ಮೈಸೂರಿನಲ್ಲಿ ಶೂಟೌಟ್‌ ; ಮುಂಬಯಿ ಮೂಲದ ದಂಧೆಕೋರ ಸಾವು

Team Udayavani, May 16, 2019, 1:45 PM IST

ಮೈಸೂರು: ನಗರದಲ್ಲಿ ಗುರುವಾರ ಮನಿ ಡಬ್ಲಿಂಗ್‌ ದಂಧೆಕೋರರನ್ನು ಗುರಿಯಾಗಿರಿಸಿಕೊಂಡು ಪೊಲೀಸರು ಶೂಟೌಟ್‌ ನಡೆಸಿದ್ದು ಮುಂಬೈ ಮೂಲದ ಓರ್ವ ದಂಧೆಕೋರ ಸಾವನ್ನಪ್ಪಿದ್ದಾನೆ.

ಹೆಬ್ಟಾಳ್‌ ರಿಂಗ್‌ ರಸ್ತೆಯ ಬಳಿಯಿರುವ ಅಪಾರ್ಟ್‌ಮೆಂಟ್‌ ಮೇಲೆ ವಿಜಯನಗರ ಪೊಲೀಸರು ಕಾರ್ಯಾಚರಣೆನಡೆಸಿದ್ದಾರೆ. ಈ ವೇಳೆ ಪೊಲೀಸರ ಗುಂಡು ತಗುಲಿ ಓರ್ವ ಸಾವನ್ನಪ್ಪಿದ್ದಾನೆ. ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಗನ್‌ಗಳ ಸಹಿತ ದಂಧೆಕೋರರು ಪರಾರಿಯಾಗಿರುವ ಹಿನ್ನಲೆಯಲ್ಲಿ ಮೈಸೂರಿನ ವಿವಿಧೆಡೆ ನಾಕಾಬಂಧಿ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ.

ಹತ್ಯೆಗೀಡಾದ ದಂಧೆಕೋರನ ಮೃತದೇಹವನ್ನು ಕೆ.ಆರ್‌ .ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