Special Day Celebration: ಇನ್ನು ಸರಕಾರಿ ಶಾಲೆಗಳಲ್ಲಿ ವಿಶೇಷ ದಿನ ಹಬ್ಬದೂಟ!
ದಾನಿಗಳ ನೆರವು ಪಡೆಯಲು ಮುಂದಾದ ಇಲಾಖೆ ವರ್ಷಕ್ಕೆ 100 ಊಟಕ್ಕೆ ಅವಕಾಶ
Team Udayavani, Aug 4, 2024, 7:45 AM IST
ಬೆಂಗಳೂರು: ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗೆ ಓದುತ್ತಿರುವ ಮಕ್ಕಳಿಗೆ ಹಬ್ಬ ಹರಿದಿನ, ಮದುವೆ/ಮದುವೆ ವಾರ್ಷಿಕೋತ್ಸವ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜನ್ಮದಿನಗಳು, ರಾಷ್ಟ್ರೀಯ ಪ್ರಮುಖ ದಿನಗಳು, ರಾಜ್ಯ ಸ್ಥಾಪನೆಯ ದಿನಗಳು ಸೇರಿ ವಿಶೇಷ ದಿನಾಚರಣೆಗಳ ಸಂದರ್ಭ ವಿಶೇಷ ಭೋಜನ ಏರ್ಪಡಿಸಲು ಸರಕಾರ ಅವಕಾಶ ಕಲ್ಪಿಸಿದೆ.
ಇದಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಪೌಷ್ಟಿಕ ಮತ್ತು ಆರೋಗ್ಯಕರ ಊಟ ಅಥವಾ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಹೇಳಿದೆ. ಈ ವಿಶೇಷ ಭೋಜನವು ಪಿಎಂ ಪೋಷಣ್‌ನ ಭಾಗವಾಗಿದೆ. ಎನ್‌ಜಿಒಗಳು, ಕೈಗಾರಿಕೆ, ವಾಣಿಜ್ಯ ಮತ್ತು ವ್ಯಾಪಾರ ಇತ್ಯಾದಿ ಸಮುದಾಯದ ಸದಸ್ಯರು ಸೇರಿ ಪೋಷಕರು, ಸಮುದಾಯದ ದಾನಿಗಳ ನೆರವು, ಪ್ರಾಯೋಜಕತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಮಾನದಂಡಗಳಿಗೆ ಅನುಗುಣವಾಗಿ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ 450 ಕ್ಯಾಲೋರಿಗಳು ಮತ್ತು 12 ಗ್ರಾಂ ಪ್ರೊಟೀನ್, ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ 750 ಕ್ಯಾಲೋರಿ ಮತ್ತು 20 ಗ್ರಾಂ ಪ್ರೊಟೀನ್ ಲಭ್ಯವಾಗುವಂತೆ ವಿಶೇಷ ಭೋಜನದ ಮೆನು ಇರಬೇಕು ಎಂದು ಸೂಚನೆ ನೀಡಲಾಗಿದೆ.
ಸ್ಥಳೀಯ ಆಹಾರಕ್ಕೆ ಆದ್ಯತೆ:
ಸ್ಥಳೀಯವಾಗಿ ಲಭ್ಯವಿರುವ ಸೊಪ್ಪಿನ ತರಕಾರಿಗಳು, ಕಾಳು, ದ್ವಿದಳ ಧಾನ್ಯ ಮತ್ತು ಸಿರಿಧಾನ್ಯಗಳಿಗೆ ಒತ್ತು ನೀಡಬೇಕು. ಋತುಮಾನದ ಹಣ್ಣುಗಳನ್ನು, ತಾಜಾ ತರಕಾರಿಗಳನ್ನು ಬಳಸಿಕೊಳ್ಳಬಹುದು. ಆಹಾರ ಧಾನ್ಯ ಸಂಗ್ರಹ, ಅಡುಗೆ ಮಾಡುವಾಗ ಹಾಗೂ ಬಡಿಸುವಾಗ ಸ್ವತ್ಛತೆ ಮತ್ತು ನೈರ್ಮಲ್ಯದ ಮಾನದಂಡಗಳ ಕಡ್ಡಾಯ ಪಾಲನೆ ಆಗಬೇಕು. ಆಹಾರ ಕಲಬೆರಕೆ ಮತ್ತು ಆಹಾರ ಹಾಳಾಗುವುದನ್ನು ತಡೆಯಲು ಪ್ರಮಾಣಿತ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶುದ್ಧ ಕುಡಿಯುವ ನೀರನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.
