ಹಿಂದಿನ ಜನ್ಮದಲ್ಲಿ ಕರ್ನಾಟಕದಲ್ಲೇ ಹುಟ್ಟಿದ್ದೆ, ನಾನೂ ಕನ್ನಡಿಗ: ಸೋನು ನಿಗಮ್

Team Udayavani, Feb 27, 2020, 10:55 AM IST

ಬೆಂಗಳೂರು: “ನಾನು ಹಿಂದಿನ ಜನ್ಮದಲ್ಲಿ ಇಲ್ಲಿಯೇ ಹುಟ್ಟಿದ್ದೆ, ಕನ್ನಡಿಗನೇ ಆಗಿದ್ದೆ ಎಂದು ಬಲವಾಗಿ ನಂಬಿದ್ದೆ” ಇದು ಖ್ಯಾತ ಗಾಯಕ ಸೋನು ನಿಗಮ್ ಹೇಳಿದ ಮಾತುಗಳು.

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಸೋನು ನಿಗಮ್ ಈ ಅಭಿಮಾನದ ಮಾತುಗಳನ್ನಾಡಿದರು. ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನೇ ಆಗಿದ್ದೆ ಎಂದು ನಾನು ಬಲವಾಗಿ ನಂಬಿದ್ದೆ. ಯಾಕೆಂದರೆ ನಾನು ಹಿಂದಿ ಹಾಡು ಹಾಡಲು ಬಂದಿದ್ದೆ. ಆದರೆ ಹಿಂದಿಗಿಂತ ಒಳ್ಳೆಯ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ. ಕನ್ನಡದ ಜನರ ಬಗ್ಗೆ ತುಂಬ ಗೌರವವಿದೆ. ನಿಮ್ಮ ಪ್ರೀತಿ ಪಡೆಯಲು ಹೆಮ್ಮೆ ಆಗುತ್ತಿದೆ ಎಂದು ಸೋನು ನಿಗಮ್ ಹೇಳಿದರು.

ನಾನು ದುಬೈ, ಆಸ್ಪ್ರೇಲಿಯಾ, ಅಮೇರಿಕಾ ಹೀಗೆ ಹಲವು ದೇಶಗಳಲ್ಲಿ ಕಾರ್ಯಕ್ರಮ ಕೊಡುತ್ತೇನೆ. ಯಾವ ದೇಶದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರೂ ಅಲ್ಲಿ ಒಂದು ‘ಕನ್ನಡ’ ಎಂದು ಧ್ವನಿ ಕೇಳುತ್ತದೆ. ಆಗ ನಾನು ‘ಅನುಸುತ್ತಿದೆ ಯಾಕೋ ಇಂದು’ ಎಂದು ಹಾಡುತ್ತೇನೆ ಎಂದರು. ಇಷ್ಟೇ ಅಲ್ಲದೆ ವೇದಿಕೆಯಲ್ಲಿ ಸೋನು ನಿಗಮ್ ಮುಂಗಾರು ಮಳೆ ಚಿತ್ರದ ಅನಿಸುತ್ತಿದೆ ಯಾಕೋ ಇಂದು’ ಹಾಡನ್ನು ಹಾಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