ರೋಷಾವೇಶ‌ಕ್ಕೆ ಕೈ ತತ್ತರ

ಸಿದ್ದರಾಮಯ್ಯ ದುರಂಹಕಾರಿ, ವೇಣುಗೋಪಾಲ್‌ ಬಫ‌ೂನ್‌ ಎಂದ ರೋಷನ್‌ ಬೇಗ್‌

Team Udayavani, May 22, 2019, 6:00 AM IST

z-38

ಬೆಂಗಳೂರು: ಲೋಕಸಭೆ ಚುನಾವಣೆ ಫ‌ಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್‌ನ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ವಿರುದ್ಧ ಮಾಜಿ ಸಚಿವ ರೋಷನ್‌ ಬೇಗ್‌ ಬಹಿರಂಗ ಸಮರ ಸಾರಿದ್ದು, ಈ ವಿದ್ಯಮಾನಗಳು ಮೈತ್ರಿ ಸರಕಾರದಲ್ಲೂ ತಳಮಳ ಸೃಷ್ಟಿಸಿವೆ.

ರೋಷನ್‌ಬೇಗ್‌ ಸತ್ಯ ಹೇಳಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಹೇಳಿದರೆ, ಇದು ಕೇವಲ ಟೀಸರ್‌, ಇನ್ನೂ ಎರಡು ಮೂರು ಸಿನೆಮಾ ಬರುತ್ತದೆ. ರೋಷನ್‌ಬೇಗ್‌ ಅವರು ಹೇಳಿರುವುದರಲ್ಲಿ ಏನೂ ಅತಿಶಯೋಕ್ತಿ ಇಲ್ಲ. ಮೇ 23ರ ಅನಂತರ ಇನ್ನಷ್ಟು ನಾಯಕರು ಹೊರಬರುತ್ತಾರೆ ಎಂದು ಬಿಜೆಪಿಯ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಹೇಳುವ ಮೂಲಕ ಉರಿಯವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ತನ್ನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ರೋಷನ್‌ ಬೇಗ್‌, ಸಿದ್ದರಾಮಯ್ಯ ಆ್ಯರೋಗೆಂಟ್‌, ದಿನೇಶ್‌ ಗುಂಡೂರಾವ್‌ ಪ್ಲಾಪ್‌ ಶೋ ಅಧ್ಯಕ್ಷ, ವೇಣುಗೋಪಾಲ್‌ ಬಫ‌ೂನ್‌ ಎಂದು ಹೀಯಾಳಿ ಸಿದ್ದು, ಫ‌ಲಿತಾಂಶದಲ್ಲಿ ವ್ಯತ್ಯಾಸವಾದರೆ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮತದಾನೋತ್ತರ ಸಮೀಕ್ಷೆ ನಿರೀಕ್ಷೆ ಮಾಡಿದ್ದೆ. ಅಲ್ಪಸಂಖ್ಯಾಕರು ಅನಿವಾರ್ಯವಾದರೆ ಬಿಜೆಪಿ ಜತೆ ಕೈಜೋಡಿಸಬೇಕು. ನಾನೂ ಪಕ್ಷ ಬಿಡಲು ಹಿಂಜರಿಯುವುದಿಲ್ಲ ಎಂದು ಹೇಳಿದರು. ಈ ಹೇಳಿಕೆ ಕಾಂಗ್ರೆಸ್‌ನಲ್ಲಿ ಕಿಡಿ ಹೊತ್ತಿಸಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಜಮೀರ್‌ ಅಹ್ಮದ್‌, ವಿಧಾನ ಪರಿಷತ್‌ ಸದಸ್ಯ ಅರ್ಷದ್‌ ರಿಜ್ವಾನ್‌ ರೋಷನ್‌ ಬೇಗ್‌ ವಿರುದ್ಧ ಮುಗಿಬಿದ್ದಿದ್ದಾರೆ.

