ಸಾಗರ ಮಾರಿಕಾಂಬಾ ಜಾತ್ರೆ; ತಾಯಿಯ ಕೃಪೆಗಾಗಿ ಭಕ್ತರ ಆರಾಧನೆ

ಹಣದ ವಹಿವಾಟಿನ ಉದ್ಯಮವಾಗಿಯೂ ಜನಾಕರ್ಷಣೆ

Team Udayavani, Feb 7, 2023, 7:24 PM IST

ಸಾಗರ ಮಾರಿಕಾಂಬಾ ಜಾತ್ರೆ; ತಾಯಿಯ ಕೃಪೆಗಾಗಿ ಭಕ್ತರ ಆರಾಧನೆ

ಸಾಗರ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ನಗರದ ಮಾರಿಕಾಂಬಾ ಜಾತ್ರೆ ಹತ್ತು ಹಲವು ಧಾರ್ಮಿಕ ಆಚರಣೆಗಳನ್ನು ಒಂದಿನಿತೂ ವ್ಯತ್ಯಯಗಳಿಲ್ಲದೆ ನಡೆಸುವ ವ್ಯವಸ್ಥೆ. ಇದರಲ್ಲಿ ಭಕ್ತರು ಇನ್ನಿಲ್ಲದ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಇಂದೂ ಜನರಲ್ಲಿರುವ ಧಾರ್ಮಿಕ ನಂಬಿಕೆಗಳಿಗೆ ಮಂಗಳವಾರದಿಂದ ಆರಂಭವಾಗಲಿರುವ ಮಾರಿಕಾಂಬಾ ಜಾತ್ರೆ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಒಂಬತ್ತು ದಿನಗಳ ಜಾತ್ರಾ ಅವಧಿಯಲ್ಲಿ ಮೊದಲ ದಿನ ತವರುಮನೆಯಲ್ಲಿ ಹಾಗೂ ಉಳಿದ ಎಂಟು ದಿನ ಗಂಡನ ಮನೆಯಲ್ಲಿ ದೇವಿಯ ದರ್ಶನ ಪಡೆಯಲು ಭಕ್ತರ ಸಾಲು ಸಾಲು ಪ್ರತಿ ದಿನ ನಿರ್ಮಾಣವಾಗುವುದನ್ನು ಊಹಿಸಬಹುದು.

ನಗರದ ಹೃದಯ ಭಾಗದಲ್ಲಿನ ಮಾರಿಕಾಂಬಾ ದೇವಾಲಯಗಳೆರಡರ ಆಜುಬಾಜಲ್ಲಿ ಹೆಚ್ಚು ಸ್ಥಳಾವಕಾಶವಿಲ್ಲ. ಈ ಇಕ್ಕಟ್ಟಿನಲ್ಲಿಯೇ ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿಗಳು ನಡೆಯುವುದು ಕೂಡ ಸಂಪ್ರದಾಯವೇ ಆಗಿದೆ. ಬೇರೆಲ್ಲ ಸಂದರ್ಭಗಳಲ್ಲಿ ಜನ ಈ ಕಿಷ್ಕಿಂಧೆಗೆ ಕಿರಿಕಿರಿಗೊಳ್ಳಬಹುದು, ಆಜುಬಾಜಿನ ಅಂಗಡಿಯವರು ವ್ಯಾಪಾರಕ್ಕೆ ಕಸಿವಿಸಿಯಾಗುವ, ಧಕ್ಕೆಯಾಗುವ ಕುರಿತಾಗಿ ಅಸಮಾಧಾನಗೊಳ್ಳಬಹುದು. ಆದರೆ ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಮಾತ್ರ ಅವರೆಲ್ಲರು ಇವನ್ನೆಲ್ಲ ಮರೆತು ಖುಷಿಯಿಂದ ಪಾಲ್ಗೊಳ್ಳುವಂತಾಗುವುದು ವಿಶೇಷವೇ ಸರಿ.

ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಗಾಂಧಿ ಮೈದಾನದಲ್ಲಿ:
ಪ್ರತಿ ಬಾರಿ ಮಾರಿಕಾಂಬಾ ಗಂಡನ ಮನೆ ದೇವಾಲಯದ ಬಲ ಪಕ್ಕದ ರಸ್ತೆಯಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕಳೆದ ಬಾರಿ ಇದನ್ನು ಅಶೋಕ ರಸ್ತೆಯ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಇದು ಒಂದು ರೀತಿಯಲ್ಲಿ ಜಾತ್ರೆಯಿಂದ ಹೊರಗೆ ಎಂಬ ಭಾವ ಮೂಡಲು ಕಾರಣವಾಗಿತ್ತು. ಶಾಶ್ವತವಾದ ಛಾವಣಿ ನಿರ್ಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಗಾಂಧಿ ಮೈದಾನದಲ್ಲಿ ಈ ವರ್ಷ ಅಮ್ಯೂಸ್‌ಮೆಂಟ್ ಪಾರ್ಕ್ ರೂಪಿಸಲು ಅವಕಾಶವಿಲ್ಲ. ಇದರಿಂದ ಇನ್ನೊಂದು ಅನುಕೂಲ ಏರ್ಪಟ್ಟಿದೆ. ಈ ಬಾರಿಯ ಮಾರಿಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ಜಾತ್ರೆಯ ಗೌಜಿನ ಜೊತೆಗೆ ಸಾಂಸ್ಕೃತಿಕ ಕಲರವವೂ ನಡೆಯುವುದರಿಂದ ಹಾಗೂ ಇದರ ಪಕ್ಕದಲ್ಲಿಯೇ ಆಹಾರ ಮೇಳವನ್ನೂ ಹಮ್ಮಿಕೊಂಡಿರುವುದರಿಂದ ಜಾತ್ರೆಗೆ ಹೊಸದಾದ ಮುಖ ಬಂದಂತಾಗಲಿದೆ.

ನೆಹರೂ ಮೈದಾನಕ್ಕೆ ಅಮ್ಯೂಸ್‌ಮೆಂಟ್ ಪಾರ್ಕ್:
ಜಾತ್ರೆಯ ಸಂದರ್ಭದಲ್ಲಿ ಮಾತ್ರ ಗಾಂಧಿ ಮೈದಾನದ ಸ್ವರೂಪವನ್ನೇ ಬದಲಿಸುತ್ತಿದ್ದ ಅಮ್ಯೂಸ್‌ಮೆಂಟ್ ಪಾರ್ಕ್ ಈ ಬಾರಿ ನೆಹರೂ ಮೈದಾನಕ್ಕೆ ಪಲ್ಲಟಗೊಂಡಿದೆ. ಸ್ಥಳಾವಕಾಶದ ದೃಷ್ಟಿಯಿಂದ ಬೃಹತ್ತಾದ ನೆಹರೂ ಮೈದಾನ ಹೆಚ್ಚು ಹೆಚ್ಚು ಮನರಂಜನಾ ಪರಿಕರಗಳನ್ನು ಅಳವಡಿಸುವುದಕ್ಕೆ ತೆರೆದುಕೊಂಡಂತಾಗಿದೆ. ಈ ಮೊದಲು ನೆಹರೂ ಮೈದಾನವೆಂಬುದು ಜಾತ್ರಾ ಸಂದರ್ಭದ ಯಕ್ಷಗಾನ ಪ್ರದರ್ಶನಗಳ ಜಾಗವಾಗಿತ್ತು. ಕಳೆದ ಬಾರಿ ವಾಹನ ನಿಲುಗಡೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಎಲ್ಲ ಧರ್ಮೀಯರಿಗೂ ಅವಕಾಶ:
ಜಾತ್ರೆಗಳ ಸಂದರ್ಭದಲ್ಲಿ ನಿರ್ದಿಷ್ಟ ಕೋಮಿನ ಜನರ ಅಂಗಡಿ ಮುಗ್ಗಟ್ಟುಗಳಿಗೆ ಅವಕಾಶ ಕೊಡಬಾರದು ಎಂಬ ಕೂಗು ಕೇಳುತ್ತದೆ. ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲೂ ಅಂತದೊಂದು ಹುಯಿಲು ಕೇಳಿಸಿತ್ತು. ಆದರೆ ಮಾರಿಕಾಂಬೆಯನ್ನು ನಗರದ ಗ್ರಾಮ ದೇವತೆಯಾಗಿ ಪರಿಗಣಿಸುವುದರಿಂದ ಇಲ್ಲಿ ಎಲ್ಲ ಧರ್ಮೀಯರೂ ಪಾಲ್ಗೊಳ್ಳುವುದರಿಂದ ಅಂತಹ ಯಾವುದೇ ನಿರ್ಬಂಧಗಳು ಸಮ್ಮತವಲ್ಲ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಈ ಮುನ್ನವೇ ಹೇಳಿದ್ದರು. ಮಾರಿಕಾಂಬಾ ಜಾತ್ರಾ ವ್ಯವಸ್ಥಾಪಕ ಸಮಿತಿ ಕೂಡ ಆ ಮಾತು ಹೇಳಿದೆ. ಹಾಗಾಗಿ ಸಾಗರದ ಮಾರಿಜಾತ್ರೆ ಸರ್ವಜನರ ಜಾತ್ರೆಯಾಗಿ ದಾಖಲಾಗಲಿದೆ.

