ರಿಕ್ಲೆಟನ್, ಮಗಾಲ: ದ. ಆಫ್ರಿಕಾ ಟೆಸ್ಟ್ ತಂಡದಲ್ಲಿಎರಡು ಹೊಸ ಮುಖ
Team Udayavani, Dec 8, 2021, 5:10 AM IST
ಜೊಹಾನ್ಸ್ಬರ್ಗ್: ಪ್ರವಾಸಿ ಭಾರತದೆದುರಿನ 3 ಪಂದ್ಯಗಳ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾದ 21 ಸದಸ್ಯರ ತಂಡ ಪ್ರಕಟಗೊಂಡಿದೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಯಾನ್ ರಿಕ್ಲೆಟನ್ ಮತ್ತು ಪೇಸ್ ಬೌಲರ್ ಸಿಸಂಡ ಮಗಾಲ ಈ ತಂಡದ ಇಬ್ಬರು ಹೊಸಬರಾಗಿದ್ದಾರೆ.
ಪೇಸರ್ ಡ್ನೂನ್ ಒಲಿವರ್ 2 ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ಕರೆ ಪಡೆದಿದ್ದಾರೆ. ನೆದರ್ಲೆಂಡ್ಸ್ ಏಕದಿನ ಸರಣಿ ವೇಳೆ ವಿಶ್ರಾಂತಿಯಲ್ಲಿದ್ದ ವೇಗಿ ಗಳಾದ ಕಾಗಿಸೊ ರಬಾಡ ಮತ್ತು ಅನ್ರಿಚ್ ನೋರ್ಜೆ ವಾಪಸಾಗಿದ್ದಾರೆ. ತಂಡಕ್ಕೆ ಮರಳಿದ ಇನ್ನಿಬ್ಬರು ಪ್ರಮುಖ ರೆಂದರೆ ಗ್ಲೆಂಟನ್ ಸ್ಟರ್ಮ್ಯಾನ್ ಮತ್ತು ಪ್ರಿನೆಲಾನ್ ಸುಬ್ರಾಯೆನ್. ತಂಡದ ನಾಯಕ ಡೀನ್ ಎಲ್ಗರ್.
ಟೆಸ್ಟ್ ಸರಣಿಯ ಆರಂಭ ಒಂದು ವಾರ ವಿಳಂಬಗೊಳ್ಳಲಿದ್ದು, ಡಿ. 26ರಂದು ಸೆಂಚುರಿಯನ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.
ಇದನ್ನೂ ಓದಿ:ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್
ದಕ್ಷಿಣ ಆಫ್ರಿಕಾ ತಂಡ
ಡೀನ್ ಎಲ್ಗರ್ (ನಾಯಕ), ಟೆಂಬ ಬವುಮ (ಉಪ ನಾಯಕ), ಕ್ವಿಂಟನ್ ಡಿ ಕಾಕ್ (ವಿ.ಕೀ.), ಕಾಗಿಸೊ ರಬಾಡ, ಸರೆಲ್ ಇರ್ವಿ, ಬ್ಯೂರನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಐಡನ್
ಮಾರ್ಕ್ರಮ್, ವಿಯಾನ್ ಮುಲ್ಡರ್, ಅನ್ರಿಚ್ ನೋರ್ಜೆ, ಕೀಗನ್ ಪೀಟರ್ಸನ್, ರಸ್ಸಿ ವಾನ್ ಡರ್ ಡುಸೆನ್, ಕೈಲ್ ವೆರೇನ್, ಮಾರ್ಕೊ ಜಾನ್ಸೆನ್, ಗ್ಲೆಂಟನ್ ಸ್ಟರ್ಮ್ಯಾನ್, ಪ್ರಿನೆಲಾನ್ ಸುಬ್ರಾಯೆನ್, ಸಿಸಂಡ ಮಗಾಲ, ರಿಯಾನ್ ರಿಕೆಲ್ಟನ್, ಡ್ನೂನ್ ಒಲಿವರ್.