ಕೋಳಿ ಹುಟ್ಟುವ ಮುನ್ನ ರೋಷನ್‌ ಬೇಗ್‌ ಕಬಾಬ್‌ ಮಾಡಲು ಮುಂದಾಗಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಪಡೆದು ಮಜಾ ಮಾಡುವಾಗ ಕಾಂಗ್ರೆಸ್‌ ಒಳ್ಳೆಯದಿತ್ತಾ, ಎಂಪಿ ಟಿಕೆಟ್‌ ಕೊಡಲಿಲ್ಲ ಎಂದು ಕಾಂಗ್ರೆಸ್‌ ಹಾಗೂ ನಾಯಕರು ಕೆಟ್ಟವರಾದರಾ ಎಂದು ಸಚಿವ ಜಮೀರ್‌ ಅಹ್ಮದ್‌ ಪ್ರಶ್ನಿಸಿದರೆ, ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಲಿ ಎಂದು ಅರ್ಷದ್‌ ರಿಜ್ವಾನ್‌ ಸವಾಲು ಹಾಕಿದ್ದಾರೆ.

ಇದರ ಬೆನ್ನಲ್ಲೇ ಕೆಪಿಸಿಸಿ ನೋಟಿಸ್‌ ಜಾರಿ ಮಾಡಿದ್ದು, ನಾನು ನೋಟಿಸ್‌ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರೋಷನ್‌ ಬೇಗ್‌ ಹೇಳಿದ್ದು, ಆಪರೇಷನ್‌ ಕಮಲದಡಿ ಅವರು ಬಿಜೆಪಿಗೆ ಸೇರ್ಪಡೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ರೋಷನ್‌ ಬೇಗ್‌ ಆಕ್ರೋಶದ ಹಿಂದೆ ಕೆಲವು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರ ಒತ್ತಾಸೆಯೂ ಇದ್ದು, ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಟಾರ್ಗೆಟ್‌ ಆಗಿದ್ದಾರೆ ಎನ್ನ ಲಾ ಗಿದೆ. ಈ ಮೂಲಕ ದಿನೇಶ್‌ ಗುಂಡೂರಾವ್‌ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕುತ್ತು ತರುವ ತಂತ್ರವೂ ಇದೆ ಎನ್ನಲಾಗಿದೆ.

ಯಾರ್ಯಾರು ಏನೆಂದರು?
ರೋಷನ್‌ ಬೇಗ್‌ ವಾಗ್ಧಾಳಿ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ಮಾಡಿದರೆ, ಅದಕ್ಕೆ ಸಿದ್ದರಾಮಯ್ಯ ಅವರ ದುರಹಂಕಾರವೇ ಕಾರಣ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಬಫ‌ೂನ್‌ ಇದ್ದಹಾಗೆ ಅವರಿಗೆ ಏನೂ ಗೊತ್ತಿಲ್ಲ. ರಾಜ್ಯದಲ್ಲಿ ಪಕ್ಷದ ಹೀನಾಯ ಸೋಲಿಗೆ ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಅವರೇ ಕಾರಣ. ಮಾನ ಮರ್ಯಾದೆ ಇದ್ದರೆ, ಇಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಲೋಕಸಭೆ ಚುನಾವಣೆಯಲ್ಲಿ ಅಲ್ಪ ಸಂಖ್ಯಾಕರಿಗೆ ಟಿಕೆಟ್‌ ನೀಡುವಲ್ಲಿಯೂ ಅನ್ಯಾಯ ಮಾಡಲಾಯಿತು. ಪ್ರತಿ ಬಾರಿಯೂ ಮೂವರು ಅಲ್ಪ ಸಂಖ್ಯಾಕರಿಗೆ ಟಿಕೆಟ್‌ ನೀಡುತ್ತಿದ್ದರು. ಈ ಬಾರಿ ಸಮುದಾಯವನ್ನು ಅವಗಣಿಸಲಾಯಿತು. ಕಾಂಗ್ರೆಸ್‌ ಪಕ್ಷ ಮುಸ್ಲಿಂ ಸಮುದಾಯವನ್ನು ಓಟ್‌ ಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿದೆ. ನಾನೂ ಸಹ ಯಾವುದೇ ನಿರ್ಧಾರ ಕೈಗೊಳ್ಳಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಬೇಗ್‌ ಸ್ಪಷ್ಟವಾಗಿ ಹೇಳಿದರು.

