ಪಿಒಕೆಯ ಶಾರದಾ ಪೀಠದ ಮೃತ್ತಿಕೆ ತರಲು ಚೀನದಿಂದ ಬಂದ ದಂಪತಿ


Team Udayavani, Aug 6, 2020, 8:19 AM IST

ಪಿಒಕೆಯ ಶಾರದಾ ಪೀಠದ ಮೃತ್ತಿಕೆ ತರಲು ಚೀನದಿಂದ ಬಂದ ದಂಪತಿ

ರಾಂಚಿ: ಇಲ್ಲಿನ ತಪೋವನ ಶ್ರೀ ರಾಮ ಮಂದಿರ ದೇಗುಲದಲ್ಲಿ ದೀಪಪ್ರಜ್ವಲಿಸಿ ಸಂಭ್ರಮಾಚರಣೆ

ಮಣಿಪಾಲ: ಅಯೋಧ್ಯೆಯ ರಾಮ ದೇಗುಲದ ಭೂಮಿ ಪೂಜೆಗೆ ದೇಶದ ಮೂಲೆ ಮೂಲೆಗಳಿಂದ ಪವಿತ್ರ ಜಲ ಮತ್ತು ಮಣ್ಣನ್ನು ಅಯೋಧ್ಯೆಗೆ ತಲುಪಿಸಲಾಗಿದೆ. ಪಿಒಕೆಯಲ್ಲಿರುವ ಪವಿತ್ರ ಶಾರದಾ ದೇಗುಲದ ಮೃತ್ತಿಕೆಯನ್ನೂ ಅಯೋಧ್ಯೆಗೆ ಅರ್ಪಿಸಲಾಗಿದೆ.

ಭಾರತದ ಪ್ರಜೆಗಳಿಗೆ ಪಿಒಕೆಗೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ. ಆದ್ದರಿಂದ ಚೀನದಲ್ಲಿ ವಾಸಿಸುತ್ತಿರುವ ಭರತವಂಶಿ ವೆಂಕಟೇಶ್‌ ರಾಮನ್‌ ಮತ್ತು ಅವರ ಪತ್ನಿ ಚೀನದಿಂದ ಪಾಸ್‌ಪೋರ್ಟ್‌ ಪಡೆದು ಪಿಒಕೆಗೆ ಆಗಮಿಸಿದ್ದಾರೆ. ಈ ದಂಪತಿಗಳು ಹಾಂಗ್‌ ಕಾಂಗ್‌ನಿಂದ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಫ‌ರಾಬಾದ್‌ಗೆ ಬಂದು ಶಾರದಾ ದೇಗುಲ ತಲುಪಿದ್ದಾರೆ. ಅಲ್ಲಿ ಪೂಜೆ ಸಲ್ಲಿಸಿ ಪವಿತ್ರ ಮಣ್ಣಿನೊಂದಿಗೆ ಹಾಂಕಾಂಗ್‌ ಮೂಲಕ ದಿಲ್ಲಿಗೆ ಆಗಮಿಸಿದ್ದರು. ಇಲ್ಲಿ ಅವರು ಈ ಮಣ್ಣನ್ನು ಕರ್ನಾಟಕದ ನಿವಾಸಿ ಮತ್ತು ಸೇವಾ ಶಾರದಾ ಪೀಠದ ಸಕ್ರಿಯ ಸದಸ್ಯೆ ಅಂಜನಾ ಶರ್ಮಾ ಅವರಿಗೆ ಹಸ್ತಾಂತರಿಸಿದರು. ಅವರು ಬುಧವಾರ ಬೆಳಗ್ಗೆ ಅಯೋಧ್ಯೆಗೆ ಮಣ್ಣಿನೊಂದಿಗೆ ಆಗಮಿಸಿದ್ದು, ಭೂಮಿ ಪೂಜೆಗೆ ಸಮರ್ಪಿಸಲಾಗಿದೆ.

ಈ ದೇಗುಲ ಹಿಂದೂಗಳು ಮತ್ತು ಕಾಶ್ಮೀರ ಪಂಡಿತರ ಮೂರು ಪವಿತ್ರ ತಾಣಗಳಲ್ಲಿ ಒಂದಾಗಿದೆ. ಇದು ನೀಲಮಣಿ ನದಿಯ ದಡದಲ್ಲಿದ್ದು, ಭಾರತದ ಉರಿಯಿಂದ 70 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಹೋಗಲು ಎರಡು ಮಾರ್ಗಗಳಿವೆ. ಮೊದಲನೆಯದು ಮುಜಫ‌ರಾಬಾದ್‌ನಿಂದ ಮತ್ತು ಎರಡನೆಯದು ಪೂಂಛ…-ರಾವಲಕೋಟ್‌ನಿಂದ. ಹೆಚ್ಚಾಗಿ ಉರಿಯಿಂದ ಮುಜಫ‌ರಾಬಾದ್‌ಗೆ ಹೋಗುವ ಮಾರ್ಗವನ್ನು ಬಳಸಲಾಗುತ್ತದೆ.

ಪಾಕ್‌ ಸರಕಾರ ಕಳೆದ ವರ್ಷ ಮಾ.25ರಂದು ಕಾರಿಡಾರ್‌ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇದರಿಂದ ಭಾರತದ ಹಿಂದೂಗಳು ಶಾರದಾ ದೇಗುಲಕ್ಕೆ ತೆರಳಲು ಅನುಕೂಲವಾಗಲಿದೆಎ ಎನ್ನಲಾಗಿತ್ತು. ಇಲ್ಲಿ ಶಾರದಾ ವಿಶ್ವವಿದ್ಯಾಲಯವೂ ಇತ್ತು, ಐದು ಸಾವಿರಕ್ಕೂ ಹೆಚ್ಚು ವಿದ್ವಾಂಸರು ಅಧ್ಯಯನ ಮಾಡುತ್ತಿದ್ದರು. ಆದಿ ಶಂಕರಾಚಾರ್ಯರು ಸಹ ಅಲ್ಲಿ ಅಧ್ಯಯನ ಮಾಡಿದ್ದರು ಎಂಬ ಉಲ್ಲೇಖ ಇದೆ.

ರಾಜ್ಯದಿಂದ ಜಲ ಅರ್ಪಣೆ
ಕರ್ನಾಟಕದ ಅಂಜನಾ ಪರ್ವತದಿಂದ ಪವಿತ್ರ ನೀರನ್ನು ಅಂಜನಾ ಶರ್ಮ ಅವರು ರಾಮ ಜನ್ಮಭೂಮಿಗೆ ಅರ್ಪಿಸಿದ್ದಾರೆ. ಅಂಜನಾ ಪರ್ವತವನ್ನು ರಾಮನ ಭಕ್ತ ಹನುಮನ ಜನ್ಮಸ್ಥಳವೆಂದು ಗುರುತಿಸಲಾಗುತ್ತದೆ. ಶಿವಲಿಂಗವನ್ನು ರಾವಣ ಲಂಕೆಗೆ ಕೊಂಡೊಯ್ಯಲು ಬಳಸಿದ್ದು ಗೋಕರ್ಣದ ದಾರಿಯನ್ನು. ಹೀಗಾಗಿ ಗೋಕರ್ಣದ ಪವಿತ್ರ ನೀರನ್ನೂ ಅಯೋಧ್ಯೆಗೆ ತಲುಪಿಸಲಾಗಿದೆ.

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.