ಬಿಜೆಪಿ ಸೇರಿರೋದ್ರಿಂದ ಹತಾಶರಾಗಿ ಮಾತನ್ನಾಡ್ತಿದ್ದಾರೆ: ಸಿದ್ದರಾಮಯ್ಯ ಟಾಂಗ್ ನೀಡಿದ್ಯಾರಿಗೆ?

Team Udayavani, Dec 3, 2019, 11:26 AM IST

ಮೈಸೂರು: ಸಿದ್ದರಾಮಯ್ಯ ವೈಟ್ ವಾಶ್ ಆಗ್ತಾರೆ ಎಂಬ ಶ್ರೀನಿವಾಸ್ ಪ್ರಸಾದ್ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ,  ಅವರು ಹೋದ ಕಡೆಯಲ್ಲಾ ಗಲಾಟೆ ಆಗುತ್ತಿದೆ. ಆದ್ರೂ ಶ್ರೀನಿವಾಸ್ ಪ್ರಸಾದ್ ಗೆ ಇನ್ನೂ ಬುದ್ದಿ ಬಂದಿಲ್ಲ ಎಂದು ತಿರುಗೇಟು ನೀಡಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಶ್ರೀನಿವಾಸ ಪ್ರಸಾದ್ ಬಿಜೆಪಿಗೆ ಸೇರಿದ ಮೇಲೆ ನಂಜನಗೂಡಲ್ಲಿ ಸೋತರು. ಬಿಜೆಪಿ ಸೇರಿರೋದ್ರಿಂದ ಹತಾಶರಾಗಿ ಮಾತಗಳನ್ನ ಆಡ್ತಾ ಇದ್ದಾರೆ. ಇವಕ್ಕೆಲ್ಲ ಉತ್ತರ ನೀಡೋಕ್ ಆಗಲ್ಲ ಎಂದರು.

ಬಿಜೆಪಿಯಷ್ಟೆ ಜೆಡಿಎಸ್ ಸಹ ನಮಗೆ ರಾಜಕೀಯ ವೈರಿ. ನಾವು ಈ ಚುನಾವಣೆಯನ್ನ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ. ಈ ಎರಡು ಪಕ್ಷಗಳು ಈ ಉಪಚುನಾವಣೆಯಲ್ಲಿ ಒಂದು ಕ್ಷೇತ್ರ ಗೆಲ್ಲಲ್ಲ ಎಂದು ಜೆಡಿಎಸ್ ಕಾಂಗ್ರೆಸ್ ಒಳ ಒಪ್ಪಂದ ವಿಚಾರವನ್ನು ತಳ್ಳಿ ಹಾಕಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