ಜಮೀರ್‌ ಆಕ್ರೋಶ
ರೋಷನ್‌ ಬೇಗ್‌ ಸಚಿವರಾಗಿ ಅಧಿಕಾರದಲ್ಲಿದ್ದು ಮಜಾ ಮಾಡುವ ಕಾಂಗ್ರೆಸ್‌ ಚೆನ್ನಾಗಿತ್ತು. ಎಂಪಿ ಎಲೆಕ್ಷನ್‌ನಲ್ಲಿ ಟಿಕೆಟ್‌ ನೀಡಲಿಲ್ಲ ಎಂದು ಕಾಂಗ್ರೆಸ್‌ ಚೆನ್ನಾಗಿಲ್ಲವಾ ಎಂದು ಸಚಿವ ಜಮೀರ್‌ ಅಹ್ಮದ್‌ ವಾಗಾœಳಿ ನಡೆಸಿದರು. ರೋಷನ್‌ಬೇಗ್‌ ಅವರು ಎಲ್ಲಿಗೆ ಹೋಗುವುದಕ್ಕೂ ಸರ್ವ ಸ್ವತಂತ್ರರು. ಬಿಜೆಪಿ ಯವರೇ ನಮಗೆ ಅಲ್ಪ ಸಂಖ್ಯಾಕರು ಬೇಡ ಎಂದು ಹೇಳಿದ್ದಾರೆ. ಅದೇ ಪಕ್ಷಕ್ಕೆ ರೋಷನ್‌ ಬೇಗ್‌ ಹೋಗ್ತಾರಾ ಎಂದು ಪ್ರಶ್ನಿಸಿದರು.

ದಿನೇಶ್‌ ಗುಂಡೂರಾವ್‌ ಗರಂ
ಲೋಕಸಭೆ ಚುನಾವಣೆ ಫ‌ಲಿತಾಂಶ ಹೊರ ಬರುವ ಮೊದಲೇ ಮತಗಟ್ಟೆ ಆಧಾರದಲ್ಲಿ ರೋಷನ್‌ ಬೇಗ್‌ ಹೇಳಿಕೆ ನೀಡಿರುವುದು ಕೋಳಿ ಹುಟ್ಟುವ ಮೊದಲೇ ಕಬಾಬ್‌ ಮಾಡಲು ಹೊರಟಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿರುಗೇಟು ನೀಡಿದ್ದಾರೆ. ರೊಷನ್‌ಬೇಗ್‌ ಪಕ್ಷದ ಹಿರಿಯ ನಾಯಕ ರಾಗಿದ್ದು, ಅವರು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ. ಒಬ್ಬ ಪ್ರಬುದ್ಧ, ಪ್ರಾಮಾ ಣಿಕ, ಪಕ್ಷ ನಿಷ್ಠೆ ಇರುವ ರಾಜ ಕಾರಣಿ ಈ ರೀತಿಯ ಹೇಳಿಕೆ ನೀಡುವುದಿಲ್ಲ. ಅವರ ಉದ್ದೇಶ ಏನು ಎಂದು ಗೊತ್ತಿಲ್ಲ. ನಾಗರಿಕತೆ ಇರುವ ಯಾವ ರಾಜ ಕಾರಣಿಯೂ ಈ ರೀತಿಯ ಹೇಳಿಕೆ ನೀಡುವುದಿಲ್ಲ. ಅವರು ಎಲ್ಲ ರೀತಿಯ ಅಧಿಕಾರ ನೋಡಿ, ಅನುಭವಿಸಿದವರು. ಈ ರೀತಿಯ ಕೆಳ ಮಟ್ಟಕ್ಕೆ ಇಳಿಯುತ್ತಾರೆ ಎಂದು ಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಅವರು ಪಕ್ಷ ಬಿಡುವ ಬಗ್ಗೆ ನನಗೆ ಗೊತ್ತಿಲ್ಲ. ಹೋಗುವವರನ್ನು ಯಾರೂ ಕೂಡಿ ಹಾಕಿ ಕಟ್ಟಿಹಾಕಿಕೊಂಡು ಕೂಡಲು ಆಗುವುದಿಲ್ಲ. ಅವರ ಹೇಳಿಕೆಯಿಂದ ನಾನು ವಿಚಲಿತನಾಗಿಲ್ಲ ಎಂದು ದಿನೇಶ್‌ ತಿಳಿಸಿದ್ದಾರೆ.

