಡೆಸಿದ ಅವರು, ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮುಕ್ತ ಆಹ್ವಾನ ನೀಡಿದರು.

“ರಾಜ್ಯದಲ್ಲಿ ಅಭಿವೃದ್ಧಿ ಪಥ ಅತ್ಯಂತ ವೇಗವಾಗಿ ಸಾಗುತ್ತಿದೆ. ಸುಮಾರು ಮೂರು ಲಕ್ಷ ಕಿ.ಮೀ. ರಸ್ತೆಗಳನ್ನು ನಿರ್ಮಿಸಲಾಗಿದೆ. ಒಂದು ಕಾಲದಲ್ಲಿ ಈ ರಸ್ತೆಗಳು ಹಾಸ್ಯಾಸ್ಪದ ವಸ್ತು ಆಗಿದ್ದವು. ಇಂದು ಹಳ್ಳಿಗಳಿಗೆ ಮಾತ್ರವಲ್ಲ; ಜಮೀನುಗಳಿಗೂ ರಸ್ತೆಗಳಿವೆ. ಇದಲ್ಲದೆ, ನರ್ಮದಾ ಎಕ್ಸ್‌ಪ್ರೆಸ್‌ ಸೇರಿದಂತೆ ಸಾಕಷ್ಟು ರೈಲುಗಳು ಮತ್ತು ಮಾರ್ಗಗಳು, ವಿಮಾನ ಸಂಪರ್ಕ ಜಾಲ ವ್ಯಾಪಕವಾಗಿ ಹರಡಿಕೊಂಡಿದೆ. ಇದರಿಂದ ಸರಕು ಸಾಗಣೆಗೆ ಅನುಕೂಲವಾಗಿದೆ. ಜತೆಗೆ ನೀರಿನ ಲಭ್ಯತೆಯೂ ಸಾಕಷ್ಟಿದೆ’ ಎಂದು ಉದ್ಯಮಿಗಳ ಗಮನಸೆಳೆದರು.

ಮಧ್ಯಪ್ರದೇಶ ಕೈಗಾರಿಕಾ ನೀತಿ ಮತ್ತು ಕೈಗಾರಿಕಾ ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೀಷ್‌ ಸಿಂಗ್‌ ಮಾತನಾಡಿ, ರಾಜ್ಯದ ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಶೇ. 20ರಷ್ಟಿದ್ದು, ಇದೇ ಪ್ರಮಾಣವನ್ನು ಕಳೆದ ಒಂದು ದಶಕದಿಂದ ಕಾಯ್ದುಕೊಂಡು ಬಂದಿದೆ. ಇದು ಸುಸ್ಥಿರ ಅಭಿವೃದ್ಧಿಗೆ ಸಣ್ಣ ಉದಾಹರಣೆ ಅಷ್ಟೇ. ಕೈಗಾರಿಕೆಗಳಿಗಾಗಿಯೇ ಜಲಾಶಯಗಳಲ್ಲಿ ನೀರು ತೆಗೆದಿಡಲಾಗಿದೆ. ಈಸ್‌ ಆಫ್ ಡುಯಿಂಗ್‌ ಬ್ಯುಸಿನೆಸ್‌ ವ್ಯವಸ್ಥೆ ಇದ್ದು, 6 ಒಳನಾಡು ಕಂಟೈನರ್‌ ಘಟಕ (ಐಸಿಡಿ)ಗಳಿವೆ. ಇದು ಸರಕು ಸಾಗಣೆಗೆ ಪೂರಕವಾಗಿದೆ ಎಂದರು.

ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಪಶ್ಚಿಮ ಭಾಗದಲ್ಲಿ ಭೂಮಿಯ ಲಭ್ಯತೆ ಸಾಕಷ್ಟಿದೆ. ಇವುಗಳ ಮಂಜೂರಾತಿ ಕೂಡ ಅತ್ಯಂತ ಸುಲಭವಾಗಿ ದೊರೆಯುತ್ತದೆ. ಕಾರ್ಮಿಕರ ವೆಚ್ಚ ಉಳಿದ ರಾಜ್ಯಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇದೆ ಎಂದು ವಿವರಿಸಿದರು.

