ಧಾರವಾಡದಲ್ಲಿ ಸ್ಪುಟ್ನಿಕ್-ವಿ ಉತ್ಪಾದನೆ : ಶಿಲ್ಪಾ ಮೆಡಿಕೇರ್-ಡಾ| ರೆಡ್ಡೀಸ್ 3 ಒಪ್ಪಂದ
Team Udayavani, May 18, 2021, 7:10 AM IST
ಮುಂಬಯಿ : ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಕರ್ನಾಟಕದಲ್ಲೂ ಉತ್ಪಾದನೆ ಮಾಡಲಾಗುತ್ತದೆ. ಲಸಿಕೆ ಕೊರತೆ ನಡುವೆ ಈ ಸುದ್ದಿ ಸಮಾಧಾನ ತಂದಿದೆ.
ಶಿಲ್ಪಾ ಮೆಡಿಕೇರ್ ಸಂಸ್ಥೆಯು ಹೈದರಾಬಾದ್ನ ಡಾ| ರೆಡ್ಡೀಸ್ ಲ್ಯಾಬೋರೇಟರಿ ಜತೆ ಸೇರಿ 5 ಕೋಟಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲಿದೆ. ಧಾರವಾಡದಲ್ಲಿರುವ ಈ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಈ ಬಗ್ಗೆ ಎರಡೂ ಸಂಸ್ಥೆಗಳು ಒಪ್ಪಂದ ಮಾಡಿವೆ.
ಒಪ್ಪಂದದ ಪ್ರಕಾರ ಶಿಲ್ಪಾ ಮೆಡಿಕೇರ್ನ ಶಿಲ್ಪಾ ಬಯಲಾಜಿಕಲ್ಸ್ ಲಸಿಕೆ ಉತ್ಪಾದಿಸಲಿದೆ. ಡಾ| ರೆಡ್ಡೀಸ್ ಅದರ ವಿತರಣೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ವಹಿವಾಟು ನೋಡಿಕೊಳ್ಳಲಿದೆ. ಡಾ| ರೆಡ್ಡೀಸ್ ಜತೆಗೆ 3 ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮೊದಲ 12 ತಿಂಗಳಲ್ಲಿ 5 ಕೋಟಿ ಡೋಸ್ ಸ್ಪುಟ್ನಿಕ್-ವಿ ಉತ್ಪಾದನೆ ಮಾಡಲಾಗುತ್ತದೆ.
ಮತ್ತೂಂದು ಮಹತ್ವಪೂರ್ಣ ವಿಚಾರವೆಂದರೆ ರಷ್ಯಾ ಸಂಶೋಧಿಸಿ ಅಭಿವೃದ್ಧಿ ಪಡಿಸಿರುವ ಸಿಂಗಲ್ ಡೋಸ್ ಸ್ಪುಟ್ನಿಕ್ ವಿ ಲೈಟ್ ಲಸಿಕೆಯನ್ನು ಜಂಟಿಯಾಗಿ ಉತ್ಪಾದಿಸಿ, ದೇಶದಲ್ಲಿ ಮಾರುಕಟ್ಟೆ ಮಾಡಲು ಚರ್ಚೆಗಳು ನಡೆದಿವೆ. ಸ್ಥಳೀಯವಾಗಿ ಲಸಿಕೆ ಉತ್ಪಾದನೆ ಆರಂಭಿಸುವುದರಿಂದ ಜುಲೈ ವೇಳೆಗೆ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಸಿಗಬಹುದು. ಅನಂತರ ಉತ್ಪಾದನೆ ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದು ಸ್ಪುಟ್ನಿಕ್-ವಿ ಉತ್ಪಾದನೆ ಬಗ್ಗೆ ಡಾ| ರೆಡ್ಡೀಸ್ ಲ್ಯಾಬ್ನ ಎಪಿಐ ಮತ್ತು ಸರ್ವಿಸಸ್ ಸಿಇಒ ದೀಪಕ್ ಸಪ್ರಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