ಪಾರ್ಕಿಂಗ್ ಸಮಸ್ಯೆಗೆ ಎಲ್ಲಿದೆ ಉತ್ತರ?
ವಾಹನಗಳ ಸಂಖ್ಯೆ ಹಲವು ಪಟ್ಟು ಏರಿರುವುದು ಹಾಗೂ ಸಾರ್ವಜನಿಕ ಸಂಪರ್ಕ ವ್ಯವಸ್ಥೆಗಳಾದ ಬಸ್ ಸೌಲಭ್ಯ ಕೊರೊನಾ ನಂತರ ಸಾಗರದ ಗ್ರಾಮೀಣ ಭಾಗದಲ್ಲಿ ಸಂಪೂರ್ಣವಾಗಿ ಕುಸಿದಿರುವುದು, ಜಾತ್ರಾ ವಿಶೇಷ ಬಸ್‌ಗಳನ್ನು ಜಾತ್ರೆಗೆ ಮೂರು ದಿನ ಮೊದಲೇ ಹೊರಡಿಸಿ ಜನರಿಗೆ ವಿಶ್ವಾಸ ತರದ ಕೆಲಸ ಆಗದಿರುವುದರಿಂದ ಪ್ರತಿ ದಿನ ಸಂಜೆಯಿಂದ ತಡರಾತ್ರಿಯವರೆಗೆ ಸಾಗರದಲ್ಲಿ ಟ್ರಾಫಿಕ್ ಜ್ಯಾಮ್ ಸಹಜ ಎಂಬಂತಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಪಾರ್ಕಿಂಗ್ ಸಮಸ್ಯೆ ನಮ್ಮದಲ್ಲ ಎಂಬ ಭಾವ ಮಾರಿಕಾಂಬಾ ಜಾತ್ರಾ ವ್ಯವಸ್ಥಾಪಕ ಸಮಿತಿಯಲ್ಲಿದೆ. ನೆಹರೂ ಮೈದಾನ ಪಾರ್ಕಿಂಗ್‌ಗೆ ಲಭ್ಯವಿಲ್ಲ. ನಗರದ ಹೊರಗಡೆಯೇ ವಾಹನ ನಿಲ್ಲಿಸಿ ಜಾತ್ರೆಯೊಳಗೆ ಬರುವವರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡುವಂತಾಗಿದ್ದರೆ, ಸಾಗರದ ಎಲ್ಲ ಬಡಾವಣೆಗಳಿಗೆ ನಿರಂತರವಾಗಿ ಬಸ್ ಸಂಚಾರದ ವ್ಯವಸ್ಥೆ ಮಾಡಿದ್ದರೆ ಸಮಸ್ಯೆಯನ್ನು ಬಗೆಹರಿಸಬಹುದಿತ್ತು ಎಂಬ ಅಭಿಪ್ರಾಯವೂ ಇದೆ.

50 ರೂ. ಷರತ್ತು ಕೆಲಸ ಮಾಡೀತೇ?
ಶಾಸಕ ಹಾಲಪ್ಪ ಅವರ ಒತ್ತಡದಿಂದಾಗಿ ಮಾರಿಕಾಂಬಾ ಜಾತ್ರಾ ಅಮ್ಯೂಸ್‌ಮೆಂಟ್ ಪಾರ್ಕ್‌ನ ಎಲ್ಲ ಆಟಗಳ ಪ್ರವೇಶ ಶುಲ್ಕ ಗರಿಷ್ಠ 50 ರೂ. ಆಗಿರಲಿದೆ. 50 ರೂ.ಗೆ ಹೆಚ್ಚುವರಿಯಾಗಿ ಜಿಎಸ್‌ಟಿ ಸೇರುತ್ತದೆ, ಅದರಿಂದ ಶುಲ್ಕ 70 ರಿಂದ 80 ರೂ. ಆಗಬಹುದು ಎಂಬುದನ್ನು ಖಡಾಖಂಡಿತವಾಗಿ ನಿರಾಕರಿಸಿರುವ ಮಾರಿಕಾಂಬಾ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಭಟ್, 50 ರೂ.ಗಳ ಒಳಗೇ ಯಾವುದೇ ರೀತಿಯ ತೆರಿಗೆಯಿದ್ದರೂ ಸೇರಿರುತ್ತದೆ. ಯಾವುದೇ ರೀತಿಯಲ್ಲಿ 50 ರೂ.ಗಿಂತ ಹೆಚ್ಚು ಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

– ಮಾ.ವೆಂ.ಸ.ಪ್ರಸಾದ್

ಟಾಪ್ ನ್ಯೂಸ್

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.