ಜಂಕ್ ಫುಡ್ ಬೇಡ
ಮಕ್ಕಳಲ್ಲಿ ಜಂಕ್ ಫುಡ್ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಆಗುತ್ತಿರುವ ಬಗ್ಗೆ ವಿವಿಧ ವರದಿಗಳಲ್ಲಿ ಉಲ್ಲೇಖ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು ವಿಶೇಷ ಭೋಜನದಲ್ಲಿ ನೂಡಲ್ಸ್, ಚಿಪ್ಸ್, ಚಾಕೋಲೆಟ್ ಮುಂತಾದ ಜಂಕ್ ಫುಡ್‌ಗೆ ಅವಕಾಶವಿಲ್ಲ, ಹಳಸಿದ ಆಹಾರವನ್ನು ಕೊಡಬೇಡಿ ಎಂದು ಸೂಚಿಸಲಾಗಿದೆ. ಮಕ್ಕಳಿಗೆ ಉಣಬಡಿಸುವ ಮೊದಲು ಶಿಕ್ಷಕರು ಮತ್ತು ಅಡುಗೆಯವರು ರುಚಿ ನೋಡಬೇಕೆಂದು ಹೇಳಲಾಗಿದೆ. ವರ್ಷಕ್ಕೆ ನೂರರಷ್ಟು ವಿಶೇಷ ಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಬಹುದೆಂದು ಹೇಳಲಾಗಿದೆ.
“ಮಾರ್ಗಸೂಚಿಯಂತೆ ಶಾಲಾ ಹಂತದಲ್ಲಿ ವಿಶೇಷ ಭೋಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಮತ್ತು ಗುಣಮಟ್ಟದ ಪೋಷಕಾಂಶಗಳಿರುವ ಪೂರಕ ಆಹಾರ ಪದಾರ್ಥಗಳನ್ನು ಪೋಷಕರು ಮತ್ತು ಸಮುದಾಯದ ದಾನಿಗಳಿಂದ ಕೊಡುಗೆಯಾಗಿ ಕೊಡುವುದನ್ನು ಉತ್ತೇಜಿಸಬೇಕು.” – ಬಿ.ಬಿ. ಕಾವೇರಿ, ಆಯುಕ್ತ, ಶಾಲಾ ಶಿಕ್ಷಣ ಇಲಾಖೆ
– ರಾಕೇಶ್ ಎನ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
Hubballi: ಕರ್ತವ್ಯದಲ್ಲಿದ್ದ ಎಎಸ್‌ಐ ತಲೆ ಮೇಲೆ ಬಿದ್ದ ಕಬ್ಬಿಣದ ರಾಡ್; ತೀವ್ರ ಗಾಯ
Belagavi: ಕಾಂಗ್ರೆಸ್ ನ ಆಂತರಿಕ ಕಲಹ ಇನ್ನಷ್ಟು ತೀವ್ರವಾಗಲಿದೆ: ಶೆಟ್ಟರ್
State Politics; ಸರ್ಕಾರ ಇರುವವರೆಗೂ ಸಿದ್ದರಾಮಯ್ಯನವರೇ ಸಿಎಂ…: ದೇಶಪಾಂಡೆ
Hubballi: ಮಹಾದಾಯಿಗೆ ಕ್ಲಿಯರೆನ್ಸ್ ನೀಡಲು ಬಿಜೆಪಿಗೆ ಯಾಕೆ ಆಗುತ್ತಿಲ್ಲ? ಸಚಿವ ಲಾಡ್ ಕಿಡಿ
MUST WATCH
ಹೊಸ ಸೇರ್ಪಡೆ
Haryana Assembly Election: ಆಪ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
Kangana Ranaut: 32 ಕೋಟಿ ರೂ.ಗೆ ಬಂಗಲೆ ಮಾರಿದ ಸಂಸದೆ ಕಂಗನಾ
Manipur: ಮತ್ತೆ ಉದ್ವಿಗ್ನ, ಇಂಟರ್ನೆಟ್ ಸ್ಥಗಿತ, ಕರ್ಫ್ಯೂ ಜಾರಿಗೊಳಿಸಿದ ಸರಕಾರ
Bidar: ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.