ಪೋಷಕಾಂಶ; ಬಾಯಿರುಚಿ ಹೆಚ್ಚಿಸುವ ತಂಬುಳಿಗಳು

ತಂಬುಳಿ ತಯಾರಿಸಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ

Team Udayavani, Jul 29, 2022, 3:47 PM IST

ಬಾಯಿರುಚಿ ಹೆಚ್ಚಿಸುವ ತಂಬುಳಿಗಳು

ಬೇಸಿಗೆಗಾಲದಲ್ಲಿ ತಂಬುಳಿಗಳು ನಮ್ಮ ದೇಹವನ್ನು ತಂಪಾಗಿಡುವುದಲ್ಲದೆ ಆರೋಗ್ಯ ಸುಧಾರಣೆಗೂ ಉತ್ತಮ. ಹಿತ್ತಲಿನಲ್ಲಿ ದೊರೆಯುವ ಬಸಳೆ ಸೊಪ್ಪು , ಬೇವಿನ ಸೊಪ್ಪಿನಿಂದ ತಂಬುಳಿ ತಯಾರಿಸಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಇಲ್ಲಿವೆ ಅಂತಹ ಕೆಲವು ರಿಸಿಪಿಗಳು.

ಬಸಳೆ ಚಿಗುರು ತಂಬುಳಿ
ಬೇಕಾಗುವ ಸಾಮಗ್ರಿ: ಒಂದು ಹಿಡಿ ಬಸಳೆ ಚಿಗುರು, ಜೀರಿಗೆ- 1 ಚಮಚ, ಸಣ್ಣ ತುಂಡು ಬೆಲ್ಲ, ಮಜ್ಜಿಗೆ- 3 ಸೌಟು (ಹುಳಿ ಇದ್ದರೆ ಕಡಿಮೆ ಸಾಕು), ಉಪ್ಪು ರುಚಿಗೆ, ಚೂರು ಬೆಣ್ಣೆ, ಹಸಿ ತೆಂಗಿನತುರಿ- 1 ಕಪ್‌. ಒಗ್ಗರಣೆಗೆ : ಮೆಣಸು, ಸಾಸಿವೆ, ಬೆಣ್ಣೆ ಚೂರು.

ತಯಾರಿಸುವ ವಿಧಾನ: ಬಸಳೆ ಚಿಗುರನ್ನು ಜೀರಿಗೆ, ಬೆಣ್ಣೆ ಹಾಕಿ ಹುರಿಯಬೇಕು. ಸ್ವಲ್ಪ ತಣ್ಣಗಾದ ಮೇಲೆ ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಬೇಕು. ಅದಕ್ಕೆ ಬೆಲ್ಲ , ಉಪ್ಪು, ಮಜ್ಜಿಗೆ, ಬೇಕಾದಷ್ಟು ನೀರು ಹಾಕಿ ಒಗ್ಗರಣೆ ಹಾಕಿದರೆ ಬಸಳೆ ಚಿಗುರು ತಂಬುಳಿ ತಯಾರು.

ಬೇವಿನ ಸೊಪ್ಪು ತಂಬುಳಿ
ಬೇಕಾಗುವ ಸಾಮಗ್ರಿ: ಬೇವಿನಸೊಪ್ಪು- 1 ಹಿಡಿ, ಜೀರಿಗೆ- 1 ಚಮಚ, ಒಳ್ಳೆ ಮೆಣಸು- 5 ಕಾಳು, ಹಸಿ ತೆಂಗಿನತುರಿ- 2 ಕಪ್‌, ಮಜ್ಜಿಗೆ- 2 ಸೌಟು, ಬೆಣ್ಣೆ- 1/2 ಚಮಚ, ಒಗ್ಗರಣೆಗೆ : ಒಣಮೆಣಸು, ಸಾಸಿವೆ, ಚೂರು ತುಪ್ಪ.