ಹೊಟೇಲ್‌ನಲ್ಲಿ ಸಭೆ
ರೋಷನ್‌ ಬೇಗ್‌ ಪತ್ರಿಕಾ ಗೋಷ್ಠಿಯ ಬಳಿಕ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಶುರು ವಾಗಿದೆ. ಮಂಗಳ ವಾರ ರಾತ್ರಿ ಖಾಸಗಿ ಹೊಟೇಲ್‌ನಲ್ಲಿ ಸಿಎಂ ಕುಮಾರ ಸ್ವಾಮಿ ಒಳಗೊಂಡಂತೆ ದೋಸ್ತಿ ಪಕ್ಷಗಳ ಪ್ರಮುಖರ ಸಭೆ ನಡೆದಿದ್ದು, ಮುಂದಿನ ನಡೆಯ ಕುರಿತು ಚರ್ಚಿಸಲಾಯಿತು.

ಕಾಂಗ್ರೆಸ್‌ನಲ್ಲಿ ರಿಜ್ವಾನ್‌ಗೆ ಟಿಕೆಟ್‌ ನೀಡಿದ್ದೇವೆ. ಜಮೀರ್‌ಗೆ ಮಂತ್ರಿ ಸ್ಥಾನ, ನಾಸೀರ್‌ ಹುಸೇನ್‌ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೇವೆ. ಸಿ.ಎಂ. ಇಬ್ರಾಹಿಂಗೆ ವಿಧಾನ ಪರಿಷತ್‌ ಸ್ಥಾನ ನೀಡಲಾಗಿದೆ. ಕೆ.ಜೆ. ಜಾರ್ಜ್‌ಗೆ ಮಂತ್ರಿ ಸ್ಥಾನ ನೀಡಲಾಗಿದೆ. ಅವರ ಪ್ರಕಾರ ಇದೆಲ್ಲ ಅಲ್ಪ ಸಂಖ್ಯಾಕರಿಗೆ ಅನ್ಯಾಯ ಮಾಡಿದ ಹಾಗೆಯೇ ?
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ರೋಷನ್‌ ಬೇಗ್‌ ಹೇಳಿರುವುದರಲ್ಲಿ ಸತ್ಯವಿದೆ. ಕೊನೆಗಾಲದಲ್ಲಾದರೂ ರೋಷನ್‌ ಬೇಗ್‌ಗೆ ಸತ್ಯ ಗೊತ್ತಾಯ್ತಲ್ಲ. ಸತ್ಯ ಹೇಳಿದ್ದಕ್ಕೆ ರೋಷನ್‌ ಬೇಗ್‌ಗೆ ಧನ್ಯವಾದ.
– ಎಚ್‌. ವಿಶ್ವನಾಥ್‌

ಟಾಪ್ ನ್ಯೂಸ್

4bommai

ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರು – ಬೊಮ್ಮಾಯಿ

ಭಾರತದಲ್ಲಿ 8,306 ಕೋವಿಡ್ ಪ್ರಕರಣ ಪತ್ತೆ, 552 ದಿನಗಳಲ್ಲಿ ಸಕ್ರಿಯ ಪ್ರಕರಣ ಭಾರೀ ಇಳಿಕೆ

ಭಾರತದಲ್ಲಿ 8,306 ಕೋವಿಡ್ ಪ್ರಕರಣ ಪತ್ತೆ, 552 ದಿನಗಳಲ್ಲಿ ಸಕ್ರಿಯ ಪ್ರಕರಣ ಭಾರೀ ಇಳಿಕೆ

ಜಯಂತ್ ದಾಳಿಗೆ ಆಟ ಮುಗಿಸಿದ ನ್ಯೂಜಿಲ್ಯಾಂಡ್: 1-0 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

ಜಯಂತ್ ದಾಳಿಗೆ ಆಟ ಮುಗಿಸಿದ ನ್ಯೂಜಿಲ್ಯಾಂಡ್: 1-0 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

ಚಿಕ್ಕಮಗಳೂರಿನ ಶಾಲೆಯಲ್ಲಿ ಹೆಚ್ಚಿದ ಕೋವಿಡ್ ಆತಂಕ: ನಾಲ್ಕೇ ದಿನದಲ್ಲಿ 107 ಪ್ರಕರಣಗಳು ಪತ್ತೆ!