ಮಧ್ಯಪ್ರದೇಶದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಡಿ. 8ರಂದು ಭಾರೀ ಮಳೆ ಸಂಭವ: ತಮಿಳುನಾಡಿನ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಡಿ.8ರಂದು ಭಾರೀ ಮಳೆ ಸಾಧ್ಯತೆ: ತಮಿಳುನಾಡಿನ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಭೀಕರ ಅಪಘಾತ: ಸ್ಕೂಟರ್‌ ಗೆ ಢಿಕ್ಕಿ ಹೊಡೆದು ಯುವತಿಯನ್ನು ಎಳೆದೊಯ್ದ ದುಬಾರಿ ಕಾರು

ಭೀಕರ ಅಪಘಾತ: ಐಷಾರಾಮಿ ಕಾರಿನ ವೇಗಕ್ಕೆ 24 ವರ್ಷದ ಯುವತಿ ಬಲಿ

20

ತಂದೆಯೇ ಸುಪಾರಿ ಕೊಟ್ಟು ಮಗನ ಕೊಲೆ ಪ್ರಕರಣ; ನಾಲ್ವರ ಬಂಧನ

ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಗೆಲುವು ಬಿಜೆಪಿಯದ್ದೇ: ಈಶ್ವರಪ್ಪ

ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಗೆಲುವು ಬಿಜೆಪಿಯದ್ದೇ: ಈಶ್ವರಪ್ಪ

ನೀವು ನಮ್ಮ ಸೋಲು, ಸಂಕಟಗಳಿಂದ ಲಾಭ ಪಡೆದುಕೊಂಡಿದ್ದೀರಿ…ಭಾರತದ ವಿರುದ್ಧ ಉಕ್ರೇನ್ ಅಸಮಾಧಾನ

ನೀವು ನಮ್ಮ ಸೋಲು, ಸಂಕಟಗಳಿಂದ ಲಾಭ ಪಡೆದುಕೊಂಡಿದ್ದೀರಿ…ಭಾರತದ ವಿರುದ್ಧ ಉಕ್ರೇನ್ ಅಸಮಾಧಾನ

19

ಒಲಂಪಿಕ್ಸ್ ಹಾಗೂ ಪ್ಯಾರಾಒಲಂಪಿಕ್ಸ್ ಪದಕ ವಿಜೇತರಿಗೆ ಗ್ರೂಪ್ ಎ ಉದ್ಯೋಗ : ಬೊಮ್ಮಾಯಿ

18

ಗದ್ದೆಗೆ ನೀರು ಹರಿಸಲು ಹೋಗಿದ್ದ ಅಳಿಯ-ಮಾವ ಕಾಲುವೆ ನೀರು ಪಾಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

ತಂದೆಯೇ ಸುಪಾರಿ ಕೊಟ್ಟು ಮಗನ ಕೊಲೆ ಪ್ರಕರಣ; ನಾಲ್ವರ ಬಂಧನ

ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಗೆಲುವು ಬಿಜೆಪಿಯದ್ದೇ: ಈಶ್ವರಪ್ಪ

ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಗೆಲುವು ಬಿಜೆಪಿಯದ್ದೇ: ಈಶ್ವರಪ್ಪ

19

ಒಲಂಪಿಕ್ಸ್ ಹಾಗೂ ಪ್ಯಾರಾಒಲಂಪಿಕ್ಸ್ ಪದಕ ವಿಜೇತರಿಗೆ ಗ್ರೂಪ್ ಎ ಉದ್ಯೋಗ : ಬೊಮ್ಮಾಯಿ

16

ಗುಜರಾತ್ ಚುನಾವಣೋತ್ತರ ಸಮೀಕ್ಷೆ: ಕರ್ನಾಟಕದಲ್ಲಿಯೂ ಪರಿಣಾಮ; ಸಿಎಂ ಬೊಮ್ಮಾಯಿ

14

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

MUST WATCH

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

ಹೊಸ ಸೇರ್ಪಡೆ

tdy-15

ಸಮಸ್ಯೆ ಕೇಳಬೇಕಾದ ಜನಪ್ರತಿನಿಧಿಗಳೇ ನಾಪತ್ತೆ

21

ಕುರುಗೋಡು: ದೇಶದ ಅಖಂಡತೆಗೆ ಅಂಬೇಡ್ಕರ್ ಸೇವೆ ಅನನ್ಯ: ಟಿ. ಮುದಿಯಪ್ಪ ನಾಯಕ

ಡಿ. 8ರಂದು ಭಾರೀ ಮಳೆ ಸಂಭವ: ತಮಿಳುನಾಡಿನ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಡಿ.8ರಂದು ಭಾರೀ ಮಳೆ ಸಾಧ್ಯತೆ: ತಮಿಳುನಾಡಿನ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಭೀಕರ ಅಪಘಾತ: ಸ್ಕೂಟರ್‌ ಗೆ ಢಿಕ್ಕಿ ಹೊಡೆದು ಯುವತಿಯನ್ನು ಎಳೆದೊಯ್ದ ದುಬಾರಿ ಕಾರು

ಭೀಕರ ಅಪಘಾತ: ಐಷಾರಾಮಿ ಕಾರಿನ ವೇಗಕ್ಕೆ 24 ವರ್ಷದ ಯುವತಿ ಬಲಿ

ಶಾನಾಡಿ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ; ತಪ್ಪಿದ ಅನಾಹುತ

ಶಾನಾಡಿ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ; ತಪ್ಪಿದ ಅನಾಹುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.