ತಯಾರಿಸುವ ವಿಧಾನ: ಶುದ್ಧೀಕರಿಸಿದ ಬೇವಿನಸೊಪ್ಪನ್ನು, ಜೀರಿಗೆ ಬೆಣ್ಣೆ ಹಾಕಿ ಹುರಿದುಕೊಳ್ಳಬೇಕು. ಹುರಿದ ಬೇವಿನಸೊಪ್ಪನ್ನು ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಬೇಕು. ಬೀಸಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು ಹಾಕಿ ತಕ್ಕಷ್ಟು ನೀರು ಹಾಕಿ ಕುದಿಸಬೇಕು. ಸಣ್ಣಗೆ ಕುದಿಯುವಾಗ ಒಗ್ಗರಣೆ ಹಾಕಿದರೆ ಬೇವಿನಸೊಪ್ಪು ತಂಬುಳಿ ತಯಾರು.
ಉಪ್ಪಿನಕಾಯಿ ಮಿಡಿ ತಂಬುಳಿ

ಬೇಕಾಗುವ ಸಾಮಗ್ರಿ: ಉಪ್ಪಿನಕಾಯಿ ಮಿಡಿ- 2, ತೆಂಗಿನತುರಿ- 1 ಕಪ್‌, ಮಜ್ಜಿಗೆ – 2 ಸೌಟು, ಒಗ್ಗರಣೆಗೆ : ಎಣ್ಣೆ , ಮೆಣಸು, ಸಾಸಿವೆ.
ತಯಾರಿಸುವ ವಿಧಾನ: ಉಪ್ಪಿನಕಾಯಿ ಮಿಡಿಯನ್ನು ತೊಳೆದು ಹೆಚ್ಚಿನ ಖಾರ ತೆಗೆದುಬಿಡಬೇಕು. ಆಮೇಲೆ ಮಾವಿನ ಮಿಡಿಯನ್ನು ಮತ್ತು ತೆಂಗಿನತುರಿಯನ್ನು ನುಣ್ಣಗೆ ಬೀಸಬೇಕು. ಆ ಮಿಶ್ರಣವನ್ನು ಮಜ್ಜಿಗೆ, ಬೇಕಿದ್ದರೆ ಸ್ವಲ್ಪ ಉಪ್ಪು , ನೀರು ಹಾಕಿ ಕುದಿಸಬೇಕು. ಸಣ್ಣ ಕುದಿ ಬಂದಾಗ ಮೆಣಸು, ಸಾಸಿವೆ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾದ ಪರಿಮಳಯುಕ್ತ ತಂಬುಳಿ ತಯಾರು.

ಮೆಂತೆ ತಂಬುಳಿ
ಬೇಕಾಗುವ ಸಾಮಗ್ರಿ: ಮೆಂತೆ- 1 ಚಮಚ, ಸಣ್ಣ ತುಂಡು ಬೆಲ್ಲ, ಹುಳಿ ಮಜ್ಜಿಗೆ- 1 ಸೌಟು, ರುಚಿಗೆ ಉಪ್ಪು, ಚೂರು ಎಣ್ಣೆ ಅಥವಾ ಬೆಣ್ಣೆ. ತೆಂಗಿನತುರಿ- 1 ಕಪ್‌, ಕಾಳುಮೆಣಸು- 4 ಕಾಳು.

ತಯಾರಿಸುವ ವಿಧಾನ: ಮೆಂತೆಗೆ ಚೂರು ಎಣ್ಣೆ ಅಥವಾ ಬೆಣ್ಣೆ ಹಾಕಿ ಪಟಪಟ ಶಬ್ದ ಕೇಳುವಷ್ಟು ಹುರಿದುಕೊಳ್ಳಬೇಕು. ಹುರಿದ ಮೆಂತೆಯನ್ನು ತೆಂಗಿನತುರಿಯೊಂದಿಗೆ ಮಜ್ಜಿಗೆ ಉಪ್ಪು ಹಾಕಿ ನುಣ್ಣಗೆ ಬೀಸಬೇಕು. ಈ ಮಿಶ್ರಣಕ್ಕೆ ಬೆಲ್ಲ ತಕ್ಕಷ್ಟು ನೀರು ಸೇರಿಸಿ ಮೆಣಸು, ಸಾಸಿವೆ ಒಗ್ಗರಣೆ ಕೊಟ್ಟರೆ ಮೆಂತೆ ತಂಬುಳಿ ತಯಾರು.