ಚಿಕ್ಕಮಗಳೂರಿನ ಶಾಲೆಯಲ್ಲಿ ಹೆಚ್ಚಿದ ಕೋವಿಡ್ ಆತಂಕ: ನಾಲ್ಕೇ ದಿನದಲ್ಲಿ107 ಪ್ರಕರಣಗಳು ಪತ್ತೆ!

1cow

ವಾಹನಕ್ಕೆ ಹಗ್ಗ ಕಟ್ಟಿ ಮೃತ ಗೋವುಗಳ ಸಾಗಾಟ: ಆಕ್ರೋಶ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳು

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳು

ಇಂದು ಲಿಂಗದೀಕ್ಷೆ ಪಡೆಯುತ್ತಿರುವ ಕ್ರೈಸ್ತ ಸಾಫ್ಟ್ ವೇರ್‌ ಉದ್ಯಮಿ

ಇಂದು ಲಿಂಗದೀಕ್ಷೆ ಪಡೆಯುತ್ತಿರುವ ಕ್ರೈಸ್ತ ಸಾಫ್ಟ್ ವೇರ್‌ ಉದ್ಯಮಿ

ಕೃಷಿಯಲ್ಲಿ ಯಶಸ್ಸು ಸುಲಭದ ಕಾರ್ಯವಲ್ಲ: ಪೇಜಾವರ ಶ್ರೀ

ಕೃಷಿಯಲ್ಲಿ ಯಶಸ್ಸು ಸುಲಭದ ಕಾರ್ಯವಲ್ಲ: ಪೇಜಾವರ ಶ್ರೀ

ಯಕ್ಷಗಾನ ಪದ್ಯದೊಂದಿಗೆ‌ ಕವಿಗಳ ಹೆಸರು ಉಳಿಯಬೇಕು : ಸ್ವರ್ಣವಲ್ಲೀ ಶ್ರೀ

ಶಿರಸಿ : ಸ್ವರ್ಣವಲ್ಲಿ ಶ್ರೀಗಳಿಂದ ಮಾಳವಿಕಾ ಪರಿಣಯ ಯಕ್ಷಗಾನ ಕೃತಿ ಬಿಡುಗಡೆ

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

4bommai

ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರು – ಬೊಮ್ಮಾಯಿ

ಭಾರತದಲ್ಲಿ 8,306 ಕೋವಿಡ್ ಪ್ರಕರಣ ಪತ್ತೆ, 552 ದಿನಗಳಲ್ಲಿ ಸಕ್ರಿಯ ಪ್ರಕರಣ ಭಾರೀ ಇಳಿಕೆ

ಭಾರತದಲ್ಲಿ 8,306 ಕೋವಿಡ್ ಪ್ರಕರಣ ಪತ್ತೆ, 552 ದಿನಗಳಲ್ಲಿ ಸಕ್ರಿಯ ಪ್ರಕರಣ ಭಾರೀ ಇಳಿಕೆ

3patila

ಪಾಟೀಲ ಗೆಲ್ಲಿಸಿ ಪಕ್ಷ ಬಲಪಡಿಸಲು ಶ್ರಮಿಸಿ: ಸಿದ್ದಾಜಿ

ಜಯಂತ್ ದಾಳಿಗೆ ಆಟ ಮುಗಿಸಿದ ನ್ಯೂಜಿಲ್ಯಾಂಡ್: 1-0 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

ಜಯಂತ್ ದಾಳಿಗೆ ಆಟ ಮುಗಿಸಿದ ನ್ಯೂಜಿಲ್ಯಾಂಡ್: 1-0 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

2meet

ದನಗಳನ್ನು ಕದ್ದು ಮಾಂಸ ಮಾರುತ್ತಿದ್ದ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.