ಟಾಪ್ ನ್ಯೂಸ್

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

1-ddad

ಅನುರಾಗ್ ಕಶ್ಯಪ್ ವಿರುದ್ಧ ವಿವೇಕ್ ರಂಜನ್ ಅಗ್ನಿಹೋತ್ರಿ ಕಿಡಿ

ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಪ್ಯಾರಾ ಏಷ್ಯನ್‌ ಗೇಮ್ಸ್‌ :ಪರಿಷ್ಕೃತ ದಿನಾಂಕ ಪ್ರಕಟ

ಪ್ಯಾರಾ ಏಷ್ಯನ್‌ ಗೇಮ್ಸ್‌ :ಪರಿಷ್ಕೃತ ದಿನಾಂಕ ಪ್ರಕಟ

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

ಲಾರ್ಡ್ಸ್‌ ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ಬ್ಯಾಟಿಂಗ್‌ ಕುಸಿತ

ಲಾರ್ಡ್ಸ್‌ ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ಬ್ಯಾಟಿಂಗ್‌ ಕುಸಿತ

ಹಾಸ್ಪಿಟಾಲಿಟಿ ಕ್ಷೇತ್ರಕ್ಕೆ ನೆರವು ವಿಸ್ತರಣೆ: ಸಚಿವ ಅನುರಾಗ್‌ ಠಾಕೂರ್‌

ಹಾಸ್ಪಿಟಾಲಿಟಿ ಕ್ಷೇತ್ರಕ್ಕೆ ನೆರವು ವಿಸ್ತರಣೆ: ಸಚಿವ ಅನುರಾಗ್‌ ಠಾಕೂರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರೋಗ್ಯ ಭಾಗ್ಯ: ಋತುಚಕ್ರದ ಏರುಪೇರು…ಅತಿ ಸುಲಭದ ಪರಿಹಾರವೇನು?

ಆರೋಗ್ಯ ಭಾಗ್ಯ: ಋತುಚಕ್ರದ ಏರುಪೇರು…ಅತಿ ಸುಲಭದ ಪರಿಹಾರವೇನು?

ಸ್ಪರ್ಶ್‌ ಆಸ್ಪತ್ರೆಯಿಂದ ಅಂಗಾಂಗ ದಾನ ಉತ್ತೇಜಿಸಲು ವಾಕಥಾನ್‌

ಸ್ಪರ್ಶ್‌ ಆಸ್ಪತ್ರೆಯಿಂದ ಅಂಗಾಂಗ ದಾನ ಉತ್ತೇಜಿಸಲು ವಾಕಥಾನ್‌

ಬಂಜೆತನಕ್ಕೆ ಕಾರಣಗಳನ್ನು ತಿಳಿಯುವುದು ಮತ್ತು ಯಶಸ್ಸಿನ ಸಾಧ್ಯತೆಗಳು

ಬಂಜೆತನಕ್ಕೆ ಕಾರಣಗಳನ್ನು ತಿಳಿಯುವುದು ಮತ್ತು ಯಶಸ್ಸಿನ ಸಾಧ್ಯತೆಗಳು

ಮೆಂತೆ ಕಾಳು ಕೇವಲ ಅಡುಗೆಗೆ ಮಾತ್ರವಲ್ಲ…ಇದರಲ್ಲಿದೆ ಹಲವಾರು ಔಷಧೀಯ ಗುಣ

ಮೆಂತೆ ಕಾಳು ಕೇವಲ ಅಡುಗೆಗೆ ಮಾತ್ರವಲ್ಲ…ಇದರಲ್ಲಿದೆ ಹಲವಾರು ಔಷಧೀಯ ಗುಣ

ದೆಹಲಿಯಲ್ಲಿ ಮಂಕಿಪಾಕ್ಸ್ 5ನೇ ಪ್ರಕರಣ ಪತ್ತೆ; ಭಾರತದಲ್ಲಿನ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆ

ದೆಹಲಿಯಲ್ಲಿ ಮಂಕಿಪಾಕ್ಸ್ 5ನೇ ಪ್ರಕರಣ ಪತ್ತೆ; ಭಾರತದಲ್ಲಿನ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆ

MUST WATCH

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

ಹೊಸ ಸೇರ್ಪಡೆ

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

1-ddad

ಅನುರಾಗ್ ಕಶ್ಯಪ್ ವಿರುದ್ಧ ವಿವೇಕ್ ರಂಜನ್ ಅಗ್ನಿಹೋತ್ರಿ ಕಿಡಿ

ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಪ್ಯಾರಾ ಏಷ್ಯನ್‌ ಗೇಮ್ಸ್‌ :ಪರಿಷ್ಕೃತ ದಿನಾಂಕ ಪ್ರಕಟ

ಪ್ಯಾರಾ ಏಷ್ಯನ್‌ ಗೇಮ್ಸ್‌ :ಪರಿಷ್ಕೃತ ದಿನಾಂಕ ಪ್ರಕಟ

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.